ಕೋವಿಡ್‌ನಿಂದ ಎಚ್‌ಐವಿ ರೋಗಿಗಳಿಗೂ ಗಂಡಾಂತರ
Team Udayavani, May 15, 2020, 7:00 PM IST
ಮಣಿಪಾಲ : ಕೋವಿಡ್ ದೆಸೆಯಿಂದಾಗಿ ಉಳಿದ ರೋಗಗಳಿಗೆ ತೀರಾ ಅನಿವಾರ್ಯ ಅಥವಾ ತುರ್ತು ಎನಿಸದಿದ್ದರೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಹಿಂದುಮುಂದು ನೋಡುತ್ತಿವೆ. ಶಸ್ತ್ರಚಿಕಿತ್ಸೆಯನ್ನು ಮುಂದೂಡಲಾಗುತ್ತಿದೆ. ಇದರಿಂದಾಗಿ ಇತರ ರೋಗಿಗಳು ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಆದರೆ ಈ ನಡುವೆ ಮತ್ತೂಂದು ಆಪತ್ತು ಎದುರಾಗುತಿದೆ. ಹೆಚ್‌ಐವಿ ಪ್ರಕರಣಗಳು ಅಧಿಕವಾಗಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಒಂದು ಮರಣಾಂತಿಕ ಸೋಂಕಿನ ವಿರುದ್ಧ ಹೋರಾಡುತ್ತಿರುವಾಗಲೇ ಮತ್ತೂಂದು ರೋಗಕ್ಕೆ ತುತ್ತಾಗಿ ಸಾಯುವಂತಾಗಿದೆ.
5 ಲಕ್ಷಕ್ಕೂ ಹೆಚ್ಚು ಸಾವು
ಮೂರು ತಿಂಗಳಿಂದ ಇತರ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಪರಿಸ್ಥಿತಿ ಹೀಗೆ ಮುಂದುವರಿದು ಚಿಕಿತ್ಸೆ ಹಾಗೂ ಔಷಧ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ್ದರೆ ಜಾಗತಿಕವಾಗಿ ಕನಿಷ್ಠ 5 ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಲಿದ್ದಾರೆ.
ಶೇ.104 ಹೆಚ್ಚಳ
ಸಮರ್ಪಕವಾದ ಚಿಕಿತ್ಸೆ ಲಭಿಸದೆ ಏಡ್ಸ್ ನಿಂದ ಸಾವನ್ನಪ್ಪುವವರ ಪ್ರಮಾಣದಲ್ಲಿ ಶೇ.104 ಹೆಚ್ಚಳವಾಗಲಿದ್ದು, ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಗಿಂತಲೂ ಇದು ಹೆಚ್ಚಾಗಲಿದೆ. ಎಚ್‌ಐವಿ ಸಂಬಂಧಿತ ಹಾಗೂ ಕ್ಷಯ ರೋಗದಿಂದ ಆಫ್ರಿಕಾ ಖಂಡವೊಂದರಲ್ಲಿಯೇ ಈ ಪ್ರಮಾಣದ ಸಾವು ಸಂಭವಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಇತಿಹಾಸ ಮರುಕಳಿಸಲಿದೆ
ಇದೇ ಪರಿಸ್ಥಿತಿ ಮುಂದುವರಿದರೆ, 2008ಕ್ಕಿಂತಲೂ ಹಿಂದಿನ ಸ್ಥಿತಿ ಮರುಕಳಿಸಲಿದೆ. 2008ರಲ್ಲಿ 9.5 ಲಕ್ಷ ಜನರು ಏಡ್ಸ್ ಗೆ ಬಲಿಯಾಗಿದ್ದರು. ಅಂತದೇ ಬೆಳವಣಿಗೆ ಇದೀಗ ಮತ್ತೇ ಎದುರಾಗಲಿದ್ದು, ಮುಂದಿನ ಐದು ವರ್ಷಗಳವರೆಗೂ ಈ ಸಾವಿನ ಸರಣಿ ಮುಂದುವರಿಯಲಿದೆ. ಒಟ್ಟಾರೆ ಸಾವಿನ ಪ್ರಮಾಣದಲ್ಲಿ ಪ್ರತಿವರ್ಷ ಶೇ.40 ಏರಿಕೆ ಕಂಡುಬರಲಿದೆ ಎಂಬ ಕಳವಳ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.