ನಿತ್ಯ 6 ಸಾವಿರ ಮಕ್ಕಳ ಸಾವು : ಯುನಿಸೆಫ್ ಎಚ್ಚರಿಕೆ
Team Udayavani, May 14, 2020, 1:55 PM IST
ವಿಶ್ವಸಂಸ್ಥೆ : ಕೋವಿಡ್ ವೈರಸ್‌ನ ಪಶ್ಚಾತ್ ಪರಿಣಾಮವಾಗಿ ಮುಂದಿನ ಆರು ತಿಂಗಳಲ್ಲಿ ನಿತ್ಯ 6,000 ಮಕ್ಕಳು ಸಾವಿಗೀಡಾಗಬಹುದು ಎಂದು ಯುನಿಸೆಫ್ ಎಚ್ಚರಿಸಿದೆ.
ಕೋವಿಡ್ ವೈರಸ್ ದೈನಂದಿನ ಆರೋಗ್ಯ ಸೇವೆಯ ಮೇಲೆ ಮಾಡಿರುವ ದುಷ್ಪರಿಣಾಮಗಳಿಂದಾಗಿ ಈ ಸಾವು ಸಂಭವಿಸಲಿವೆ. ಎರಡನೇ ಜಾಗತಿಕ ಯುದ್ಧದ ಬಳಿಕದ ಅತಿ ದೊಡ್ಡ ದುರಂತವಾಗಿ ಇದು ದಾಖಲಾಗಲಿದೆ ಎಂದು ಯುನಿಸೆಫ್ ಹೇಳಿದೆ.
ಗರ್ಭಿಣಿಯರಿಗೆ ಮತ್ತು ನವಜಾತ ಶಿಶುಗಳಿಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳು ಮತ್ತು ಔಷಧಗಳ ಪೂರೈಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ವ್ಯತ್ಯಯದಿಂದ ಈ ಸಾವುಗಳು ಸಂಭವಿಸಬಹುದು. ಇದಲ್ಲದೆ ಲಸಿಕೆ ಕೊರತೆ , ಸಮರ್ಪಕ ಆರೈಕೆ ಮತ್ತು ಶುಶ್ರೂಷೆಯ ಅಲಭ್ಯತೆಯಿಂದಾಗಿ ಆರು ತಿಂಗಳಲ್ಲಿ ಇನ್ನೂ 12 ಲಕ್ಷ ಮಕ್ಕಳು ಸಾವಿಗೀಡಾಗಬಹುದು ಎಂಬುದಾಗಿ ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಹಾಪ್‌ಕಿನ್ಸ್ ಬ್ಲೂಮ್‌ರಾಂಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
ಪ್ರತಿ ಆರು ತಿಂಗಳಲ್ಲಿ ಐದನೇ ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕಿಂತ ಮೊದಲೇ 25 ಲಕ್ಷ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಅತಿರಿಕ್ತವಾಗಿ ಕೋವಿಡ್ ಸಂಬಂಧಿ ಸಾವುಗಳು ಸಂಭವಿಸಲಿವೆ. ಕೋವಿಡ್ ಶಿಶು ಮರಣವನ್ನು ತಡೆಯಲು ಮಾಡಿರುವ ಪ್ರಯತ್ನಗಳನ್ನು 10 ವರ್ಷದಷ್ಟು ಹಿಂದಕ್ಕೊಯ್ಯಲಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.
ಕೋವಿಡ್ ಎಲ್ಲರ ಆರೋಗ್ಯದ ಮೇಲೂ ಪರಿಣಾಮ ಬೀರಿದೆ. ಆದರೆ ಮಕ್ಕಳು ಎರಡನೇ ಜಾಗತಿಕ ಯುದ್ಧದ ಬಳಿಕ ಅತಿ ದೊಡ್ಡ ಗಂಡಾಂತರವನ್ನು ಎದುರಿಸುತ್ತಿದ್ದಾರೆ. ಮಕ್ಕಳ ಶಿಕ್ಷಣ ಮೊಟಕುಗೊಂಡಿದೆ, ಅವರ ಸೀಮೆಗಳನ್ನು ಮುಚ್ಚಲಾಗಿದೆ, ಅವರ ಆಹಾರ ಪೂರೈಕೆ ವ್ಯತ್ಯಯಗೊಂಡಿದೆ, ಔಷಧ-ಲಸಿಕೆಗಳ ಪೂರೈಕೆಗೆ ಅಡಚಣೆ ಎದುರಾಗಿದೆ.
ಬ್ರಿಟನ್‌ನಲ್ಲಿ ಈಗಾಗಲೇ ದಡಾರ ಕಾಣಿಸಿಕೊಂಡಿದ್ದು, ಇದು ಕೋವಿಡ್ ನ ಪಶ್ಚಾತ್ ಪರಿಣಾಮ ಎಂದು ಭಾವಿಸಬೇಕು ಎನ್ನುತ್ತಾರೆ ಯುನಿಸೆಫ್ನ ಬ್ರಿಟನ್ ವಿಭಾಗದ ಕಾರ್ಯ ನಿರ್ವಾಹಕ ನಿರ್ದೇಶಕ ಸಚ್ಚಾ ದೇಶ್‌ಮುಖ್.
ಆರೋಗ್ಯ ಸೇವೆ ದುರ್ಬಳವಾಗಿರುವ ದೇಶಗಳ ಮಕ್ಕಳಿಗೆ ಕೋವಿಡ್ ನಿಂದ ಹೆಚ್ಚು ಗಂಡಾಂತರವಿದೆ. ಪೋಷಕಾಂಶ ಕೊರತೆಯಿರುವ ಮಕ್ಕಳು ಶೀಘ್ರವಾಗಿ ಕೋವಿಡ್ ತುತ್ತಾಗುತ್ತಾರೆ ಎನ್ನುವುದನ್ನು ಈ ಅಧ್ಯಯನದ ಮೂಲಕ ಕಂಡುಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.