ಗಂಟೆಗೆ 50 ಕೋವಿಡ್ ನೆಗೆಟಿವ್‌ ಪರೀಕ್ಷೆ

ಸರ್ಕಾರಿ ಪ್ರಯೋಗಾಲಯಕ್ಕೆ ಟ್ರೂನ್ಯಾಟ್‌ ಯಂತ್ರಜಿಲ್ಲೆಯ ಪ್ರಯೋಗಾಲಯಕ್ಕೆ ಬಲ

Team Udayavani, May 15, 2020, 11:40 AM IST

15-May-04

ಸಾಂದರ್ಭಿಕ ಚಿತ್ರ

ವಿಜಯಪುರ: ಕೋವಿಡ್‌-19 ಸೋಂಕಿತರಿಂದ ಬಾಧಿತವಾಗಿರುವ ಗಡಿ ಜಿಲ್ಲೆ ವಿಜಯಪುರಕ್ಕೆ ಸೋಂಕು ನೆಗೆಟಿವ್‌ ಪತ್ತೆ ಮಾಡುವ ಹೊಸ ಯಂತ್ರಗಳು ಬಂದಿವೆ. ಕಳೆದ ಮೇ 2 ರಿಂದ ನಗರದಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಕೊರೊನಾ ಸೋಂಕು ಪತ್ತೆಗೆ ಬಂದಿರುವ ಸಿಬಿನ್ಯಾಟ್‌ ಯಂತ್ರೋಪಕರಣ ಸಕ್ರೀಯವಾಗಿ ಕಾರ್ಯಾಚರಣೆ ನಡೆಸಿದೆ. ಇದರ ಬೆನ್ನಲ್ಲೇ ಜಿಲ್ಲೆಗೆ ಇನ್ನೂ ಹೆಚ್ಚಿನ ಸೌಲಭ್ಯಕ್ಕಾಗಿ ಟ್ರ್ಯೂನ್ಯಾಟ್‌ ಯಂತ್ರಗಳು ಜಿಲ್ಲೆಯ ಪ್ರಯೋಗಾಲಯವನ್ನು ಬಲಪಡಿಸಿವೆ.

ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಜಿಲ್ಲೆಯ ಶಾಸಕರು ಒಕ್ಕೋರಲಾಗಿ ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ಪ್ರಯೋಗಾಲಯಕ್ಕೆ ಬೇಡಿಕೆ ಸಲ್ಲಿಸಿದ್ದರು. ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ ಕೂಡ ಜಿಲ್ಲೆಗೆ ಆಗಮಿಸಿದ್ದ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಕೊರೊನಾ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವುದಕ್ಕೆ ಪ್ರಯೋಗಾಲಯಕ್ಕೆ ಆಧುನಿಕ ಯಂತ್ರೋಪಕರಣದ ಅಗತ್ಯದ ಮನವರಿಕೆ ಮಾಡಿಕೊಟ್ಟಿತ್ತು. ಪರಿಣಾಮ ಜಿಲ್ಲೆಗೆ ಸಿಬಿನ್ಯಾಟ್‌ ಯಂತ್ರೋಪಕರಣ ಮಂಜೂರಾಗಿತ್ತು.

ಪರಿಣಾಮ ಮೇ 2 ರಿಂದ ವಿಜಯಪುರ ನಗರದಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಿ.ಬಿ.ನ್ಯಾಟ್‌ ಯಂತ್ರ ಈಗಾಗಲೇ ಜಿಲ್ಲೆಯಲ್ಲಿ 115 ವ್ಯಕ್ತಿಗಳ ಗಂಟಲು ಪ್ರಯೋಗ ನಡೆಸಿ, ವರದಿ ನೀಡಿದೆ. ಸದರಿ ಯಂತ್ರದಿಂದ ದಿನಕ್ಕೆ 20-25 ಪ್ರಕರಣಗಳನ್ನು ಪರೀಕ್ಷಿಸುವ ಸಾಮರ್ಥ್ಯ ಇದೆ. ಈಗಾಗಲೇ ಕೆಲಸ ಆರಂಭಿಸಿರುವ ಸಿಬಿನ್ಯಾಟ್‌ ಯಂತ್ರ ಕಳೆದ 12 ದಿನಗಳಲ್ಲಿ 115 ಪ್ರಕರಣಗಳ ಪರೀಕ್ಷೆ ನಡೆಸಿದೆ.

ಟ್ರ್ಯೂನ್ಯಾಟ್‌ ಯಂತ್ರಗಳು ಸ್ಕ್ರೀನಿಂಗ್‌ ಟೆಸ್ಟ್‌ ಮಾಡಿ, ಕರೊನಾ ನೆಗೆಟಿವ್‌ ಇರುವುದನ್ನು ಮಾತ್ರ ಗುರುತಿಸಲಿವೆ. ನೆಗೆಟಿವ್‌ ವರದಿ ಬಾರದವರನ್ನು ಶಂಕಿತರೆಂದು ಗುರುತಿಸಿ, ಸೋಂಕುಪತ್ತೆ ಪರೀಕ್ಷೆಗೆ ಒಳಪಡಿಸಲು ಸಹಕಾರಿ ಆಗಲಿದೆ. ಸದ್ಯ ಬಂದಿರುವ ಯಂತ್ರಗಳಲ್ಲಿ ಪ್ರತಿ ಯಂತ್ರ ಗಂಟೆಗೆ 50 ಪ್ರಕರಣ ಪರೀಕ್ಷೆ ನಡೆಸುವ ಸಮರ್ಥ್ಯ ಹೊಂದಿವೆ. ಆದರೆ ಕಾಟ್ರೇಜ್‌ ಸಾಮರ್ಥ್ಯ ಕಡಿಮೆ ನೀಡಿರುವ ಕಾರಣ ಪ್ರತಿ ಯಂತ್ರದಿಂದ ಸದ್ಯ ತಲಾ 4 ರಂತೆ ಒಟ್ಟು 8 ಪ್ರಕರಣಗಳ ಪರೀಕ್ಷೆ ನಡೆಸಲಿವೆ. ಸದರಿ ಯಂತ್ರ ಒಂದೆರಡು ದಿನಗಳಲ್ಲಿ ತನ್ನ ಕೆಲಸ ಆರಂಭಿಸುವ ನಿರೀಕ್ಷೆ ಇದೆ. ಜಿಲ್ಲೆಗೆ ಹೊರ ರಾಜ್ಯ, ಅಂತರಜಿಲ್ಲೆಗಳಿಂದ ಈಗಾಗಲೇ ಆಗಮಿಸಿರುವ ಸುಮಾರು 7 ಸಾವಿರ ಜನರನ್ನು ಥರ್ಮಲ್‌ ಸ್ಕ್ರೀನಿಂಗ್‌ ಮಾತ್ರ ಮಾಡಿ, ಸಾಂಸ್ಥಿಕ ಕ್ವಾರಂಟೆ„ನ್‌ ನಿಗಾದಲ್ಲಿ ಇರಿಸಲಾಗಿದೆ. ಭವಿಷ್ಯದಲ್ಲಿ ಸರ್ಕಾರ ಹೊರಗಿನಿಂದ ಬಂದಿರುವ ಎಲ್ಲರನ್ನೂ ಗಂಟಲು ದ್ರವ ಪರೀಕ್ಷೆ ಮಾಡಲು ಸರ್ಕಾರ ನಿರ್ಧರಿಸಿದರೆ ಸಿಬಿನ್ಯಾಟ್‌ ಜೊತೆಗೆ ಟ್ರ್ಯೂನ್ಯಾಟ್‌ಯಂತ್ರ ಅತ್ಯಂತ ಸಹಕಾರಿ ಆಗಲಿದೆ.

ಸದ್ಯ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಬರುವವರನ್ನು ಥರ್ಮಲ್‌ ಸ್ಕ್ರೀನಿಂಗ್‌ ಪರೀಕ್ಷೆ ಮಾಡಿ, ಗ್ರಾಮೀಣ ಪ್ರದೇಶದವರನ್ನು ಸಾಂಸ್ಥಿಕ ಕ್ವಾರಂಟೈನ್‌ ಮೂಲಕ ಉಚಿತ ಸೌಲಭ್ಯ ಕಲ್ಪಿಸಲಾಗುತ್ತಿದೆ. ನಗರದವರಿಗೆ ಹಣ ಪಾವತಿ ಮೂಲಕ ಹೋಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲು ವ್ಯವಸ್ಥೆ ಮಾಡಿದೆ. 0ಇದಕ್ಕಾಗಿ ಈಗಾಗಲೇ ಸರ್ಕಾರಿ ಶಾಲೆ, ವಸತಿ ಶಾಲೆ, ಹಾಸ್ಟೆಲ್‌ಗ‌ಳಲ್ಲಿ ಕ್ವಾರಂಟೈನ್‌ ಕೇಂದ್ರ ತೆರೆಯಲಾಗಿದೆ.

ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹೊರ ರಾಜ್ಯಗಳಿಂದ ಬರುವ ಕಾರ್ಮಿಕರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡುವ ಕೇಂದ್ರ ತೆರೆಯಲು ಗ್ರಾಮೀಣ ಪ್ರದೇಶದ ಖಾಸಗಿ ಶಾಲೆಗಳನ್ನು ಗುರುತಿಸಲಾಗುತ್ತಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಆಯಾ ತಹಸೀಲ್ದಾರರಿಗೆ ಸೂಚಿಸಿದ್ದಾರೆ.

ಹೊರಗಿನಿಂದ ಜಿಲ್ಲೆಗೆ ಬಂದಿರುವವರು ತಾವು ವಾಸವಿದ್ದ ಸ್ಥಳದಲ್ಲಿ ಕ್ವಾರಂಟೈನ್‌ ನಿಗಾದಲ್ಲಿ ಇದ್ದರೂ ಜಿಲ್ಲೆಗೆ ಆಗಮಿಸಿದ ಬಳಿಕ ಸ್ಕ್ರೀನಿಂಗ್‌ ಪರೀಕ್ಷೆ ಹಾಗೂ 14 ದಿನಗಳ
ಕಾಲ ಕ್ವಾರಂಟೈನ್‌ ಆಗುವುದು ಕಡ್ಡಾಯ. ಸಾಂಸ್ಥಿಕ ಕ್ವಾರಂಟೈನ್‌ ಆಗುವ ಗ್ರಾಮೀಣ ಜನರಿಗೆ ಜಿಲ್ಲಾಡಳಿತವೇ ಊಟ-ವಸತಿಯಂಥ ಮೂಲಭೂತ ಸೌಲಭ್ಯ ಕಲ್ಪಿಸಲಿದೆ.
ವೈ.ಎಸ್‌.ಪಾಟೀಲ
ಜಿಲ್ಲಾಧಿಕಾರಿ, ವಿಜಯಪುರ

ಜಿ.ಎಸ್‌. ಕಮತರ

ಟಾಪ್ ನ್ಯೂಸ್

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?

1-kanna

Karnataka; ವಲಸಿಗರು ಈ ನಾಡಿಗೊಂದು ಸಮಸ್ಯೆ ಆಗದಿರಲಿ…

1-vtu

Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್‌ ಪದವಿ ಕೊಡಲಿದೆ ವಿಟಿಯು!

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

NIkhil KUMMI

Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ

1-madaraa

CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?

1-kanna

Karnataka; ವಲಸಿಗರು ಈ ನಾಡಿಗೊಂದು ಸಮಸ್ಯೆ ಆಗದಿರಲಿ…

1-vtu

Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್‌ ಪದವಿ ಕೊಡಲಿದೆ ವಿಟಿಯು!

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.