ಚೀನ ವಿರುದ್ಧ ದಿಗ್ಬಂಧನ ಸಾಧ್ಯತೆ ; ಅಮೆರಿಕ ಸಂಸತ್‌ನಲ್ಲಿ ಮಸೂದೆ ಮಂಡನೆ
Team Udayavani, May 14, 2020, 5:53 AM IST
ಅಮೆರಿಕ ಸಂಸತ್‌ನ ಪ್ರಭಾವಶಾಲಿ ಸಂಸದ ಲಿಂಡ್ಸೆ ಗ್ರಹಾಂ.
ವಾಷಿಂಗ್ಟನ್: ಕೋವಿಡ್ ವೈರಸ್ ಉಗಮ ಕಾರಣದ ಅಮೆರಿಕ – ಚೀನ ಜಟಾಪಟಿ ಹೊಸತೊಂದು ಬಿಕ್ಕಟ್ಟಿಗೆ ಕಾರಣವಾಗಲಿದೆಯೇ ಎಂಬ ಭೀತಿ ವ್ಯಕ್ತವಾಗಿದೆ.
ಏಷ್ಯಾದ ಬಲಾಡ್ಯ ರಾಷ್ಟ್ರವಾಗಿರುವ ಚೀನ ವಿರುದ್ಧ ದಿಗ್ಬಂಧನ ಹೇರುವ ಬಗೆಗಿನ ಮಸೂದೆಯನ್ನು ಅಮೆರಿಕದ ಸಂಸತ್‌ನಲ್ಲಿ ಮಂಡಿಸಲಾಗಿದೆ.
ಅಮೆರಿಕ ಸಂಸತ್‌ನ ಪ್ರಭಾವಶಾಲಿ ಸಂಸದ ಲಿಂಡ್ಸೆ ಗ್ರಹಾಂ ಮತ್ತು ಇತರ ಎಂಟು ಮಂದಿ ಸಂಸದರು ‘ಕೋವಿಡ್-19 ಉತ್ತರದಾಯಿತ್ವ ಕಾಯ್ದೆ’ ಕುರಿತಾದ ಮಸೂದೆಯನ್ನು ಮಂಡಿಸಿದ್ದಾರೆ. ಅದರ ಪ್ರಕಾರ ತನಿಖೆಗೆ ಚೀನ ಸಹಕಾರ ನೀಡದಿದ್ದರೆ, ಚೀನ ವಿರುದ್ಧ ನಿರ್ಬಂಧ ಹೇರಲು ಅಧ್ಯಕ್ಷ ಟ್ರಂಪ್‌ಗೆ ಅಧಿಕಾರ ಬರುತ್ತದೆ.
ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳ ನೇತೃತ್ವದ, ಇಲ್ಲವೇ ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದ ತನಿಖಾ ತಂಡಕ್ಕೆ ಕೋವಿಡ್ ವೈರಸ್ ಕುರಿತಾಗಿ ಚೀನ ಸಂಪೂರ್ಣ ಮಾಹಿತಿ ನೀಡಬೇಕು. ಜತೆಗೆ, ಮಾನವನ ಆರೋಗ್ಯಕ್ಕೆ ತೊಂದರೆ ನೀಡಬಹುದಾದ ಮಾರುಕಟ್ಟೆಗಳನ್ನು ಮುಚ್ಚಬೇಕು.
ಈ ಬಗ್ಗೆ ಚೀನ ಸಹಕಾರ ನೀಡಿದೆ ಎಂದು 60 ದಿನಗಳೊಳಗಾಗಿ ಸಂಸತ್‌ಗೆ ಅಧ್ಯಕ್ಷರು ಪ್ರಮಾಣ ಪತ್ರ ಸಲ್ಲಿಸಬೇಕು. ಇಲ್ಲದಿದ್ದರೆ, ಚೀನದ ವಿರುದ್ಧ ಆರ್ಥಿಕ ಹಾಗೂ ಇನ್ನಿತರ ಆಡಳಿತಾತ್ಮಕ ನಿರ್ಬಂಧಗಳನ್ನು ಹೇರಲು ಈ ಮಸೂದೆ ಟ್ರಂಪ್‌ಗೆ ಅಧಿಕಾರ ನೀಡುತ್ತದೆ.
ಇದರ ಹೊರತಾಗಿಯೂ ಚೀನ ವಿರುದ್ಧ ವೀಸಾ ನಿಷೇಧ, ಅಲ್ಲಿಗೆ ಪ್ರಯಾಣ ಮಾಡದಂತೆ ತಡೆ, ಚೀನ ಸಂಸ್ಥೆಗಳಲ್ಲಿ ಹೂಡಿಕೆ ಮಾಡದಂತೆ ಅಮೆರಿಕದ ವಿತ್ತ ಸಂಸ್ಥೆಗಳಿಗೆ ಕಟ್ಟಪ್ಪಣೆ, ಅಲ್ಲಿನ ಕಂಪೆನಿಗಳು ಅಮೆರಿಕದ ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ಲಿಸ್ಟ್ ಆಗದಂತೆ ನೋಡಿಕೊಳ್ಳುವ ಬಗ್ಗೆ ಆದೇಶ ಹೊರಡಿಸಲೂ ಅಮೆರಿಕ ಅಧ್ಯಕ್ಷರಿಗೆ ಅಧಿಕಾರವಿದೆ.
ಡಬ್ಲ್ಯುಎಚ್‌ಒ ಮೇಲೆ ಚೀನ ಒತ್ತಡ: ಸಿಐಎ
ಆರಂಭದ ದಿನಗಳಲ್ಲಿ ಕೋವಿಡ್ ವೈರಸ್ ಬಗ್ಗೆ ಸಾರ್ವಜನಿಕವಾಗಿ ಎಚ್ಚರಿಕೆ ನೀಡುವುದನ್ನು ವಿಳಂಬ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯ (WHO) ಮೇಲೆ ಚೀನ ಒತ್ತಡ ಹೇರಿತ್ತು ಎಂಬ ಸಂಗತಿಯನ್ನು ಸಿಐಎ (ಕೇಂದ್ರೀಯ ಗುಪ್ತಚರ ಸಂಸ್ಥೆ) ವರದಿಯಲ್ಲಿ ಉಲ್ಲೇಖೀಸಲಾಗಿದೆ. ಕೋವಿಡ್ ವೈರಸ್ ಅನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿದರೆ ಕೊರೊನಾ ಕುರಿತಾದ ತನಿಖೆಗೆ ಸಹಕಾರ ನೀಡುವುದಿಲ್ಲ ಎಂದು ಡಬ್ಲ್ಯು.ಎಚ್.ಒ.ಗೆ ಚೀನ ಬೆದರಿಕೆ ಹಾಕಿತು.
ಕೋವಿಡ್ ವೈರಸ್ ಇಡೀ ವಿಶ್ವಕ್ಕೆ ಹರಡುತ್ತಿರುವ ಸಂದರ್ಭದಲ್ಲಿ, ಅತ್ಯಂತ ನಿರ್ಣಾಯಕ ಸಮಯವಾದ ಜನವರಿಯಲ್ಲಿಯೇ ಚೀನ ಈ ವಿಳಂಬ ನೀತಿ ಅನುಸರಿಸಿತು. ಅಲ್ಲದೆ, ಕೋವಿಡ್ ವೈರಸ್ ವಿಶ್ವಾದ್ಯಂತ ಹರಡುತ್ತಿದ್ದರೆ, ಚೀನ ಮಾತ್ರ ಅಮೆರಿಕ, ಮತ್ತಿತರ ದೇಶಗಳಿಂದ ಅಗತ್ಯ ವಾದ ವೈದ್ಯಕೀಯ ಸಲಕರಣೆಗಳನ್ನು ಆಮದು ಮಾಡಿಕೊಂಡು ಅವುಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಕೆಲಸಕ್ಕೆ ಮುಂದಾಯಿತು ಎಂದು ಸಿಐಎ ವರದಿಯಲ್ಲಿ ಉಲ್ಲೇಖಿ ಸಲಾಗಿದೆ ಎಂದು ‘ನ್ಯೂಸ್‌ವೀಕ್’ ವರದಿ ಮಾಡಿದೆ.
ಸಾರ್ಸ್, ಹಕ್ಕಿಜ್ವರ, ಹಂದಿ ಜ್ವರ, ಕೋವಿಡ್ ವೈರಸ್ ಸೇರಿದಂತೆ ಕಳೆದ 20 ವರ್ಷಗಳ ಅವಧಿಯಲ್ಲಿ ಚೀನದಿಂದ 5 ಪಿಡುಗುಗಳು ಹೊರಬಂದಿದೆ. ಚೀನದ ಈ ಉಪದ್ರವ ನಿಲ್ಲಲೇಬೇಕು.
– ರಾಬರ್ಟ್ ಒ ಬ್ರಿಯೆನ್, ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.