ಮೊಬೈಲ್ ಬ್ಯಾಂಕಿಂಗ್‌ಗೆ ಮಾಲ್ವೇರ್
Team Udayavani, May 15, 2020, 7:31 AM IST
ಸಾಂದರ್ಭಿಕ ಚಿತ್ರ
ನವದೆಹಲಿ: ನಿಮ್ಮಲ್ಲಿ ಆ್ಯಂಡ್ರಾಯ್ಡ್ ಮೊಬೈಲ್ ಇದೆಯೇ, ನೀವು ಮೊಬೈಲ್ ಬ್ಯಾಂಕಿಂಗ್ ಬಳಕೆದಾರರೇ? ಸ್ವಲ್ಪ ಎಚ್ಚರ ತಪ್ಪಿದರೂ ನಿಮ್ಮ ಖಾತೆಗೆ ಕನ್ನ ಬೀಳುವ ಸಾಧ್ಯತೆಯಿದೆ.
ಇವೆಂಟ್ ಬೋಟ್ ಎಂಬ ಮೊಬೈಲ್ ಬ್ಯಾಂಕಿಂಗ್ ಮಾಲ್ವೇರ್ ಒಂದು ಇತ್ತೀಚೆಗೆ ಸೈಬರ್ ಸ್ಪೇಸ್‌ನಲ್ಲಿ ಸಕ್ರಿಯವಾಗಿದ್ದು, ಭಾರತದ ಆ್ಯಂಡ್ರಾಯ್ಡ್ ಫೋನ್ ಬಳಕೆದಾರರ ವೈಯಕ್ತಿಕ ಹಣಕಾಸಿನ ಮಾಹಿತಿಯನ್ನು ಕದಿಯುತ್ತಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಫೆಡರಲ್ ಸೈಬರ್ ಸೆಕ್ಯೂರಿಟಿ ಸಂಸ್ಥೆಯೇ ಹೊರಹಾಕಿದೆ.
“ಟ್ರೋಜನ್ ವೈರಸ್ ನಿಮಗೆ ಅರಿವಿಲ್ಲದಂತೆಯೇ ಕಣ್ಣಿಗೆ ಮಣ್ಣೆರಚಿ ಹಣಕಾಸು ಮಾಹಿತಿಯನ್ನು ಕದಿಯುತ್ತಿದೆ’ ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ. ಈ ಟ್ರೋಜನ್ ವೈರಸ್ ಥರ್ಡ್ ಪಾರ್ಟಿ ಅಪ್ಲಿಕೇಷನ್ ಡೌನ್‌ಲೋಡ್ ಮಾಡುವಂಥ ಸೈಟ್‌ಗಳನ್ನು ಬಳಸಿಕೊಂಡು ಮೈಕ್ರೋಸಾಫ್ಟ್ ವರ್ಡ್, ಅಡೋಬೆ ಪ್ಲ್ಯಾಶ್ ಹಾಗೂ ಇತರೆ ಅಪ್ಲಿಕೇಷನ್‌ಗಳಂತೆ ಸೋಗು ಹಾಕಿ ಗೊತ್ತೇ ಇಲ್ಲದಂತೆ ನಿಮ್ಮ ಮೊಬೈಲ್ ಫೋನ್‌ನೊಳಕ್ಕೆ ನುಸುಳುತ್ತದೆ. ಗ್ರಾಹಕರ ಹಣಕಾಸು ಆ್ಯಪ್‌ಗ್ಳಲ್ಲಿನ ದತ್ತಾಂಶಗಳನ್ನು ಕದಿಯುವ, ಎಸ್‌ಎಂಎಸ್ ಸಂದೇಶಗಳನ್ನು ಓದುವ ಮತ್ತು ಛೇದಿಸುವ ಸಾಮರ್ಥ್ಯವನ್ನು ಈ ಮಾಲ್ವೇರ್ ಹೊಂದಿದೆ.
ಇವೆಂಟ್ ಬೋಟ್ ಸದ್ಯಕ್ಕೆ ಅಮೆರಿಕ ಮತ್ತು ಐರೋಪ್ಯ ಮೂಲದ ಬ್ಯಾಂಕಿಂಗ್ ಆ್ಯಪ್ಲಿಕೇಷನ್‌ಗಳು, ಹಣ ವರ್ಗಾವಣೆ ಸೇವೆಗಳು, ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗಳು, ಇತರ ಹಣಕಾಸು ಸಂಬಂಧಿ ಆ್ಯಪ್ಲಿಕೇಷನ್ ಸೇರಿದಂತೆ ಸುಮಾರು 200 ವಿವಿಧ ಆ್ಯಪ್ಲಿಕೇಷನ್‌ಗಳನ್ನು ಟಾರ್ಗೆಟ್ ಮಾಡಿದೆ. ಈವರೆಗೂ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇವೆಂಟ್ ಬೋಟ್ ಕಾಣಸಿಕ್ಕಿಲ್ಲ. ಆದರೆ, ಅದು ಮೊಬೈಲ್ ಫೋನ್‌ನ ನೈಜ ಅಪ್ಲಿಕೇಷನ್ ನ ಸೋಗಿನಲ್ಲಿ ಕಾಣಿಸಿಕೊಂಡು ಗ್ರಾಹಕರನ್ನು ಯಾಮಾರಿಸುವ ಸಾಧ್ಯತೆ ಅಧಿಕವಾಗಿದೆ ಎಂದು ಭಾರತದ ಕಂಪ್ಯೂಟರ್ ತುರ್ತು
ಪ್ರತಿಕ್ರಿಯೆ ತಂಡ(ಸಿಇಆರ್ ಟಿ- ಇಂಡಿಯಾ) ಹೇಳಿದೆ. ಅಲ್ಲದೆ, ಯಾವುದೇ ಕಾರಣಕ್ಕೂ ವಿಶ್ವಾಸಾರ್ಹವಲ್ಲದ ಮೂಲಗಳಿಂದ, ಅಪರಿಚಿತ ವೆಬ್ ಸೈಟ್, ಲಿಂಕ್‌ಗಳಿಂದ ಆ್ಯಪ್ಲಿಕೇಷನ್
ಗಳನ್ನು ಡೌನ್‌ಲೋಡ್ ಅಥವಾ ಇನ್‌ಸ್ಟಾಲ್ ಮಾಡಿಕೊಳ್ಳಬೇಡಿ. ಗೂಗಲ್ ಪ್ಲೇಸ್ಟೋರ್‌ನಿಂದ ಕೂಡ ಯಾವುದೇ ಆ್ಯಪ್ ಡೌನ್‌ಲೋಡ್ ಮಾಡುವ ಮುನ್ನ ಅವುಗಳ ವಿವರವನ್ನು ಪರಿಶೀಲಿಸಿ, ಎಷ್ಟು ಡೌನ್ ಲೋಡ್ ಆಗಿದೆ, ಬಳಕೆದಾರರು ಏನನ್ನುತ್ತಾರೆ, ಗ್ರಾಹಕರ ಪ್ರತಿಕ್ರಿಯೆಯೇನು ಎಂಬ ಮಾಹಿತಿಯನ್ನು ಸೂಕ್ಷ್ಮವಾಗಿ ಓದಿಕೊಂಡೇ ಡೌನ್‌ಲೋಡ್ ಮಾಡಿ ಎಂದು ಸಿಇಆರ್‌ಟಿ
ಸಲಹೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.