![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 13, 2020, 8:41 AM IST
ಹುಣಸೂರು: ತಮ್ಮ ಹುಟ್ಟುಹಬ್ಬದ ದಿನದಂದೇ ಹುಣಸೂರನ್ನು ದೇವರಾಜ ಅರಸು ಜಿಲ್ಲೆಯಾಗಿಸುವ ಸಂಕಲ್ಪ ತೊಟ್ಟಿದ್ದೇನೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಹೇಳಿದರು. ತಮಗೆ ರಾಜಕೀಯ ಜನ್ಮ ನೀಡಿದ ಗುರು ಡಿ.ದೇವರಾಜಅರಸರ ಪ್ರತಿಮೆಗೆ ತಮ್ಮ 73ನೇ ವರ್ಷದ ಜನ್ಮದಿನದ ಅಂಗವಾಗಿ ಪುಷ್ಪಾರ್ಚನೆ ಮಾಡಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವರಾಜ ರಸರು ದೇಶದಲ್ಲಿ ಕ್ರಾಂತಿ ಉಂಟು ಮಾಡಿದ ಮಹಾನ್ ಸಾಧಕ.
ಇಂತಹ ನಾಯಕನ ಹೆಸರಿನಲ್ಲಿ ಹುಣಸೂರನ್ನು ಕೇಂದ್ರವಾಗಿಸಿಕೊಂಡು ಜಿಲ್ಲೆಯನ್ನಾಗಿಸುವ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದ ನಂತರ ಉಪವಿಭಾಗದ ತಾಲೂಕುಗಳ ಶಾಸಕರು, ಸಂಸದರು, ವಿವಿಧ ಪಕ್ಷಗಳ ಮುಖಂಡರು, ಸ್ಥಳೀಯ-ಸಂಸ್ಥೆಗಳ ಪ್ರತಿನಿಧಿಗಳು, ತಜ್ಞರು, ಸಂಘ-ಸಂಸ್ಥೆಗಳ ಪ್ರಮುಖರ ಸಭೆ ನಡೆಸಿ, ಎಲ್ಲರ ವಿಶ್ವಾಸಗಳಿಸಿ, ಜಿಲ್ಲೆಯನ್ನಾಗಿಸುವ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಾಗುವುದು ಎಂದರು.
ಯಾರೂ ಮಾಲೀಕರಲ್ಲ: ಕ್ಷೇತ್ರದಲ್ಲಿ ಮತಪಡೆದವರು ಮಾಲೀಕರಲ್ಲ, ಜನಸೇವಕರು ಎಂಬುದನ್ನು ಯಾರೂ ಮರೆಯಬಾರದು. ಹುಂಡೇಕರ್ ಸಮಿತಿ ಮತ್ತು ನಂಜುಂಡಸ್ವಾಮಿ ವರದಿ ಪ್ರಕಾರ ಸಣ್ಣ ತಾಲೂಕು, ಜಿಲ್ಲೆಗಳಾದಲ್ಲಿ ಅಭಿವೃದಿಗೆ ಪೂರಕವಾಗಲಿದೆ ಎಂದಿದ್ದು, ಆಪ್ರಕಾರ ಹುಣಸೂರು ತಾಲೂಕಿನಲ್ಲಿ ಹನ ಗೋಡು, ಪಿರಿಯಾಪಟ್ಟಣ ತಾಲೂಕಲ್ಲಿ ಬೆಟ್ಟದಪುರವನ್ನು ಹೊಸ ತಾಲೂಕನ್ನಾಗಿಸಬಹು ದು.
ಸಾಕಷ್ಟು ಸಂಪನ್ಮೂಲ ಹೊಂದಿ ರುವ ಹುಣಸೂರು ಜಿಲ್ಲೆಗೆ ಯೋಗ್ಯ ಸ್ಥಳ ವಾಗಿದೆ. ಇದು ರಾಜ ಕೀಯಕ್ಕಾಗಿ ಅಲ್ಲ ಎಂಬುದನ್ನು ಎಲ್ಲರೂ ಅರಿಯಬೇಕು. ಉಪ ಚುನಾವಣೆ ವೇಳೆ ಸಿಎಂ ಯಡಿ ಯೂರಪ್ಪರಲ್ಲಿ ಜಿಲ್ಲಾ ಬೇಡಿಕೆಗೆ ಸಕಾ ರಾತ್ಮಕವಾಗಿ ಸ್ಪಂದಿಸಿದ್ದು, ರಾಜಕೀಯ ಒತ್ತಡ ಹೇರಿ ದೇವರಾಜ ಅರಸರ ಹೆಸರಿನ ಜಿಲ್ಲೆಯನ್ನಾಗಿಸಲು ಎಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕು ಎಂದರು.
ಅತ್ಯುತ್ತಮ ಸೇವೆ: ಹುಣಸೂರು ಬಿಜೆಪಿ ಘಟಕದ ಸಹಾಯವಾಣಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ದೆ. 150ಕ್ಕೂ ಹೆಚ್ಚು ಮಂದಿಗೆ ಔಷಧಿ, 5 ಸಾವಿರ ಕುಟುಂಬಗಳಿಗೆ ಪಡಿತರ ಕಿಟ್, ಲಕ್ಷಕ್ಕೂ ಹೆಚ್ಚು ಮಾಸ್ಕ್ಗಳ ನ್ನು ವಿತರಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಮಂತ್ರಿ ಎಂ.ಶಿವಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಮಹೇಂದ್ರಕುಮಾರ್ ಇದ್ದರು.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.