ಲಾಕ್‌ಡೌನ್ ಬೇಸರ: ವಾಟ್ಸ್ ಆಪ್‌ನಲ್ಲಿ ಆಟ ಆಡಿ ಪರಿಹರಿಸಿ
Team Udayavani, May 15, 2020, 8:15 PM IST
ಮಣಿಪಾಲ: ಲಾಕ್‌ಡೌನ್‌ನಲ್ಲಿ ಮನೆಯೊಳಗೆ ಬಂಧಿಯಾಗಿರುವ ಹೆಚ್ಚಿನವರೆಲ್ಲರ ಅಳಲು ಒಂದೇ ಬೋರಿಂಗ್. ಅವರ ಬಳಿ ಟಚ್ ಸ್ಕ್ರೀನ್ ಮೊಬೈಲ್ ಇದೆ. ಟಚ್ ಸ್ಕ್ರೀನ್ ಮೊಬೈಲ್ ಇದ್ದ ಮೇಲಂತೂ ಅದರಲ್ಲಿ ವಾಟ್ಸ್ ಆಪ್, ಫೇಸ್‌ಬುಕ್, ಇನ್‌ಸ್ಕಾಗ್ರಾಂಗಳು ಮೂಮೂಲಿಯಾಗಿ ಇದ್ದೇ ಇರುತ್ತವೆ. ಇವುಗಳನ್ನು ನೋಡುತ್ತಿದ್ದಂತೆ ಸಮಯ ಹೇಗೆ ಹೋಗುತ್ತೆಂದೇ ಗೊತ್ತಾಗುವುದಿಲ್ಲ. ಆದರೂ ಅವರು ಸದಾ ಬೇಸರದಲ್ಲೇ ಇರುತ್ತಾರೆ. ಕಾಲ ಕಳೆಯುವುದು ಹೇಗೆ ಎಂಬ ಬಗ್ಗೆಯೇ ಯೋಚಿಸುತ್ತಿರುತ್ತಾರೆ. ಅಂತವರಿಗಾಗಿ ವಾಟ್ಸ್ ಆಪ್‌ನಲ್ಲಿ ಆಡಬಹುದಾದ ಆಟಗಳ ಬಗ್ಗೆ ಇಲ್ಲಿ ಪಟ್ಟಿ ಮಾಡಲಾಗಿದೆ. ಸುಮ್ನೆ ಟೆನ್ಶನ್ ಮಾಡದೆ ಆಟ ಆಡಿ.
ವಾಟ್ಸಾಪ್ ಈ ಆಟಗಳಲ್ಲಿ ಎಲ್ಲರನ್ನೂ ತೊಡಗಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಇದು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ಸಹ ನಿಮಗೆ ಸಹಾಯ ಮಾಡುತ್ತದೆ ಮತ್ತು ಎಲ್ಲರೂ ಈ ಆಟಗಳನ್ನು ಆಡುತ್ತಾ ಒಟ್ಟಿಗೆ ಆನಂದಿಸಬಹುದು. ವಾಟ್ಸಾಪ್ ಗ್ರೂಪ್‌ಗಳಲ್ಲಿ ಆಡಬಹುದಾದ 6 ಆಟಗಳು ಇಲ್ಲಿವೆ …
ಅಂತಾಕ್ಷರಿ ಹಾಡು
ಅಂತಾಕ್ಷರಿ ಈಗಾಗಲೇ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಮನೆಯಲ್ಲೇ ಆಡಿರುತ್ತೇವೆ. ಆದರೆ ವಾಟ್ಸಾಪ್‌ನಲ್ಲಿ ಭಿನ್ನ ರೀತಿಯಲ್ಲಿ ಅಂತಾಕ್ಷರಿಯನ್ನು ಆಡಬಹುದಾಗಿದೆ. ಇಲ್ಲಿ ನೀವು ಅದನ್ನು ಹಾಡುವ ಬದಲು ಸಾಹಿತ್ಯದ ಮೊದಲ ಸಾಲನ್ನು ಟೈಪ್ ಮಾಡಬೇಕು. ಕೊನೆಯ ಅಕ್ಷರಕ್ಕೆ ಮತ್ತೆ ಬೇರೆಯವರು ಸಾಹಿತ್ಯ ಬರೆಯುತ್ತಾ ಆಟವನ್ನು ಮುಂದುವರಿಸಬೇಕು.
ಒಂದಾನೊಂದು ಕಾಲದಲ್ಲಿ….
ವಾಟ್ಸಾಪ್ ಗುಂಪಿನ ಒಬ್ಬ ಸದಸ್ಯ ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ಎಂದು ಮೊದಲ ಸಾಲನ್ನು ಬರೆಯುತ್ತಾರೆ. ಅದಕ್ಕೆ ರೆಕ್ಕೆ ಪುಕ್ಕಗಳನ್ನು ಇನ್ನುಳಿದ ಸದಸ್ಯರು ಸೇರಿಸುತ್ತಾ ಅದನ್ನು ಒಂದು ಕಥೆಯ ರೂಪಕ್ಕೆ ತರಬೇಕು. ಇಲ್ಲವೇ ನಿಮ್ಮದೇ ಕಾಲೇಜಿನ ಗೆಳೆಯರಾಗಿದ್ದರೆ ಕಾಲೇಜ್ ಸ್ಟೋರಿಗಳನ್ನೇ ಬರೆದು ಆ ದಿನಗಳನ್ನೂ ಮೆಲುಕು ಹಾಕಬಹುದು.
ಎಮೋಜಿ ಕ್ವಿಜ್
ಇದೀಗ, ನಿರ್ದಿಷ್ಟ ಎಮೋಜಿಗಳ ಮೂಲಕ ಚಲನಚಿತ್ರ, ವ್ಯಕ್ತಿ, ವಸ್ತುವಿನ ಹೆಸರನ್ನು ತಿಳಿಸಲು ಸೂಚಿಸುವುದು. ಹಾಗೆಯೇ ಎಮೋಜಿಗಳಿಂದ ರಚಿಸಿದ ಒಗಟನ್ನು ನೀಡುವುದು. ಇದು ತುಂಬಾ ಮಜ ನೀಡುವ ಆಟವಾಗಿದೆ.
ಮೊದಲ ಭೇಟಿ; ಇಷ್ಟ
ಆಟವು ಸರಳವಾಗಿದೆ. ವಾಟ್ಸಾಪ್ ಗ್ರೂಪ್ಗಳಲ್ಲಿ ಅಪಾರ ಸದಸ್ಯರು ಇರುತ್ತಾರೆ. ಪ್ರತಿಯೊಬ್ಬರ ಫೊಟೋ ಹಾಕಿ ಮೊದಲ ಭೇಟಿ, ಅವರ ಇಷ್ಟವಾದ ಗುಣಗಳ ಬಗ್ಗೆ ಎರಡು ಸಾಲು ಬರೆದು ಹಾಕುವ ಆಟವನ್ನು ಆಡಬಹುದು. ಇದರಿಂದ ಇತರರಿಗೆ ತಮ್ಮ ಮೇಲಿರುವ ಭಾವನೆಯನ್ನು ತಿಳಿಯಬಹುದಾಗಿದೆ.
ಯಾವ ವಸ್ತುವೆಂದು ಗುರುತಿಸಿ
ಹಳೆಯ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳನ್ನು ಗುರುತಿಸುವ ಚಾಲೆಂಜ್ ನೀಡುವುದು. ಅದನ್ನು ಯಾರು ಮೊದಲು ಗುರುತಿಸುತ್ತಾರೋ ಅವರು ಮುಂದಿನ ಚಾಲೆಂಜ್ ನೀಡಬೇಕು. ಹೀಗೆ ಆಟಗಳನ್ನು ಆಡುವುದರಿಂದ ಅನೇಕ ವಸ್ತುಗಳ ಪರಿಚಯ ನಮಗಾಗುತ್ತದೆ.
20 ಪ್ರಶ್ನೆಗಳು
ಈ ಆಟದ ನಿಯಮಗಳು ತುಂಬಾ ಸರಳವಾಗಿದೆ. ಇದರಲ್ಲಿ ನಿಮ್ಮ ಬಗ್ಗೆ ಇತರರಿಗೆ ಪ್ರಶ್ನೆ ಕೇಳುವುದು. ಉದಾ: ನನ್ನ ಇಷ್ಟದ ಸಿನೇಮಾ “ದೃಶ್ಯಂ’ ಇದನ್ನು ನಾನು ಹಲವರ ಬಳಿ ಯಾವತ್ತೋ ಹೇಳರುತ್ತೇನೆ. ಅವರಿಗೆ ಅದು ನೆನಪಿದ್ದರೆ ಅದನ್ನು ಹೇಳುತ್ತಾರೆ. ಹೀಗೆ ತಮ್ಮ ಬಗ್ಗೆಯೇ 20 ಪ್ರಶ್ನೆಗಳನ್ನು ಕೇಳುವ ಆಟವು ತುಂಬಾ ಮನರಂಜನೆ ಒದಗಿಸುವುದರಲ್ಲಿ ಎರಡು ಮಾತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.