![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 15, 2020, 5:08 AM IST
ನಿರ್ದೇಶಕ, ನಟ ಮತ್ತು ನಿರ್ಮಾಪಕರಾಗಿ ಗುರುತಿಸಿ ಕೊಂಡಿರುವ ರಿಷಬ್ ಶೆಟ್ಟಿ ತಮ್ಮ ಮುಂಬರುವ ಚಿತ್ರ ರುದ್ರಪ್ರಯಾಗ ನಿರ್ದೇಶನಕ್ಕೆ ಸಜ್ಜಾಗಿದ್ದು, ಅನಂತ್ ನಾಗ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ನಡುವೆಯೇ ತಾವೂ ಒಂದು ಚಿತ್ರದಲ್ಲಿ ಅಭಿನಯಿಸಲು ಸಜ್ಜಾಗಿರುವ ರಿಷಬ್ ಶೆಟ್ಟಿ ಗಿರಿ ಕೃಷ್ಣ ನಿರ್ದೇಶನದ ಹರಿಕಥೆ ಅಲ್ಲ ಗಿರಿ ಕಥೆ ಎಂಬ ಚಿತ್ರಕ್ಕಾಗಿ ಬಣ್ಣ ಹಚ್ಚುತ್ತಿದ್ದಾರೆ.
ವಿಶೇಷವೆಂದರೆ ಈ ಚಿತ್ರ ರಿಷಬ್ ಶೆಟ್ಟಿಯ ಪ್ರೊಡಕ್ಷನ್ ಹೌಸ್‌ನಿಂದಲೇ ನಿರ್ಮಾಣ ವಾಗುತ್ತಿದೆ. ಸದ್ಯ ಇದೀಗ ಪ್ರೀ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರ ಲಾಕ್‌ಡೌನ್ ನಂತರ ಪ್ರಾರಂಭವಾಗುವ ಸಾಧ್ಯತೆಯಿದೆ. ಈ ಹಿಂದೆ ರಿಷಬ್ ಬೆಲ್ ಬಾಟಮ್ ನಲ್ಲಿ ನಾಯಕನಾಗಿ ಶಸ್ವಿಯಾಗಿದ್ದು ಜಯತಿರ್ಥ ನಿರ್ದೇಶನದ ಕಾಮಿಡಿ ಕ್ರೈಮ್ ಥ್ರಿಲ್ಲರ್‌ಚಿತ್ರ 2018 ರಲ್ಲಿ ಅತಿದೊಡ್ಡ ಹಿಟ್ ಚಿತ್ರವಾಗಿ ಮೂಡಿಬಂದಿತ್ತು. ಈಗ ಇತರ ಭಾಷೆಗಳಲ್ಲೂ ಈ ಚಿತ್ರ ರೀಮೇಕ್ ಆಗುತ್ತಿದೆ. ಇದಾದ ನಂತರ ರಿಷಬ್ ರಕ್ಷಿತ್ ಶೆಟ್ಟಿಯವರ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಕೌಬಾಯ್ ಕೃಷ್ಣ ಪಾತ್ರದಲ್ಲಿ ರಿಷಬ್ ಕಾಣಿಸಿಕೊಂಡರು.
ಅಲ್ಲದೆ ಕಥಾ ಸಂಗಮ ಚಿತ್ರದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಅದಾದ ಬಳಿಕ ಈಗ ರಿಷಬ್ ಮತ್ತೆ ಪ್ರಮುಖ ನಾಯಕನ ಪಾತ್ರ ನಿರ್ವಹಿಸಲು ಸಜ್ಜಾಗಿದ್ದು ಹರಿಕಥೆ ಅಲ್ಲ ಗಿರಿ ಕಥೆ ಚಿತ್ರದ ಮೂಲಕ ಇನ್ನೊಮ್ಮೆ ಪ್ರೇಕ್ಷಕರ ಮುಂದೆ ಬರಲು ತಯಾರಿ ಮಾಡಿಕೊಳ್ಳುತ್ತಿ ದ್ದಾರೆ. ಇನ್ನು ಗಿರಿ ಕೃಷ್ಣ ಅವರು ರೀμಲ್ ಎಂಬ ಕಿರುಚಿತ್ರದಲ್ಲಿ ನಟಿಸಿದ್ದು ಲವ್ ಇನ್ ಮಂಡ್ಯ, ಎದೆಗಾರಿಕೆ, ಕರಿಯಾ ಕಣ್ ಬಿಟ್ಟಾ ಕಿರಿಕ್ ಪಾರ್ಟಿ ಇನ್ನೂ ಮೊದಲಾದ ಚಿತ್ರಗಳಲ್ಲಿ ಸಣ್ಣ ಸಣ್ಣ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಈ ಚಿತ್ರದ ಇತರ ಪಾತ್ರವರ್ಗಗಳ ಆಯ್ಕೆ ಇನ್ನೂ ನಡೆಯಬೇಕಿದ್ದು, ಚಿತ್ರಕ್ಕೆ ಅಜನೀಶ್ ಬಿ. ಲೋಕನಾಥ್ ಸಂಗೀತ ರಂಗನಾಥ್ ಛಾಯಾಗ್ರಹಣ ಮಾಡುತ್ತಿದ್ದಾರೆ ಎನ್ನಲಾಗಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.