ಆತ್ಮ ನಿರ್ಭರ ಭಾರತ ಪ್ಯಾಕೇಜ್ ಎರಡನೇಹಂತದಲ್ಲಿ ರೈತರಿಗೆ, ವಲಸೆ ಕಾರ್ಮಿಕರಿಗೆ ಭರ್ಜರಿ ಕೊಡುಗೆ
Team Udayavani, May 14, 2020, 4:42 PM IST
ನವದೆಹಲಿ: ಕೋವಿಡ್ ವಿರುದ್ಧ ದೇಶ ನಡೆಸುತ್ತಿರುವ ಹೋರಾಟದಲ್ಲಿ ಕುಸಿತಕ್ಕೊಳಗಾಗಿರುವ ದೇಶದ ಆರ್ಥಿಕತೆಗ ಬಲ ತುಂಬಲು ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಹಿಂದೆ ಘೋಷಿಸಿದ್ದ 20 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಪ್ಯಾಕೇಜ್ ನ ಮೊದಲ ವಿವರಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರದಂದು ನೀಡಿದ್ದರು.
ಇದೀಗ ಈ ಆರ್ಥಿಕ ಪ್ಯಾಕೇಜಿನ ಎರಡನೇ ಹಂತದ ವಿವರಗಳನ್ನು ಇಂದು ನಿರ್ಮಲಾ ಸೀತಾರಾಮನ್ ಅವರು ನೀಡುತ್ತಿದ್ದಾರೆ. ಇದರಲ್ಲಿ ರೈತರು, ವಲಸೆ ಕಾರ್ಮಿಕರ ಹಿತವನ್ನು ಗಮನದಲ್ಲಿರಿಸಿಕೊಂಡು ಈ ಪ್ಯಾಕೇಜ್ ನಲ್ಲಿನ ಕೊಡುಗೆಗಳನ್ನು ಘೋಷಣೆ ಮಾಡಲಾಗಿದೆ.
ವಿತ್ತ ಸಚಿವರ ಪ್ರಮುಖ ಘೋಷಣೆಗಳು:
– ಮಾರ್ಚ್ 1ಕ್ಕಿದ್ದ ಬೆಳೆ ಸಾಲದ ಮೇಲಿನ ಕಂತು ಪಾವತಿ ಅಂತಿಮ ದಿನಾಂಕವನ್ನು ಮೇ 31ಕ್ಕೆ ವಿಸ್ತರಣೆ.
– ವಲಸೆ ಕಾರ್ಮಿಕರ ಹಿತ ಕಾಯಲೂ ಸರಕಾರದ ಕ್ರಮ.
– ತಮ್ಮ ತಮ್ಮ ರಾಜ್ಯಗಳಿಗೆ ಹಿಂದಿರುಗಿರುವ ವಲಸೆ ಕಾರ್ಮಿಕರ ದಾಖಲಾತಿಯನ್ನು ಸೂಕ್ತವಾಗಿ ಮಾಡಲು ಕ್ರಮ.
– ಕಳೆದ ಎರಡು ತಿಂಗಳುಗಳಲ್ಲಿ ನಗರದಲ್ಲಿರುವ ಬಡವರಿಗಾಗಿ 7,200 ಹೊಸ ಸ್ವ-ಸಹಾಯ ಸಂಘಗಳ ಸ್ಥಾಪನೆ.
– ಮುಂದಿನ ಎರಡು ತಿಂಗಳುಗಳ ಕಾಲ ಎಲ್ಲಾ ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯಗಳ ವಿತರಣೆ.
– ವಲಸೆ ಕಾರ್ಮಿಕರ ಬಾಡಿಗೆ ಮನೆಗಳಿಗೆ ನಿರ್ಧಿಷ್ಟ ಬಾಡಿಗೆ ನಿಗದಿಗೆ ಕ್ರಮ. ಎಲ್ಲಾ ರಾಜ್ಯ ಸರಕಾರಗಳಿಗೆ ಸೂಚನೆ.
– ಮುದ್ರಾ ಶಿಶು ಸಾಲ ಯೋಜನೆಯಲ್ಲಿ 50 ಸಾವಿರದವರೆಗೆ ಸೌಲಭ್ಯ.
– ಪಡಿತರ ಚೀಟಿ ಪೋರ್ಟಬಿಲಿಟಿ ಮಾಡಲು ಅವಕಾಶ. ಇದರ ಮೂಲಕ ದೇಶದ ಯಾವುದೇ ಸ್ಥಳದಲ್ಲಿ ಪಡಿತರ ಪಡೆದುಕೊಳ್ಳಲು ಅವಕಾಶ. ಇದರಿಂದ 67 ಕೋಟಿ ಪಡಿತರದಾರರಿಗೆ ಪ್ರಯೋಜನ.
– ಬೀದಿ ಬದಿ ವ್ಯಾಪಾರಿಗಳ ವಿಶೇಷ ಸಾಲ ಸೌಲಭ್ಯಕ್ಕೆ 5 ಸಾವಿರ ಕೋಟಿ ರೂಪಾಯಿ ನಿಗದಿ. 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಇದರ ಪ್ರಯೋಜನ.
– ಬೀದಿಬದಿ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರ ಪುನರಾರಂಭಿಸಲು 10 ಸಾವಿರ ರೂಪಾಯಿ ನಿಗದಿ.
– 12 ಸಾವಿರ ಸ್ವಸಹಾಯ ಸಂಘಗಳಿಂದ 3 ಕೋಟಿ ಮಾಸ್ಕ್ ತಯಾರಿ.
– ಮಧ್ಯಮ ವರ್ಗದ ಜನರಿಗೆ ಸಾಲ ಸಬ್ಸಿಡಿ ಯೋಜನೆ. 6 ರಿಂದ 18 ಲಕ್ಷದವರೆಗಿನ ವೇತನದಾರರಿಗೆ ಇದರ ಪ್ರಯೋಜನ.
– ಇನ್ನು ಮುಂದೆ ಒಂದು ಸಂಸ್ಥೆಯಲ್ಲಿ 10ಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದರೆ ಇ.ಎಸ್.ಐ. ಕಡ್ಡಾಯ.
– ವಲಸೆ ಕಾರ್ಮಿಕರಿಗೆ ಮತ್ತು ನಗರ ಪ್ರದೇಶದಲ್ಲಿರುವ ಬಡವರಿಗೆ ಕೈಗೆಟಕುವ ದರದಲ್ಲಿ ಬಾಡಿಗೆ ಮನೆ ಒದಗಿಸಿಕೊಡಲು ಸರಕಾರದ ಯೋಜನೆ.
– ಗೃಹ ಸಾಲ ಸೌಲಭ್ಯಕ್ಕಾಗಿ 70 ಸಾವಿರ ಕೋಟಿ ರೂಪಾಯಿ ಮೀಸಲು.
– 2020ಕ್ಕೆ ಮುಗಿಯಬೇಕಿದ್ದ ಸಬ್ಸಿಡಿ ಯೋಜನೆ ಮುಂದಿನ ವರ್ಷದ ಮಾರ್ಚ್ 31ರವರೆಗೆ ವಿಸ್ತರಣೆ. 2.5 ಲಕ್ಷ ಕುಟುಂಬಗಳು ಹೆಚ್ಚುವರಿಯಾಗಿ ಇದರ ಲಾಭ ಪಡೆಯಲಿವೆ.
– ಮುದ್ರಾ ಶಿಶು ಸಾಲ ಯೋಜನೆಯಲ್ಲಿ ಸಕಾಲಿಕ ಕಂತು ಪಾವತಿದಾರರಿಗೆ 12 ತಿಂಗಳುಗಳ ಕಾಲ ಬಡ್ಡಿ ದರದಲ್ಲಿ 2% ಸಬ್ಸಿಡಿ.
– ನಬಾರ್ಡ್ ಗೆ 30 ಸಾವಿರ ಕೋಟಿ ರೂಪಾಯಿಗಳ ತುರ್ತು ಸಾಲ. ಇದರಿಂದ ದೇಶದಲ್ಲಿರುವ 3 ಕೋಟಿ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಪ್ರಯೋಜನ.
– 25 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ಗಳ ವಿತರಣೆಗೆ ಕ್ರಮ
– ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 2.5 ಕೋಟಿ ರೈತರು, ಹೈನುಗಾರರು ಹಾಗೂ ಮೀನುಗಾರರಿಗೆ ಅನುಕೂಲ.
– ಬುಡಕಟ್ಟು ಹಾಗೂ ಆದಿವಾಸಿಗಳಿಗೆ ಉದ್ಯೋಗ ಸೃಷ್ಟಿಗೆ ಕ್ರಮ.
– ಮುದ್ರಾ ಶಿಶು ಸಾಲ ಪಡೆದುಕೊಂಡವರಿಗೆ ಮೂರು ತಿಂಗಳ ಕಂತು ರದ್ದು ಬಳಿಕ ಕಂತು ಮರುಪಾವತಿ ಪ್ರಾರಂಭಿಸುವ ಸಂರ್ಭದಲ್ಲಿ 2% ಬಡ್ಡಿ ಸಬ್ಸಿಡಿ ಕೊಡುಗೆ. ಇದರಿಂದ 3 ಕೋಟಿ ಶಿಶು ಮುದ್ರಾ ಸಾಲಗಾರರಿಗೆ ಪ್ರಯೋಜನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.