ಬಿಡದಿ ಟೌನ್‌ಶಿಪ್: ಸಿಎಂ ರೈತರ ಪರ
Team Udayavani, May 14, 2020, 5:58 AM IST
ಮಾಗಡಿ: ಬಿಡದಿ ಸಮೀಪದ ಕಂಚಗಾರನ ಹಳ್ಳಿ ಕೆಐಎಡಿಬಿ ಭೂಸ್ವಾಧೀನ ವಿಚಾರವಾಗಿ ರೈತರ ಆತಂಕವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೂರ ಮಾಡಲಿದ್ದಾರೆ ಎಂಬ ವಿಶ್ವಾಸವನ್ನು ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಪುರಸಭೆಯಲ್ಲಿ ಸಂಸದ ಡಿ.ಕೆ. ಸುರೇಶ್ ಕೊಠಡಿಯಲ್ಲಿ ಏರ್ಪಡಿಸಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, 2006 ರಿಂದ 2020ರವರೆಗೆ ರಾಜಕೀಯ ಕೆಸರೆರಚಾಟ ದಿಂದಾಗಿ ರೈತರು ಆತಂಕದಲ್ಲಿದ್ದರು. ಈಗ ಬಹುಶಃ ಸಿಎಂ ಬಿಎಸ್‌ವೈ ಕಾಯಕಲ್ಪ ಕೊಡುತ್ತಾರೆ ಎಂಬ ಆತ್ಮವಿಶ್ವಾಸವಿದೆ. ಸಿಎಂಗೆ ಮತ್ತು ಉಸ್ತವಾರಿ ಸಚಿವ ಡಿಸಿಎಂಗೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸಂಸದ ಡಿ.ಕೆ.ಸುರೇಶ್ ಸ್ಪಷ್ಟಿಕರಣ ಕೊಡಲಿ: ರೈತರು ನನ್ನ ತಾಯಿಯಿದ್ದಂತೆ. ಕಾಸಿಗೆ ಕೈಯೊಡ್ಡಿ ರೈತರಿಗೆ ಮೋಸ ಮಾಡಿದರೆ ಹೆತ್ತ ತಾಯಿ ಮೋಸ ಮಾಡಿದಂತೆ. ಚರ್ಚೆ ವಿಚಾರವೇ ಬೇರೆ, ಶಾಸಕರು ಕೊಟ್ಟ ಹೇಳಿಕೆಯೇ ಬೇರೆಯಾಗಿದೆ. ಒಂದೊ ಕ್ಕೊಂದು ತಾಳೆಯೇ ಇಲ್ಲ. ನನ್ನ ಬಗ್ಗೆ ಏಕ ವಚನದಲ್ಲಿ ಮಾತನಾಡಿದ್ದಾರೆ.
ಡಿ.ಕೆ. ಶಿವಕುಮರ್, ಮಾಜಿ ಸಿಎಂ, ಎಚ್‌ಡಿಕೆ, ಸಂಸದ ಡಿ.ಕೆ.ಸುರೇಶ್ ಅವರಿಂದ ಸರ್ಕಾರಕ್ಕೆ ಪತ್ರ ಕೊಡಿಸಿದ್ದೇನೆ ಎಂದು ಶಾಸಕರು ಹೇಳಿಕೊಂಡಿದ್ದಾರೆ. ಹಾಗಾದರೆ ನೋಟಿಫಿಕೇಷನ್ ಏಕೆ ಆಗಿಲ್ಲ. ಇದಕ್ಕೆಲ್ಲ ಎಂಎಲ್‌ಎ ಎ.ಮಂಜುನಾಥ್, ಎಂಪಿ ಡಿ.ಕೆ.ಸುರೇಶ್ ಅವರೇ ಸ್ಪಷ್ಟೀಕರಣ ಕೊಡಬೇಕು. ಅವರ ಪತ್ರಕ್ಕೆ ಕಿಮ್ಮತ್ತಿಲ್ಲವೇ ಎಂದು ಪ್ರಶ್ನಿಸಿದರು.
ಬಹಿರಂಗ ಚರ್ಚೆಗೆ ಸಿದ್ದ: ರೈತರಿಗೆ ಅನ್ಯಾಯ ಮಾಡಿ, ಉದ್ಯಮಿಗಳಿಗೆ ಅನುಕೂಲ ಮಾಡಿ ಕೊಡುತ್ತಾರೆ ಎಂದರೆ ಹೇಗೆ? ಬಹಿರಂಗ ಚರ್ಚೆಗೆ ಕರೆದಿದ್ದಾರೆ. ಜೀವನದಲ್ಲಿ ಪಲಾ ಯನ ಮಾಡುವ ಪ್ರಶ್ನೆಯೇ ಇಲ್ಲ. ತಪ್ಪು ಮಾಡಿದರೆ ಶರಣಾಗುತ್ತೇನೆ. ತಪ್ಪು ಮಾಡಿ ದವರನ್ನು ನೇರವಾಗಿ ದಂಡಿಸುತ್ತೇನೆ. ಬಾಲಕೃಷ್ಣನ ಮಾತು ಬೋಗಸ್ ಎಂದಾದರೆ ಕೆಐಎಡಿಬಿ ವಿಚಾರವಾಗಿ ಸಿಎಂ ಏಕೆ ನನ್ನನ್ನು ಕರೆಯಿಸುತ್ತಿದ್ದರು.
ರೈತರಿಗೆ ನ್ಯಾಯ ದೊರಕಿಸುವುದು ನನ್ನ ಕೆಲಸ. ಪ್ರಾಣ ಕೊಟ್ಟಾದರೂ ರೈತರನ್ನು ಉಳಿಸುತ್ತೇನೆ. ಅಗತ್ಯ ಬಿದ್ದರೆ ಶಾಸಕ ಎ.ಮಂಜು ಅವರಿಗೆ ರೈತರ ಪರ ಹೋರಾಟಕ್ಕೆ ಕೈಜೋಡಿಸುತ್ತೇನೆ. ತಪ್ಪಾಗಿದ್ದರೆ ಸರಿಪಡಿಸೋಣ. ಆದರೆ ಶಾಸಕರು ಏಕವಚನದಲ್ಲಿ ಮಾತನಾಡಿ, ನನ್ನನ್ನು ಕೆಣಕಿದ್ದಾರೆ. ಹಂತ ಹಂತವಾಗಿ ಉತ್ತರಿಸುತ್ತೇನೆ. ತಪ್ಪು ತೋರಿಸಿದರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಸವಾಲು ಹಾಕಿದರು.
ಬಾಣೆಲೆಯಿಂದ ಬೆಂಕಿಗೆ ಬಿದ್ದಂತಾಗಿದೆ: ಸಂಸದ ಡಿ.ಕೆ.ಸುರೇಶ್ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಹಿಂದೆಯಲ್ಲ ನನ್ನ ಮೇಲೆ ಗೌರವಿದೆ ಎಂದು ತಿಳಿದಿದ್ದೆ. ಹೊಂದಾಣಿಕೆ ರಾಜಕೀಯ ನನಗೆ ಬರಲ್ಲ. ನೇರವಾದಿ, ಜೆಡಿಎಸ್ ಶಾಸಕರೊಂದಿಗೆ ಸಂಸದರು ಕುಳಿತು ಕಾರ್ಯಕ್ರಮ ಮಾಡುತ್ತಾರೆ ಎಂದಾದರೆ ಕಾಂಗ್ರೆಸ್ ನಂಬಿರುವ ಕಾರ್ಯಕರ್ತರ ಪಾಡೇನು? ನನ್ನ ಕಥೆ ಈಗ ಬಾಣೆಲೆಯಿಂದ ಬೆಂಕಿಗೆ ಬಿದ್ದಂತಾಗಿದೆ ಎಂದು ನೋವು ವ್ಯಕ್ತಪಡಿಸಿದರು.
ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ಕೆಪಿಸಿಸಿ ಟಾಸ್ಕ್ ಫೋರ್ಸ್ ಕಮಿಟಿ ಅಧ್ಯಕ್ಷ ವಿಜಯಕುಮಾರ್, ಪುರಸಭೆ ಸದಸ್ಯ ಗುರುಸ್ವಾಮಿ, ಪುರುಷೋತ್ತಮ್, ನಾಗರಾಜು, ಎಂ.ಆರ್.ಮಂಜುನಾಥ್, ತೇಜಸ್ ಕುಮಾರ್, ಬಿ.ಎನ್. ಚಂದ್ರ ಶೇಖರ್, ತೇಜಾ, ಕಿರಣ್‌ಕುಮಾರ್, ಸುರೇಶ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.