1 Day Sooner : ಕೋವಿಡ್‌ ಲಸಿಕೆ ಪ್ರಯೋಗಕ್ಕೊಡ್ಡಿಕೊಳ್ಳಲು ತಯಾರಾಗಿರುವ ಸ್ವಯಂ ಸೇವಕರ ಪಡೆ


Team Udayavani, May 15, 2020, 2:58 PM IST

1 Day Sooner

ವಾಷಿಂಗ್ಟನ್‌: ಇಡೀ ಜಗತ್ತು ಕೋವಿಡ್‌ ಎಂಬ ಮಹಾಮಾರಿಯ ವಿರುದ್ಧ ಹೋರಾಡುತ್ತಿದ್ದರೆ ಕೆಲವು ಮಂದಿ ಈ ವೈರಸ್‌ ನಮಗೆ ಬರಲಿ ಎಂದು ಹಾರೈಸುತ್ತಿದ್ದಾರೆ. ವಿಚಿತ್ರ ಆದರೂ ಸತ್ಯ, ಹೀಗೊಂದು ಆನ್‌ಲೈನ್‌ ಟ್ರೆಂಡ್‌ ಈಗ ಶುರುವಾಗಿದೆ. ಆದರೆ ಅವರ ಈ ಹಾರೈಕೆಯ ಹಿಂದೆ ಮನುಕುಲಕ್ಕೆ ಒಳಿತಾಗಲಿ ಎಂಬ ಮಹೋನ್ನತವಾದ ಧ್ಯೇಯ ಇದೆ.

ಕೋವಿಡ್‌ಗೆ ಲಸಿಕೆ ಮತ್ತು ಮದ್ದು ಕಂಡುಕೊಳ್ಳುವ ನೂರಕ್ಕೂ ಹೆಚ್ಚು ಸಂಶೋಧನೆಗಳೇನೋ ನಡೆಯುತ್ತಿವೆ. ಆದರೆ ಯಾವುದೂ ನಿರೀಕ್ಷಿತ ಫ‌ಲಿತಾಂಶ ನೀಡಿಲ್ಲ. ಅಲ್ಲದೆ ಯಾವುದೇ ಲಸಿಕೆ ಕಂಡು ಹಿಡಿದರೂ ಅದನ್ನು ಮೊದಲು ಪ್ರಾಣಿಗಳಿಗೆ ನೀಡಿ ಪರಿಶೀಲಿಸಬೇಕು. ಇದು ಬಹಳ ಸಮಯ ಬೇಡುವ ಪ್ರಕ್ರಿಯೆ. ಹೀಗೆ ಒಂದೊಂದೇ ಲಸಿಕೆಯನ್ನು ಪ್ರಾಣಿಗಳ ಮೇಲೆ ಪ್ರಯೋಗಿಸುತ್ತಾ ಹೋದರೆ ನಿಜವಾದ ಲಸಿಕೆ ಸಿಗಲು ಹಲವು ವರ್ಷಗಳೇ ಹಿಡಿಯಬಹುದು. ಅಷ್ಟರೊಳಗೆ ಅದೆಷ್ಟೋ ಲಕ್ಷ ಮಂದಿಯ ಪ್ರಾಣವನ್ನು ಕೋವಿಡ್‌ ಹರಣಗೊಳಿಸಬಹುದು.

ಈ ಹಿನ್ನೆಲೆಯಲ್ಲಿ ಲಸಿಕೆ ಅಥವಾ ಮದ್ದಿನ ಪ್ರಯೋಗಕ್ಕೆ ನೇರವಾಗಿ ತಮ್ಮನ್ನು ಒಡ್ಡಿಕೊಳ್ಳಲು 16,000ಕ್ಕೂ ಹೆಚ್ಚು ಮಂದಿ ಮುಂದೆ ಬಂದಿದ್ದಾರೆ. ಇವರಿಗಾಗಿ 1 Day Sooner ಎಂಬ ವೆಬ್‌ಸೈಟ್‌ ಪ್ರಾರಂಭಿಸಲಾಗಿದ್ದು, ಇದರಲ್ಲಿ ಆನ್‌ಲೈನ್‌ ನೋಂದಣಿ ಮಾಡಿಕೊಳ್ಳಬೇಕು.

ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯವನ್ನು ತ್ವರಿತಗೊಳಿಸುವ ಸಲುವಾಗಿ ಕೋವಿಡ್‌ ವೈರಸ್‌ಗೆ ತುತ್ತಾಗಲು ನಾನು ತಯಾರಾಗಿದ್ದೇನೆ ಎಂಬ ಘೋಷಣೆ ಈ ವೆಬ್‌ಸೈಟಿನಲ್ಲಿದ್ದು, ನೋಂದಣಿ ಮಾಡಿಕೊಳ್ಳುವವರು ಈ ಘೋಷಣೆಯನ್ನು ಒಪ್ಪಿಕೊಳ್ಳಬೇಕು.

ಹೀಗೆ ನೇರವಾಗಿ ಮನುಷ್ಯರ ಮೇಲೆ ಲಸಿಕೆ ಪ್ರಯೋಗ ನಡೆಸುವುದನ್ನು human challenge study ಅಥವಾ controlled human infection study ಎಂದು ಕರೆಯುತ್ತಾರೆ. ಇದು ಲಸಿಕೆ ಆವಿಷ್ಕಾರವನ್ನು ಕೆಲವು ತಿಂಗಳ ಕಾಲದ ಮಟ್ಟಿಗಾದರೂ ತ್ವರಿತಗೊಳಿಸುತ್ತದೆ.

ಕೋವಿಡ್‌ ಸೋಂಕಿತರನ್ನು ಕರೆತಂದು ಅವರಿಂದ ಒಪ್ಪಿಗೆ ಪಡೆದು ಲಸಿಕೆಗಳನ್ನು ಪ್ರಯೋಗಿಸಿ ನೋಡುತ್ತಾ ಕುಳಿತುಕೊಳ್ಳುವುದು ಸಮಯ ತಿನ್ನುವ ಪ್ರಕ್ರಿಯೆ. ಹ್ಯುಮನ್‌ ಇನ್‌ಫೆಕ್ಷನ್‌ ಸ್ಟಡಿಯಲ್ಲಿ ರೋಗಿಗಳಾಗಳು ಒಪ್ಪಿಕೊಂಡವರಿಗೆ ಮೊದಲು ಲಸಿಕೆ ನೀಡಿ ಬಳಿಕ ಸಿರಿಂಜ್‌, ಕಾಕ್‌ಟೈಲ್‌, ಸೊಳ್ಳೆ ಕಡಿತ ಅಥವಾ ಮೂಗಿನ ಸ್ಪ್ರೆ ಮೂಲಕ ನೇರವಾಗಿ ಸೋಂಕು ತಗಲುವಂತೆ ಮಾಡಲಾಗುತ್ತದೆ. ಲಸಿಕೆ ಯಾವ ರೀತಿ ಅವರ ಮೇಲೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಈ ಮೂಲಕ ತ್ವರಿತವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಇಂಥ ಪ್ರಯೋಗಕ್ಕೊಡ್ಡಿಕೊಳ್ಳಲು ಸ್ವ ಇಚ್ಚೆಯಿಂದ ಮುಂದೆ ಬರುವವರಿಗೆ ಭಾರೀ ದೊಡ್ಡ ಪ್ರತಿಫ‌ಲ ಸಿಗುತ್ತದೆ. ಆದರೆ ಇದು ಭಾರೀ ಅಪಾಯವಿರುವ, ಒಂದರ್ಥದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಆಡುವ ಆಟದಂತೆ.

ಮಾ.31ರಂದು ಜರ್ನಲ್‌ ಆಫ್ ಇನ್‌ಫೆಕಿಯಸ್‌ ಡಿಸೀಸಸ್‌ ಎಂಬ ನಿಯತಕಾಲಿಕದಲ್ಲಿ ಪ್ರಕಟವಾದ ಲೇಖನವೊಂದು ಕೋವಿಡ್‌ ವೈರಸ್‌ ಲಸಿಕೆ ಪ್ರಯೋಗಕ್ಕೊಡ್ಡಿಕೊಳ್ಳಲು ಸ್ವಯಂ ಮುಂದೆ ಬರುವ ಅಭಿಯಾನಕ್ಕೆ ಪ್ರೇರಣೆಯಾಗಿದೆ. ಜಗತ್ತಿಗೆ ಕೋವಿಡ್‌ ನಿಗ್ರಹಿಸುವ ಲಸಿಕೆ ಎಷ್ಟು ಕ್ಷಿಪ್ರವಾಗಿ ಅಗತ್ಯವಿದೆ ಎಂಬ ಅಂಶವನ್ನು ಈ ಲೇಖನದಲ್ಲಿ ಪ್ರತಿಪಾದಿಸಲಾಗಿತ್ತು.

ಹ್ಯುಮನ್‌ ಚಾಲೆಂಜ್‌ ಸ್ಟಡಿಗೆ ನೋಂದಣಿ ಮಾಡಿಕೊಳ್ಳುವವರು ತಮ್ಮ ವೈದ್ಯಕೀಯ ಮಾಹಿತಿಗಳು, ವಂಶವಾಹಿಗಳ ಕುರಿತಾಗಿ ಲಭ್ಯವಿರುವ ಮಾಹಿತಿ ಇತ್ಯಾದಿಗಳನ್ನು ನೀಡಬೇಕಾಗುತ್ತದೆ. ಉಳಿದಂತೆ ವಾಸವಿರುವ ಪ್ರದೇಶ, ಪ್ರಾಯ, ಕೌಟುಂಬಿಕ ಹಿನ್ನೆಲೆ ಈ ಮುಂತಾದ ಸಾಮಾನ್ಯ ಮಾಹಿತಿಗಳನ್ನೂ ನೀಡಬೇಕು.

ಜೋಶ್‌ ಮೊರಿಸನ್‌ ಎಂಬವರು ಒನ್‌ ಡೇ ಸೂನರ್‌ ವೆಬ್‌ಸೈಟ್‌ನ ಸ್ಥಾಪಕ. ಕಾರ್ಪೋರೇಟ್‌ ಸಂಸ್ಥೆಗಳ ವಕೀಲರಾಗಿದ್ದ ಮೊರಿಸನ್‌ ಪ್ರಸ್ತುತ ಈ ಕೆಲಸವನ್ನು ಬಿಟ್ಟು ಮನುಕುಲವನ್ನು ಮಾರಕ ಕಾಯಿಲೆಗಳಿಂದ ರಕ್ಷಿಸುವ ಉದಾತ್ತ ಕಾರ್ಯಕ್ಕಿಳಿದಿದ್ದಾರೆ. ಕಿಡ್ನಿ ದಾನಿಗಳು ಮತ್ತು ಪಡೆಯುವವರ ನಡುವೆ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸುವ ವೈಟ್‌ಲಿಸ್ಟ್‌ ಜೀರೊ ಎಂಬ ಸೇವಾ ಸಂಸ್ಥೆಯನ್ನು ಅವರು ಕೆಲವು ವರ್ಷಗಳ ಹಿಂದೆಯೇ ಸ್ಥಾಪಿಸಿದ್ದಾರೆ. ಕೋವಿಡ್‌ನಿಂದಾಗಿ ಸದ್ಯ ಕಿಡ್ನಿ ಕಸಿಯಂಥ ಚಿಕಿತ್ಸೆಗಳೆಲ್ಲ ಸ್ಥಗಿತಗೊಂಡಿರುವುದರಿಂದ ಮೊರಿಸನ್‌ ಬಿಡುವಿನ ವೇಳೆಯಲ್ಲಿ ಒನ್‌ ಡೇ ಸೂನರ್‌ ಮೂಲಕ ಕೋವಿಡ್‌ ಲಸಿಕೆ ಪರಿಕ್ಷೆಗೆ ಸ್ವಯಂ ಸೇವಕರಾಗಲು ತಯಾರಿರುವವರನ್ನು ಒಟ್ಟುಗೂಡಿಸುತ್ತಿದ್ದಾರೆ.

ಆದರೆ ಕೋವಿಡ್‌ ಲಸಿಕೆಯನ್ನು ನೇರವಾಗಿ ಮನುಷ್ಯರ ಮೇಲೆ ಪ್ರಯೋಗಿಸಿ ನೋಡುವ ಸಾಹಸಕ್ಕೆ ವೈಜ್ಞಾನಿಕ ಸಮುದಾಯದಿಂದ ತೀವ್ರ ವಿರೋಧವೂ ವ್ಯಕ್ತವಾಗಿದೆ. ಇದು ಆಳ ನೋಡಲು ಯಾರಧ್ದೋ ಮಕ್ಕಳನ್ನು ನೀರಿಗಿಳಿಸಿದಂತೆ. ಕನಿಷ್ಠ ಲಸಿಕೆಯ ತೀವ್ರತೆಯನ್ನಾದರೂ ಪ್ರಾಣಿಗಳ ಮೇಲೆ ಪರೀಕ್ಷಿಸಿ ನೋಡುವುದು ಉಚಿತ ಎನ್ನುವ ಸಲಹೆಯನ್ನು ವಿಜ್ಞಾನಿಗಳು ನೀಡಿದ್ದಾರೆ. ಕೋವಿಡ್‌ ವೈರಸ್‌ ಸ್ವತಃ ನಿಗೂಢವಾಗಿದೆ. ಅದರ ಸಂರಚನೆಯನ್ನು ಪರಿಪೂರ್ಣವಾಗಿ ತಿಳಿದುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಹೀಗಿರುವಾಗ ಮನುಷ್ಯರನ್ನು ಅಪಾಯಕ್ಕೆ ತಳ್ಳುವುದು ಸರಿಯಲ್ಲ ಎನ್ನುತ್ತಾರೆ ಯುನಿವರ್ಸಿಟಿ ಆಫ್ ಸೌತಾಂಪ್ಟನ್‌ನ ಡಾ| ರಾಬರ್ಟ್‌ ರೀಡ್‌.

ಟಾಪ್ ನ್ಯೂಸ್

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!

Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!

Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ

Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.