ಲಾಕ್ ಡೌನ್ ಸಂಕಷ್ಟ: 55 ದಿನ ಏರ್‌ಪೋರ್ಟ್‌ನಲ್ಲಿದ್ದ ಜರ್ಮನ್ ಪ್ರಜೆ ಕೊನೆಗೂ ಊರಿಗೆ ಹೊರಟ!
Team Udayavani, May 14, 2020, 8:53 PM IST
ಬರೋಬ್ಬರಿ 55 ದಿನಗಳ ಕಾಲ ದೆಹಲಿ ಏರ್‌ಪೋರ್ಟ್‌ನಲ್ಲೇ ಲಾಕ್‌ಡೌನ್ ಆಗಿದ್ದ ಜರ್ಮನ್ ಪ್ರಜೆಯನ್ನು ಕೇಂದ್ರ ಸರ್ಕಾರ ಕೊನೆಗೂ ಆ್ಯಮ್‌ಸ್ಟರ್‌ಡ್ಯಾಂಗೆ ಕಳುಹಿಸಿಕೊಟ್ಟಿದೆ.
ಎಡ್ಗರ್ಡ್ ಝೀಬ್ಯಾಟ್ ಎಂಬಾತ ಮಾರ್ಚ್ 18ರಂದು ವಿಯೇಟ್ನಾಂನಿಂದ ಸಂಪರ್ಕಿತ ಏರ್‌ಟಿಕೆಟ್ ಪಡೆದು, ನವದೆಹಲಿ- ಇಸ್ತಾಂಬುಲ್ ಮಾರ್ಗವಾಗಿ ಜರ್ಮನಿ ತಲುಪಬೇಕಿತ್ತು. ಆದರೆ, ಅಷ್ಟರಲ್ಲಾಗಲೇ ಭಾರತ ಎಲ್ಲ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ನಿರ್ಬಂಧ ಹೇರಿತ್ತು.
ದೆಹಲಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಝೀಬ್ಯಾಟ್, ಇಲ್ಲಿನ ಜರ್ಮನಿ ರಾಯಭಾರ ಕಚೇರಿಗೆ ಹೋದರಾರೂ, ವಿಮಾನಯಾನಕ್ಕೆ ಅನುಮತಿ ಸಿಗಲಿಲ್ಲ. ಇತ್ತೀಚೆಗೆ ಇಸ್ತಾಂಬುಲ್ ಕಡೆಗೆ ಹೊರಟಿದ್ದ ವಿಶೇಷ ವಿಮಾನವು, ಈತನ ಬಳಿ ಟರ್ಕಿ ಪಾಸ್‌ಪೋರ್ಟ್ ಇಲ್ಲದ ಕಾರಣ ಹತ್ತಿಸಿಕೊಳ್ಳಲು ನಿರಾಕರಿಸಿತ್ತು.
ಇಷ್ಟು ದಿನ ದೆಹಲಿಯ ಏರ್‌ಪೋರ್ಟ್‌ನಲ್ಲೇ ಆಹಾರ, ಬಟ್ಟೆ, ಆಶ್ರಯ ಪಡೆದಿದ್ದ ಝೀಬ್ಯಾಟ್, ಮಂಗಳವಾರ ಕೆಎಲ್‌ಎಂ ವಿಮಾನ ಏರಿ ಜರ್ಮನಿ ತಲುಪಿದ್ದಾರೆ.
ಮುತ್ತಿನ ನಗರಿಗೆ 331 ಭಾರತೀಯರು
ಬೋಯಿಂಗ್- 773 ವಿಮಾನವು ಇಂಗ್ಲೆಂಡಿನಲ್ಲಿ ಅತಂತ್ರರಾಗಿದ್ದ 331 ಭಾರತೀಯ ಪ್ರಜೆಗಳನ್ನು ಮಂಗಳವಾರ ಹೈದರಾಬಾದ್‌ಗೆ ಸುರಕ್ಷಿತವಾಗಿ ಮುಟ್ಟಿಸಿದೆ.
ಮುತ್ತಿನ ನಗರಿಯ ವಿಮಾನ ನಿಲ್ದಾಣದಲ್ಲಿ ಪ್ರತಿ ಪ್ರಯಾಣಿಕರನ್ನೂ ಥರ್ಮಲ್ ಕ್ಯಾಮೆರಾಗಳ ಮೂಲಕ ಸ್ಕ್ರೀನಿಂಗ್ ನಡೆಸಲಾಗಿದೆ.
20-25 ಮಂದಿಯ ತಂಡ ರಚಿಸಿ, ನಿಗದಿತ ಕ್ವಾರಂಟೈನ್ ಸ್ಥಳಕ್ಕೆ ತಲುಪಿಸಲಾಗಿದೆ. ಬಳಿಕ, ಇದೇ ಬೋಯಿಂಗ್ ವಿಮಾನ 87 ಪ್ರಯಾಣಿಕರನ್ನು ಹೊತ್ತು ದೆಹಲಿ ಮೂಲಕ, ಅಮೆರಿಕಕ್ಕೆ ಹಾರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಗೊಂಡಿಯಾ ಬಸ್ ಅಪಘಾತ: 11ಕ್ಕೇರಿದ ಸಾವಿನ ಸಂಖ್ಯೆ, ಪರಿಹಾರ ಘೋಷಿಸಿದ ಪ್ರಧಾನಿ
Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ
Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
OTP ನಿಯಮದಿಂದ ಅಗತ್ಯ ಸೇವೆಗೆ ತೊಂದರೆ ಆಗದು: ಟ್ರಾಯ್
Election;ವಿಶ್ವಾಸಾರ್ಹತೆಗೆ ಧಕ್ಕೆ: ಕಾಂಗ್ರೆಸ್ ಆಂದೋಲನ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharashtra; ಗೊಂಡಿಯಾ ಬಸ್ ಅಪಘಾತ: 11ಕ್ಕೇರಿದ ಸಾವಿನ ಸಂಖ್ಯೆ, ಪರಿಹಾರ ಘೋಷಿಸಿದ ಪ್ರಧಾನಿ
Ramya: ಗೆಳೆಯನ ಜತೆಗಿನ ರಮ್ಯಾ ಫೋಟೋ ವೈರಲ್
Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್; ಮಹಿಳೆಯರು ಸೇರಿ ಹಲವರ ಸಾವು
Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.