ಮೊಟ್ಟೆ ತಿನ್ನಲು ಇಷ್ಟವಿಲ್ಲವೇ? ಸಿಂಪಲ್ ಆಗಿ ಸ್ವಾದಿಷ್ಟಕರ ಪನ್ನೀರ್ ಬುರ್ಜಿ ತಯಾರಿಸಿ


Team Udayavani, Sep 27, 2020, 6:09 PM IST

ಸ್ವಾದಿಷ್ಟಕರ ಪನ್ನೀರ್‌ ಬುರ್ಜಿ ರೆಸಿಪಿ

ಪನ್ನೀರ್‌ ನೋಡಿದ ಕೂಡಲೇ ಬಾಯಿಯಿಂದ ನೀರು ಸುರಿಯುತ್ತದೆ ಅಷ್ಟರ ಮಟ್ಟಿಗೆ ಪ್ರತಿಯೊಬ್ಬರೂ ಕೂಡ ಪನ್ನೀರನ್ನು ಇಷ್ಟಪಟ್ಟು ತಿನ್ನುತ್ತಾರೆ. ಪನ್ನೀರ್‌ ನಿಂದ ತಯಾರಿಸಿದ ಪ್ರತಿಯೊಂದು ಆಹಾರವು ನಾಲಗೆಗೆ ಹೆಚ್ಚು ರುಚಿಯನ್ನು ನೀಡುವುದರ ಜೊತೆಗೆ ಆರೋಗ್ಯಕ್ಕೂ ಸಹ ಒಳ್ಳೆಯದು. ಪನ್ನೀರ್‌ ನಲ್ಲಿ ಅಧಿಕ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳು ಬಲವಾಗುತ್ತದೆ. ಅಲ್ಲದೇ ಸಂಧಿ ನೋವು ಉಂಟಾಗುವುದಿಲ್ಲ ಹಾಗೂ ಇದು ದೇಹದಲ್ಲಿ ಇನ್ಸುಲಿನ್‌ಗಳ ಉತ್ಪತ್ತಿಗೆ ಸಹಕಾರಿಯಾಗುವುದು.

ಮೊಟ್ಟೆ ತಿನ್ನಲು ಇಷ್ಟಪಡದೇ ಇರುವವರು ಪನ್ನೀರ್‌ ಬುರ್ಜಿ ರೆಸಿಪಿಯನ್ನು ಮನೆಯಲ್ಲಿ ಸಿಂಪಲ್‌ ಆಗಿ ಮಾಡಿ ನೋಡಿ. ಪನ್ನೀರ್‌ ಬುರ್ಜಿಯನ್ನು ರೋಟಿ, ನಾನ್‌ ,ಚಪಾತಿ ಅಲ್ಲದೇ ಊಟದ ಜೊತೆಗೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

ಪನ್ನೀರ್‌ ನಿಂದ ತಯಾರಿಸುವ ತಿನಿಸನ್ನು ತಿನ್ನಲು ಹೋಟೆಲ್‌ಗೆ ಹೋಗಬೇಕೆಂದಿಲ್ಲ ನೀವೇ ಮನೆಯಲ್ಲಿ ಮಾಡಿಕೊಂಡು ತಿನ್ನಬಹುದಾಗಿದೆ. ಹಾಗಿದ್ದರೆ ಇನ್ನೇಕೆ ತಡ ಕೇವಲ ಹತ್ತೇ ನಿಮಿಷದಲ್ಲಿ ಝಟ್‌ಫ‌ಟ್‌ ಅಂತಾ ಇದನ್ನು ತಯಾರಿಸಬಹುದು.

ಪನ್ನೀರ್‌ ಬುರ್ಜಿ ಹಾಗೂ ನಾನ್‌ ರೆಸಿಪಿಯನ್ನು ಮಾಡುವುದು ಹೇಗೆ ಎಂಬುದನ್ನು ನೋಡೋಣ ಬನ್ನಿ…..

ನಾವು ಮೊದಲು ಪನ್ನೀರ್‌ ಬುರ್ಜಿ ತಯಾರಿಸೋಣ…
ಬೇಕಾಗುವ ಸಾಮಗ್ರಿಗಳು
ಪನ್ನೀರ್‌ 2 ಕಪ್‌(ಪುಡಿ ಮಾಡಿಟ್ಟ) ,ಈರುಳ್ಳಿ 2, ಟೊಮೆಟೊ 1, ಜೀರಿಗೆ 1 ಚಮಚ, ತೆಂಗಿನ ಎಣ್ಣೆ 2 ಚಮಚ, ಹಸಿಮೆಣಸಿನ ಕಾಯಿ 4, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ 2 ಚಮಚ, ಅಚ್ಚ ಖಾರದ ಪುಡಿ ಅರ್ಧ ಚಮಚ, ಅರಿಶಿನ ಪುಡಿ ಕಾಲು ಚಮಚ, ಗರಂ ಮಸಾಲ ಪುಡಿ ಅರ್ಧ ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಒಂದು ದೊಡ್ಡ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ.ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ , ಹಸಿಮೆಣಸು, ಜೀರಿಗೆ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಹಾಕಿರಿ. ಈರುಳ್ಳಿ ಸ್ವಲ್ಪ ಕೆಂಪಾಗಾಗುವವರೆಗೆ ಹುರಿಯಿರಿ. ತದನಂತರ ಹಚ್ಚಿದ ಟೊಮೆಟೊ ಹಾಕಿ ಅದು ಮೆತ್ತಗಾಗುವವರೆಗೆ ಹುರಿಯಿರಿ. ಆ ಮೇಲೆ ಅಚ್ಚ ಖಾರದ ಪುಡಿ, ಅರಿಶಿನ ಪುಡಿ, ಗರಂ ಮಸಾಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ನಂತರ ಸಣ್ಣ ಉರಿಯಲ್ಲಿ 1ರಿಂದ 2 ನಿಮಿಷ ಹಾಗೇ ಮಸಾಲೆಯನ್ನು ಹುರಿಯಿರಿ. ಆ ಮೇಲೆ ಪುಡಿ ಮಾಡಿಟ್ಟುಕೊಂಡ ಪನ್ನೀರ್‌ ಹಾಕಿರಿ. ಪನ್ನೀರ್‌ ಪೂರ್ತಿ ಮೆತ್ತಗಾಗಿ ಹೋಗದಂತೆ ನಿಧಾನವಾಗಿ ಕೈಯ್ನಾಡಿಸಿರಿ. ಸಣ್ಣ ಉರಿಯಲ್ಲಿ 3 ರಿಂದ 4 ನಿಮಿಷ ಹಾಗೇ ಬಿಡಿ.ಪನ್ನೀರನ್ನು ಅತಿಯಾಗಿ ಹುರಿಯಬೇಡಿ ಹಾಗೆ ಮಾಡಿದರೆ ಪನ್ನೀರ್‌ ಗಟ್ಟಿಯಾಗಿ ಬಿಡುತ್ತದೆ. ನಂತರ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಬೆರೆಸಿದರೆ ರುಚಿಕರವಾದ ಪನ್ನೀರ್‌ ಬುರ್ಜಿ ಸವಿಯಲು ಸಿದ್ಧ.

ಬಟರ್‌ ನಾನ್‌:
ಬೇಕಾಗುವ ಸಾಮಾಗ್ರಿಗಳು:
ಮೈದಾ 1/2 ಕೆ.ಜಿ,ಹಾಲಿನ ಪುಡಿ 2 ಚಮಚ,ಅಡುಗೆ ಸೋಡಾ ಸ್ವಲ್ಪ ,ಮೊಸರು 1ಕಪ್‌ ,ಬೆಣ್ಣೆ , ಉಪ್ಪು ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ:
ಮೈದಾ ಹಿಟ್ಟನ್ನು ಚೆನ್ನಾಗಿ ಜರಡಿ ಇಟ್ಟುಕೊಳ್ಳಿ. ನಂತರ ಒಂದು ಅಗಲವಾದ ಪಾತ್ರೆಯಲ್ಲಿ ಮೈದಾ ಹಿಟ್ಟು, ಹಾಲಿನ ಪುಡಿ, ಅಡುಗೆ ಸೋಡಾ, ಮೊಸರು, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ ಬೇಕಿದ್ದರೆ ಸ್ವಲ್ಪ ನೀರನ್ನು ಹಾಕಿಕೊಳ್ಳಬಹುದು. ಹಿಟ್ಟನ್ನು ಚಪಾತಿ ಹಿಟ್ಟಿನಂತೆ ಕಲಸಿ ಸುಮಾರು 2-3 ಗಂಟೆಗಳ ಕಾಲ ಹಾಗೆ ಇಡಿ. ಆಮೇಲೆ ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿಕೊಂಡು ಚಪಾತಿಯಂತೆ ಲಟ್ಟಿಸಿ ಬೆಣ್ಣೆಯಿಂದ ಕಾಯಿಸಿದರೆ ಬಿಸಿಬಿಸಿಯಾದ ಮೃದುವಾದ ನಾನ್‌ ಸವಿಯಲು ಸಿದ್ಧ .

ಟಾಪ್ ನ್ಯೂಸ್

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.