![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 13, 2020, 4:20 PM IST
ಮಣಿಪಾಲ: ಮೊದಲು ನಾವು ಯೋಧರನ್ನು ನೆನೆದಾಗ ಮೊದಲಿಗೆ ಕಣ್ಣೆದುರು ಬರುವುದು ಸಮವಸ್ತ್ರದಲ್ಲಿ ನಿಂತ ಅವರ ಗಾಂಭೀರ್ಯದ ಮುಖ. ಅವರ ಶಿಸ್ತಿಗೆ ಯುನಿಫಾರ್ಮ್ ಕೂಡ ಕಾರಣವೇನೋ ಅನಿಸೋಕೆ ಶುರುವಾಗುತ್ತದೆ. ಅದರ ಗತ್ತು ಅಂತದ್ದು.
ನಮ್ಮೆದುರು ಯೋಧನೋರ್ವ ಹೋಗುವಾಗ ಒಮ್ಮೆಗೆ ಕತ್ತೆತ್ತಿ ನೋಡುತ್ತೇವೆ. ಎಲ್ಲರನ್ನೂ ಸೆಳೆಯುವುದರೊಂದಿಗೆ ಹೆಮ್ಮೆಯನ್ನೂ ಮೂಡಿಸುವ ಏಕೈಕ ದಿರಿಸು ಇದು.
ಫ್ಯಾಶನ್ ಪ್ರಪಂಚ ದಿನಾ ಹೊಸತನ್ನು ಬಯಸುತ್ತದೆ. ಇದು ಫ್ಯಾಶನ್ ಲೋಕದಲ್ಲಂತೂ ಇನ್ನೂ ವೇಗ ಪಡೆದಿರುತ್ತದೆ. ಇಂದಿದ್ದ ಅಭಿರುಚಿ ನಾಳೆ ಇರುತ್ತೆ ಎಂದು ಹೇಳಲಾಗದು. ಹಾಗಾಗಿ ಮಾರುಕಟ್ಟೆಯಲ್ಲಿ ಸ್ಥಿರವಾಗಿರಲು ಹೊಸ ಹೊಸ ತಂತ್ರಗಳನ್ನು ಡಿಸೈನರ್‌ಗಳು ಮಾಡುತ್ತಲೇ ಇರುತ್ತಾರೆ. ಏರ್‌ಸ್ಟ್ರೈಕ್ ಅನಂತರವಂತೂ ಮಿಲಿಟರಿ ದಿರಿಸನ್ನು ಯುವ ಜನತೆ ಅಕ್ಷರಷಃ ಅಪ್ಪಿಕೊಂಡಿದೆ ಎಂದರೆ ಸುಳ್ಳಲ್ಲ. ನಮ್ಮ ನೆಚ್ಚಿನ ನಾಯಕ ನಟನೋ, ಕ್ರಿಕೆಟ್ ಆಟಗಾರನೋ ಹಾಕಿದ ಉಡುಪು ಬಹಳ ಬೇಗ ಸೆಳೆಯುವುದು ಖಚಿತ. ಆದರೆ ಈಗಿನ ಯುವ ಜನತೆ ಮುಗಿ ಬಿದ್ದಿರುವುದು ಮಿಲಿಟರಿ ಟ್ರೆಂಡಿಗೆ ಅಂದರೆ ಅಚ್ಚರಿಯಾಗುತ್ತದೆ. ಯೋಧನಾಗುವ ಕನಸು ಹೊತ್ತವರು, ಯೋಧರನ್ನು ಗೌರವಿಸುವವರ ಪ್ರೀತಿ ಈ ದಿರಿಸಿಗೆ ಸಿಗಲಾರಂಭಿಸಿದೆ.
ಮಿಲಿಟರಿ ಜಾಕೆಟ್
ಇವುಗಳು ಅತ್ಯಂತ ಆರಾಮದಾಯಕ ದಿರಿಸಾಗಿರುವುದರಿಂದ ಸರ್ವಋತುವಿಗೂ ಸೂಕ್ತವೆನಿಸುತ್ತದೆ. ಬಿಸಿಲ ರಕ್ಷಣೆಗೆ ಕ್ಯಾಪ್ ಇರುವಂತ ಜಾಕೆಟ್‌ಗಳೂ ಮಾರುಕಟ್ಟೆಯಲ್ಲಿ ಲಭ್ಯ.
ಮಿಲಿಟರಿ ಟಿ ಶರ್ಟ್
ಪೂರ್ತಿ ತೋಳು, ಅರ್ಧ ತೋಳು ಮತ್ತು ತೋಳಿಲ್ಲದ ವಿನ್ಯಾಸಗಳ ಮಿಲಿಟರಿ ಟಿ ಶರ್ಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಮುಂಜಾನೆ ಜಾಗಿಂಗ್ ಅಥವಾ ಆಡುವಾಗ ಇವುಗಳನ್ನು ಧರಿಸಿ ಖುಷಿ ಪಡಬಹುದು. ಇವುಗಳು ಸೂರ್ಯನ ಬೆಳಕನ್ನು ಬೇಗನೆ ಹೀರದೆ ಇರುವುದರಿಂದ ದೇಹವೂ ಬೇಗನೆ ಬೆವರದೆ ತಂಪಾಗಿರುತ್ತದೆ.
ಶರ್ಟ್‌ಗಳು
ಈ ಮಾದರಿಯ ಶರ್ಟ್‌ಗಳು ವಿವಿಧ ಬಣ್ಣಗಳಲ್ಲಿ ಲಭಿಸುತ್ತದೆ. ಮಾಮೂಲಿಯಾಗಿ ಬಟನ್‌ಗಳು ದೊಡ್ಡದಿರುವ ಇಂತಹ ಶರ್ಟ್‌ಗಳಲ್ಲಿ ಮಿಲಿಟರಿ ಬ್ಯಾಜ್‌ಗಳ ವಿನ್ಯಾಸಗಳು ಸಾಮಾನ್ಯ. ಇದು ಖಡಕ್ ಲುಕ್ ನೀಡುವುದರೊಂದಿಗೆ ಎಲ್ಲರಿಗೂ ಹಿಡಿಸುವಂತಿರುತ್ತದೆ.
……….
ಜೀನ್ಸ್ ಇರಲಿ, ಬ್ಲೂ ಜೀನ್ಸೇ ಇರಲಿ, ಇಲ್ಲ ಫಾರ್ಮಲ್ ಫ್ಯಾಂಟ್‌ಗಳೇ ಇರಲಿ. ಈ ಮಿಲಿಟರಿ ದಿರಿಸುಗಳು ಅದಕ್ಕೆ ನಿಸ್ಸಂದೇಹವಾಗಿ ಹೊಂದಿಕೆಯಾಗುತ್ತದೆ.
ಇಷ್ಟಪಡಲು 5 ಕಾರಣ
1. ಎಲ್ಲ ಕಾಲಕ್ಕೂ ಸೂಕ್ತವಾಗಿರುತ್ತದೆ.
2. ಇವುಗಳ ಬಣ್ಣ ಹೋಗುವುದಿಲ್ಲ. ಹೋದರೂ ಅಡ್ಡಿ ಇಲ್ಲ.
3. ವಾಷ್ ಮಾಡಿ ಆದ ಮೇಲೂ ಕಲೆಗಳುಳಿದರೂ ಉಡುಪಿನ ಅಂದಗೆಡುವುದಿಲ್ಲ.
4. ಎಲ್ಲ ಬಣ್ಣಗಳ ಪ್ಯಾಂಟ್‌ಗಳಿಗೂ ಸುಲಭವಾಗಿ ಹೊಂದಿಕೆಯಾಗುತ್ತದೆ.
5. ಪ್ಯಾಂಟ್‌ಗಳೊಂದಿಗೆ ಮ್ಯಾಚಿಂಗ್ ಸುಲಭ.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.