ವರ್ಕ್ ಫ್ರಂ ಹೋಮ್ ದಿರಿಸಿನ ಆಯ್ಕೆ ಹೀಗಿರಲಿ
Team Udayavani, May 24, 2020, 8:37 PM IST
ಮಣಿಪಾಲ: ಕೋವಿಡ್ ಬಂದು ಎಲ್ಲೆಡೆಯೂ ಲಾಕ್‌ಡೌನ್ ಆಗಿ ಎಲ್ಲರೂ ಮನೆಯಲ್ಲೇ ಕಾರ್ಯ ನಿರ್ವಹಿಸೋ ಸಮಯ. ಅಬ್ಬಬ್ಟಾ ಉರಿಬಿಸಿಲಿಗೆ ಸುಮ್ಮನೇ ಕೂರೋಕ್ಕಾಗಲ್ಲ. ಇನ್ನು ಮನೇಲಿ ಕೆಲಸ ಮಾಡುತ್ತಾ ಒಂದೇ ಕಡೇ ಇರುವುದೆಂದರೆ ಅದೊಂದು ರೀತಿ ಶಿಕ್ಷೆಯಂತೆ. ಯಾವ ಫ್ಯಾನ್ ಗಾಳಿಯು ಸಾಲೋದಿಲ್ಲ. ಒಂದೆರಡು ನಿಮಿಷ ಕರೆಂಟ್ ಹೋದರಂತೂ ಮೈಯಿಡೀ ಸ್ನಾನ ಮಾಡಿದಂತೆ ಬೆವರಿ ಒದ್ದೆಯಾಗಿರುತ್ತದೆ. ಯಾವಾಗ ಆಫೀಸು ಆರಂಭವಾಗುತ್ತೋ, ಯಾವಾಗ ಆಫೀಸಿಗೆ ಕೆಲಸಕ್ಕೆ ಹೋಗ್ತಿವೋ ಅಂತ ಚಡಪಡಿಕೆಯೂ ಆರಂಭವಾಗಿ ಹಲವು ದಿನವಾಯಿತು. ಮೊದಲ ವಾರ ರಜೆ, ಟೆನ್ಶನ್ ಇಲ್ಲ ಎಂದು ಹಾಯ್ ಆಗಿ ಕೂತಿದ್ದಾಯ್ತು. ಅಮೇಲೆ ದಿನ ದೂಡುವುದೂ ಕಷ್ಟವಾಗಿ ಮಾರ್ಪಟ್ಟಿದೆ. ದಿನಕ್ಕೆ ನಾಲ್ಕೈದು ದಿರಿಸುಗಳು ಬೆವರಿನಲ್ಲಿ ಒದ್ದೆ ಆಗುತ್ತವೆ. ಬೆವರದಂತಹ ದಿರಿಸು ಇದ್ದರೆ ಒಳ್ಳೇದಿತ್ತು ಅಂತ ಅನಿಸುವುದು ಸಹಜವೇ.
ಆಫೀಸಲ್ಲಿ ಎಸಿಗೆ ಖುಷಿಯಾಗಿದ್ದರಿಗೆ ಯಾವ ಫ್ಯಾನ್ ಗಾಳಿಯೂ ನೆಮ್ಮದಿ ನೀಡುತ್ತಿಲ್ಲ. ಇದ್ದಕ್ಕೆ ಇನ್ನೂ ಹೈರಾಣಾಗಿಸುವುದು ಬಟ್ಟೆಗಳ ಆಯ್ಕೆಯಲ್ಲಿನ ಗೊಂದಲ. ವಾತಾವರಣಕ್ಕೆ ಪೂರಕವಾದ ಬಟ್ಟೆಯನ್ನು ಧರಿಸುವುದರಿಂದ ಕೆಲಸವನ್ನೂ ಆರಾಮವಾಗಿ ಮೂಡಬಹುದು.
ಫ್ಯಾಶನ್ ಲೋಕದಲ್ಲಿ ಆಯಾಯ ಕಾಲಕ್ಕೆ ಅನುಗುಣವಾಗಿ ಧರಿಸುವ ಬಟ್ಟೆಗಳ ಬಗ್ಗೆಯೂ ವಿಶೇಷ ಚರ್ಚೆಗಳಾಗುತ್ತವೆ. ಆದರೆ ಲಾಕ್‌ಡೌನ್‌ನಲ್ಲಿ ಇಷ್ಟು ದೀರ್ಘ ಕಾಲ ಮನೆಯಲ್ಲೇ ದುಡಿಯುವ ಬಗ್ಗೆ ಯಾರೋಬ್ಬರೂ ಅಂದಾಜೇ ಮಾಡಿರಲಿಲ್ಲ. ಹಾಗಾಗಿ ನಿಮ್ಮ ಬಟ್ಟೆಗಳ ಆಯ್ಕೆಯಲ್ಲಿ ಕೆಲವೊಂದನ್ನು° ಅಳವಡಿಸಿಕೊಂಡರೆ ಒಳಿತೆಂಬುದು ನಮ್ಮ ಅಂಬೋಣ.
ಆಯ್ಕೆ ಹೀಗಿರಲಿ :
ಹತ್ತಿಯ ಬಟ್ಟೆ ಉತ್ತಮ
ಹತ್ತಿಯ ಬಟ್ಟೆಗಳು ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳುವ ಸಾಮರ್ಥ್ಯ ಹೊಂದಿರುವುದರಿಂದ ಉತ್ತಮ ಹತ್ತಿ ಬಟ್ಟೆಗಳ ಆಯ್ಕೆ ನಮ್ಮದಾದರೆ ಒಳಿತು. ಚರ್ಮ ಮತ್ತು ಬಟ್ಟೆಯ ನಡುವೆ ತೇವಾಂಶ ಉಳಿಯದಂತೆ ನೀವು ಕೆಲಸ ಮಾಡುವಾಗ ಹತ್ತಿ ನಿಮಗೆ ಆರಾಮವಾಗಿರಲು ಅನುವು ಮಾಡಿಕೊಡುತ್ತದೆ. ಹತ್ತಿ ಬಟ್ಟೆಯು ಬೇಸಗೆಯ ಉಷ್ಣತೆ ಮತ್ತು ಚಳಿಗಾಲದಲ್ಲಿ ಶೀತದಿಂದ ರಕ್ಷಿಸುತ್ತದೆ.
ದಪ್ಪದ ಬಟ್ಟೆಗಳು ಹಾಕದಿರಿ
ಬಿಸಿಲಿನ ಪ್ರಭೆ ಜಾಸ್ತಿಯಾಗಿರುವುದರಿಂದ ದಪ್ಪಗಿನ ಜೀನ್ಸ್ ಅಥವಾ ಜಾಕೆಟ್‌ಗಳನ್ನು ಧರಿಸಿ ಕಾರ್ಯ ನಿರ್ವಹಿಸದಿರಿ. ಹೇಗೂ ಮನೆಯೊಳಗೇ ಇರುವುದರಿಂದ ತೆಳ್ಳಗಿನ ಬಟ್ಟೆಗಳಿಗೆ ಜಾಸ್ತಿ ಆದ್ಯತೆ ನೀಡಿ. ಇದರಿಂದ ತ್ವಚೆಗೂ ಒಳಿತಾಗುವುದು.
ಗಾಢ ಬಣ್ಣ ಬೇಡ
ಲಾಕ್‌ಡೌನ್ ವರ್ಕ್‌ಫ್ರಂ ಹೋಂ ಮಾಡುವವರು ಆದಷ್ಟು ತಿಳಿ ಬಣ್ಣದ ದಿರಿಸಿಗೇ ಆದ್ಯತೆ ನೀಡುವುದು ಅತ್ಯಗತ್ಯವಾಗಿದೆ. ಬೆಳಕನ್ನು ಹೀರಿಕೊಳ್ಳುವ ಕಪ್ಪು, ಕಂದು ಮುಂತಾದ ಗಾಢ ಬಣ್ಣಗಳನ್ನು ಬಿಟ್ಟು ಬಿಳಿ, ಹಳದಿ, ತಿಳಿ ಹಸಿರು ಬಣ್ಣಗಳಿಗೆ ಆದ್ಯತೆ ನೀಡಿ. ಇದರಿಂದ ನಿಮಗೆ ಆರಾಮದಾಯಕ ಭಾವನೆ ಉಂಟಾಗುವುದು.
ಬಟ್ಟೆಗಳು ಆದಷ್ಟು ಸಡಿಲವಾಗಿರಲಿ
ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಸೆಕೆ ನಮ್ಮನ್ನು ಇನ್ನಷ್ಟು ಬೆವರಿಸಿ ಹೈರಾಣಾಗಿಸುತ್ತಿದೆ. ಹೆಚ್ಚಿನವರೆಲ್ಲ ಲಾಕ್‌ಡೌನ್ ಕಾರಣಕ್ಕೆ ಮನೆಯಲ್ಲೇ ಇರುವುದರಿಂದ ಆದಷ್ಟು ಸಡಿಲವಾಗಿರುವಂತಹ ಬಟ್ಟೆಗಳನ್ನು ಆಯ್ಕೆ ಮಾಡಿಕೊಂಡರೆ ಒಳಿತು. ಇದರಿಂದ ಚೆನ್ನಾಗಿ ಗಾಳಿ ಆಡುತ್ತಾ ಬೆವರುವಿಕೆಯನ್ನು ಹತೋಟಿಯಲ್ಲಿಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.