ಬೇರೆಯವರ ಕಿಟ್ಗೆ ನಿಮ್ಮ ಹೆಸರೇಕೆ?
Team Udayavani, May 15, 2020, 5:13 AM IST
ಕಲಬುರಗಿ: ರವಿಶಂಕರ ಗುರೂಜೀ ಜ್ಞಾನ ಕ್ಷೇತ್ರದವರು ಜಿಲ್ಲಾಡಳಿತಕ್ಕೆ ಒಪ್ಪಿಸಿದ ಆಹಾರದ ಕಿಟ್ಗಳನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಹಂಚಿರುವುದನ್ನು ಖಂಡಿಸುತ್ತೇವೆ ಎಂದು ಮಹಾನಗರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸೂರಜಪ್ರಸಾದ ತಿವಾರಿ, ಮಹಾದೇವ ಬೆಳಮಗಿ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19ರ ಆಹಾರ ಕಿಟ್ಗಳನ್ನು ಸಂತ್ರಸ್ತರಿಗೆ ಹಂಚುವುದರಲ್ಲಿಯೂ ಯಾರದೋ ದುಡ್ಡು ಯಲ್ಲಮ್ಮ ಜಾತ್ರೆ ಎನ್ನುವಂತೆ ತೋರಿರುವುದು ಆತ್ಮಾವಕೋನ ಮಾಡಿಕೊಳ್ಳುವಂತಿದೆ ಎಂದು ಟೀಕಿಸಿದರು. ರವಿಶಂಕರ ಗುರೂಜಿ ಆಶ್ರಮದ ವತಿಯಿಂದ ಜಿಲ್ಲಾಡಳಿತಕ್ಕೆ ನೀಡಲಾದ ಆಹಾರದ ಕಿಟ್ಗಳು ಮಾಜಿ ಶಾಸಕರ ಕೈಗೆ ಹೇಗೆ ಸೇರಿತು ಎಂಬುವುದಕ್ಕೆ ತನಿಖೆ ಆಗಬೇಕು. ಬಹು ಮುಖ್ಯವಾಗಿ ವ್ಯಾಟ್ಸ್ ಆಪ್ ಗ್ರೂಪ್ನಲ್ಲಿ ಆಹಾರ ಕಿಟ್ ವಿತರಿಸುವ ಚಿತ್ರದ ಕೆಳಗೆ, ಬಡವರ ಬಂಧು ಅಲ್ಲಮಪ್ರಭು ಪಾಟೀಲ ವೈಯಕ್ತಿವಾಗಿ ಕಿಟ್ಗಳನ್ನು ಹಂಚುತ್ತಿದ್ದಾರೆ ಎಂದು ಹೇಳಿಕೊಂಡಿರುವುದು ಯಾವ ಪುರುಷಾರ್ಥಕ್ಕೆ ಎಂದು ಖಾರವಾಗಿ ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.