ಚಾಮರಾಜನಗರ ಹಸಿರು ವಲಯವಾಗಿಯೇ ಉಳಿದೀತೆ?
Team Udayavani, May 13, 2020, 9:42 AM IST
ಚಾಮರಾಜನಗರ: ಕೋವಿಡ್ 19 ಸೋಂಕಿನ ಒಂದೂ ಪ್ರಕರಣ ಇಲ್ಲದೇ ಹಸಿರು ವಲಯವೆಂಬ ಹೆಗ್ಗಳಿಕೆ ಪಡೆದಿರುವ ಜಿಲ್ಲೆ, ಇದನ್ನು ಮುಂದೆಯೂ ಕಾಪಾಡಿಕೊಂಡೀತೇ ಎಂಬ ಆತಂಕ ಜನರಲ್ಲಿ ಮೂಡಿದೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಕಾರ್ಮಿಕರು, ಜನರು ಬರಲಾರಂಭಿಸಿರುವುದು ಈ ಆತಂಕಕ್ಕೆ ಕಾರಣ.
ಜಿಲ್ಲೆಯಲ್ಲಿ ಆತಂಕ: ಲಾಕ್‌ಡೌನ್ ಸಮಯ ದಲ್ಲಿ ಶಿಸ್ತಿನಿಂದ ಕ್ರಮಗಳನ್ನು ಕೈಗೊಂಡ ಕಾರಣ, ಹೊರ ಜಿಲ್ಲೆಗಳಿಂದ, ರಾಜ್ಯಗಳಿಂದ ಸೋಂಕಿತರು ಜಿಲ್ಲೆಗೆ ಬರುವುದು ಸಾಧ್ಯ ವಾಗಿರಲಿಲ್ಲ. ಆದರೆ ಹಸಿರು ವಲಯ ವೆಂಬುದೇ ಈಗ ಆತಂಕಕ್ಕೆ ಕಾರಣವಾಗಿದೆ. ಹಸಿರು ವಲಯ ವೆಂಬ ಕಾರಣಕ್ಕೆ ಅನೇಕ ಸಡಿಲಿಕೆ ಸರ್ಕಾರ ಮಾಡುತ್ತಿರುವುದರಿಂದ ಇದುವರೆಗೂ ಹಸಿರಾಗಿದ್ದ ಜಿಲ್ಲೆ,
ಹಸಿರುತನ ಕಾಯ್ದುಕೊಳ್ಳಲು ಸಾಧ್ಯವೇ ಎಂಬ ಆತಂಕ ಎದುರಾಗಿದೆ. ಲಾಕ್‌ಡೌನ್ ಇರುವವರೆಗೂ ರಾಜ್ಯದ 10 ಜಿಲ್ಲೆಗಳು ಒಂದು ಸೋಂಕು ಇಲ್ಲದೇ ಹಸಿರು ವಲಯಗಳಾಗೇ ಉಳಿದಿದ್ದವು. ಲಾಕ್‌ಡೌನ್ ಸಡಿಲಿಕೆಯಾಗಿ ಹೊರ ರಾಜ್ಯ, ಹೊರ ರಾಜ್ಯಗಳಿಂದ ಜನರು ಮರಳಲಾರಂಭಿಸಿದ ಬಳಿಕ ಕೆಲ ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳು ವರದಿಯಾಗುತ್ತಲೇ ಇವೆ. ಹಸಿರು ಜಿಲ್ಲೆಗಳು ಕಿತ್ತಳೆ, ಕೆಂಪು ವಲಯಗಳಾಗುತ್ತಿವೆ.
ಅನುಮಾನದಿಂದ ಕಾಣದಿರಿ: ಜಿಲ್ಲೆಗೆ ಮರಳು ತ್ತಿರುವ ಮಂದಿಯನ್ನು ಪೂರ್ಣ ತಪಾ ಸಣೆಗೆ ಒಳಪಡಿಸಿಯೇ ಒಳ ಬಿಡು ತ್ತಿದ್ದರೂ, ಜಿಲ್ಲೆಯ ಜನರು ಬೇರೆ ಕಡೆಯಿಂದ ಬಂದವರನ್ನುಅನುಮಾನದಿಂದ ನೋಡು ವಂತಾಗಿದೆ. ವಾಹನಗಳಲ್ಲಿ ಪಾಸ್‌ಗಳನ್ನು ಹಾಕಿಕೊಂಡು ಬೇರೆ ಬೇರೆ ಜಿಲ್ಲೆಗಳಿಂದ ಜನರು ನಗರಕ್ಕೆ ಬರುತ್ತಿದ್ದಾರೆ. ಈ ಜನರು ಸೋಂಕು ಹೊತ್ತು ತಂದರೆ ಎಂಬ ಆತಂಕ ಇದಕ್ಕೆ ಕಾರಣ.
ನಮ್ಮ ಜಿಲ್ಲೆಯಿಂದ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿರುವ ಕಾರ್ಮಿಕರಲ್ಲಿ ಅಂದಾಜು 3 ಸಾವಿರ ಜನ ವಾಪಸ್ ಬರಬಹುದೆಂದು ಜಿಲ್ಲಾಡಳಿತ ನಿರೀಕ್ಷೆ ಹೊಂದಿದೆ. ಈಗಾಗಲೇ ಪರ ಜಿಲ್ಲೆ ಗಳಿಂದ 1787 ಕಾರ್ಮಿಕರು ಜಿಲ್ಲೆಗೆ ಮರಳಿದ್ದಾರೆ. ಹನೂರು ತಾಲೂಕಿನ 826, ಕೊಳ್ಳೇಗಾಲತಾಲೂಕಿನ 185, ಯಳಂದೂರು ತಾಲೂಕಿನ 96, ಚಾಮರಾಜನಗರ ತಾಲೂಕಿನ 481 ಮತ್ತು ಗುಂಡ್ಲುಪೇಟೆ ತಾಲೂಕಿನ 199 ಮಂದಿ ಇದ್ದಾರೆ.
ಅಂತರ ಕಾಯ್ದುಕೊಳ್ಳದೆ ನಿರ್ಲಕ್ಷ್ಯ: ಲಾಕ್ ಡೌನ್ ಇಲ್ಲದಿದ್ದರೂ, ಸೋಂಕು ಹರಡದಂತೆ ತಡೆಯಲು ಪರಿಣಾಮಕಾರಿ ಮಾರ್ಗವೆಂದರೆ ಭೌತಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸೋಪಿನಲ್ಲಿ ಕೈತೊಳೆಯುವುದು. ಆದರೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಇದು ಸೋಂಕು ಹರಡುವ ಆತಂಕ ಮೂಡಿಸಿದೆ.
ಜಿಲ್ಲೆ ಕೋವಿಡ್ 19 ವಿಷಯದಲ್ಲಿ ಹಸಿರು ವಲಯದಲ್ಲಿದೆ. ಹೊರ ರಾಜ್ಯದ ಕೆಂಪು ಮತ್ತು ಕಿತ್ತಳೆ ವಲಯದಲ್ಲಿರುವ ವಲಸೆ ಕಾರ್ಮಿಕರು ಬರಲು ಅನುಮತಿ ನೀಡುತ್ತಿಲ್ಲ. ಹೊರ ಜಿಲ್ಲೆಯಿಂದ ಬರುವ ಕಾರ್ಮಿಕರನ್ನು ಹಾಸ್ಟೆಲ್‌ಗಳಲ್ಲಿರಿಸಿ ಟೆಸ್ಟ್ ಮಾಡಿದ ಬಳಿಕವೇ ಊರಿಗೆ ಕಳುಹಿಸಿ ಕೊಡಲಾಗುವುದು. ಹೊರ ರಾಜ್ಯದವರನ್ನು ಸ್ಕ್ರೀನಿಂಗ್ ಮಾಡಿ 14 ದಿನ ಕ್ವಾರಂಟೈನ್ ಮಾಡಲಾಗುತ್ತದೆ.
-ಡಾ.ರವಿ, ಜಿಲ್ಲಾಧಿಕಾರಿ
ಚೆಕ್ ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಾಗಿ ಪ್ರತಿಯೊಂದು ಕಾರು ಬೈಕುಗಳನ್ನೂ ತಪಾಸಣೆ ನಡೆಸಲಾಗುತ್ತಿದೆ. ಹೊರ ಜಿಲ್ಲೆಯಿಂದ ಅಂತಾರಾಜ್ಯದಿಂದ ಬರುವ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗುತ್ತಿದೆ.
-ನಿಖೀತಾ, ಉಪ ವಿಭಾಗಾಧಿಕಾರಿ
* ಕೆ.ಎಸ್.ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.