ಆ ಸಾಲಿನಲ್ಲಿ ಅವನೂ ನಿಂತಿರಬಹುದೇ?


Team Udayavani, May 13, 2020, 12:38 PM IST

ಆ ಸಾಲಿನಲ್ಲಿ ಅವನೂ ನಿಂತಿರಬಹುದೇ?

ಸಾಂದರ್ಭಿಕ ಚಿತ್ರ

“ಒಂದು ವಾರದಿಂದ ಎಣ್ಣೆ ಅಂಗಡಿಗಳೆಲ್ಲ ಬಂದ್‌ ಆಗಿದ್ಯಲ್ಲ ಅಮ್ಮ… ನಮ್ಮನೆಯೋನು ಗಪ್‌ಚುಪ್‌. ದಿನಾ ಬೆಳಗೆದ್ದು, ಏನೋ ಕಳೆದುಕೊಂಡವನ ಹಾಗೆ ಕೂತಿರ್ತಾನೆ. ಮೊದಲಿನ ಹಾರಾಟ, ತೂರಾಟ ಎಲ್ಲ ಬಂದ್‌ ಆಗಿದೆ. ಹೆಂಗೂ ಈಗ ಕುಡಿಯೋದು ಬಿಟ್ಟಿದ್ಯಲ್ಲ, ಇನ್ಮುಂದೆ ಪೂರ್ತಿ ಬಿಟ್ಟೇ ಬಿಡು, ಅಂದ್ರೆ ಸಿಟ್ಟು ಮಾಡಿಕೊಳ್ತಾನೆ’- ಕಳೆದ ತಿಂಗಳು, ಸಂಬಳ ತಗೊಂಡು ಹೋಗಲು ಬಂದಿದ್ದ ಸರಸಿ ತನ್ನ ಗಂಡನ ಬಗ್ಗೆ ಹೇಳಿದ್ದು ಹೀಗೆ.

ಸರಸಿಯದ್ದು ಇಬ್ಬರು ಮಕ್ಕಳಿರುವ ಸಂಸಾರ. ಮದುವೆಯಾಗಿ ಹದಿನಾರು ವರ್ಷವಾಗಿದೆಯಂತೆ. ಹದಿನೇಳನೆ ವಯಸ್ಸಿಗೆ ಮದುವೆಯಾಗಿ, ಗಂಡನೊಡನೆ ಬೆಂಗಳೂರಿಗೆ ಬಂದಾಗ, ಅವನು ಕುಡಿಯೋ  ವಿಷಯ ಆಕೆಗೆ ಗೊತ್ತಿರಲಿಲ್ಲ. ಆದರೆ, ದಿನ ಕಳೆದಂತೆ ಅವನ ಒಂದೊಂದೇ ದುರ್ಗುಣಗಳು ಬಯಲಾಗತೊಡಗಿದ್ದವು. ದುಡಿದ ಹಣವನ್ನೆಲ್ಲ ಕುಡಿಯುವುದು, ಕುಡಿದು
ಬಂದು ಹೊಡೆಯುವುದು ಮಾಮೂಲಾಯಿತು. ಮೊದಮೊದಲಿಗೆ ಅತ್ತು ಕರೆದು ಮಾಡಿ, ಜಗಳವಾಡಿ, ಗಂಡನನ್ನು ಸರಿಪಡಿಸಲು ಯತ್ನಿಸಿದ್ದಳು ಸರಸಿ. ಆದರೆ, ಅವನು ಬದಲಾಗುವುದು ಸಾಧ್ಯವೇ ಇಲ್ಲ ಅಂತ ಗೊತ್ತಾದಾಗ, ಆ ಪ್ರಯತ್ನ ಕೈ ಬಿಟ್ಟಳು.

ಮಕ್ಕಳು ಸಣ್ಣವಿದ್ದಾಗ ದುಡಿಯಲು ಹೋಗುತ್ತಿದ್ದ ಭೂಪ, ಹೋದಲ್ಲೆಲ್ಲಾ ಸಾಲ ಮಾಡಿಕೊಂಡು, ಸಾಲಗಾರರಿಗೆ ಹೆದರಿ, ಮನೆಯಿಂದ ಹೊರಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟ. ಆಗ, ದುಡಿಯುವುದು ಸರಸಿಗೆ ಅನಿವಾರ್ಯವಾಯ್ತು. ಪ್ರತಿ ದಿನ ನಾಲ್ಕು ಮನೆಯಲ್ಲಿ ಕೆಲಸ ಮಾಡಿ, ಗಂಡ ಮಾಡಿದ ಸಾಲವನ್ನೆಲ್ಲ ತೀರಿಸಿದ್ದಾಳೆ. ಹೇಗೇಗೋ ಮಾಡಿ, ಮಕ್ಕಳನ್ನು ಶಾಲೆಗೂ ಕಳಿಸುತ್ತಿದ್ದಾಳೆ. ಅತ್ತೆಯ (ಗಂಡನ ಅಮ್ಮ) ಔಷಧಿ ಖರ್ಚನ್ನೂ ನಿಭಾಯಿಸುತ್ತಾಳೆ. ಇಷ್ಟೆಲ್ಲ ಕಷ್ಟಪಟ್ಟು ಉಳಿಸಿದ ಹಣ, ಕೆಲವೊಮ್ಮೆ ಗಂಡನ ಕುಡಿತದ ಪಾಲಾಗುತ್ತದಂತೆ. ಹೆಂಡತಿ ದುಡ್ಡಲ್ಲಿ ಕುಡಿದಾಗಲೂ, ಆಕೆಯ ಮೇಲೆ ಕೈ ಎತ್ತಿದ್ದುಂಟಂತೆ! ನಮ್ಮ ಮನೆಗೆ ಕೆಲಸಕ್ಕೆ ಸೇರಿದ ಶುರುವಿನಲ್ಲಿ, ಯಾರದ್ದೋ ಮನೆಯ ಕಥೆ ಅನ್ನುವಷ್ಟು ನಿರ್ಲಿಪ್ತ ವಾಗಿ ಅವಳು ಇದನ್ನೆಲ್ಲ ಹೇಳಿದಾಗ ನಂಗೆ ಅಚ್ಚರಿ.

ಅಲ್ಲಾ, ಒಂದು ಹೆಣ್ಣು ಇಷ್ಟನ್ನೆಲ್ಲ ಹೇಗೆ ಸಹಿಸಿಕೊಳ್ಳಬಲ್ಲಳು ಅಂತ. ಕುಡಿತವೊಂದೇ ಅವನ ದೌರ್ಬಲ್ಯ. ಉಳಿದ ವಿಷಯದಲ್ಲಿ ತನ್ನ ಗಂಡ ಒಳ್ಳೆಯವನೇ, ಅಂತ ಬೇರೆ ಹೇಳುತ್ತಾಳೆ ಸರಸಿ!
ಹೆಣ್ಣು ಸಹನಾಮಯಿ ಅಂತ ಸರಸಿಯನ್ನು ನೋಡಿ ಹೇಳಿದ್ದಿರಬೇಕು… ಈ ನಡುವೆ, ಲಾಕ್‌ಡೌನ್‌ ಅಂತ ಮದ್ಯದ ಅಂಗಡಿಗಳು ಮುಚ್ಚಲ್ಪಟ್ಟಾಗ, ಮುಂದೆಂದೂ ಅವುಗಳ ಬಾಗಿಲು ತೆಗೆಯದೇ
ಇರಲಿ, ಒಂದು ತಿಂಗಳ ಗ್ಯಾಪ್‌ನಲ್ಲಿ ಕುಡುಕರೆಲ್ಲ ತಮ್ಮ ಚಟ ಮರೆಯಲಿ ಅಂತ ಪ್ರಾರ್ಥಿಸಿದ್ದೆ. ಆದರೆ, ಹಾಗಾಗಲಿಲ್ಲ. ಸರ್ಕಾರ ಮತ್ತೆ ಮದ್ಯದ ಅಂಗಡಿಗಳನ್ನು ತೆಗೆಯಿತು. ಬಾರ್‌ ಬಾಗಿಲು
ತೆಗೆಯುವುದಕ್ಕೂ ಮೊದಲೇ, ಕುಡುಕರು ಸಾಲುಗಟ್ಟಿ ನಿಂತರು. ಆ ಸಾಲಿನಲ್ಲಿ ಸರಸಿಯ ಗಂಡನೂ ಇದ್ದಾನೇನೋ… ಗಂಡನ ಬೈಗುಳ, ಹೊಡೆತ ಆಕೆಗೆ ತಪ್ಪುವುದೇ ಇಲ್ಲವೇನೋ…

ನಾಗವೇಣಿ ಎಸ್‌.

ಟಾಪ್ ನ್ಯೂಸ್

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.