ಸೊಳ್ಳೆ ಉತ್ಪಾದನ ಕೇಂದ್ರ: ಕಾಯಿಲೆ ಹರಡುವ ಭೀತಿ
ಸ್ಥಳೀಯಾಡಳಿತದ ನಿರ್ಲಕ್ಷ್ಯ
Team Udayavani, May 16, 2020, 5:55 AM IST
ಪುತ್ತೂರು: ತಾ|ನ ಬೆಟ್ಟಂಪಾಡಿ, ಬಲಾ°ಡು ಹಾಗೂ ಪಾಣಾಜೆ ಪ್ರದೇಶಗಳಲ್ಲಿ ಡೆಂಗ್ಯೂ, ಮಲೇರಿಯಾ ಜ್ವರಗಳಿಂದ ಜನತೆ ಹೈರಾಣಾಗುತ್ತಿದ್ದಾರೆ. ಇಷ್ಟಾದರೂ ತಾಲೂಕಿನ ಬೊಳುವಾರು, ಉಪ್ಪಿನಂಗಡಿ ಸಹಿತ ವಿವಿಧ ಭಾಗಗಳಲ್ಲಿ ಇರುವ ಈ ಸೊಳ್ಳೆ ಉತ್ಪಾದನ ಕೇಂದ್ರಗಳ ಬಗ್ಗೆ ಸ್ಥಳೀಯಾಡಳಿತ ಯಾವುದೇ ಕ್ರಮ ಕೈಗೊಳ್ಳದೆರುವುದು. ಕಾಯಿಲೆ ಹರಡುವ ಭೀತಿ ಇನ್ನಷ್ಟು ಹೆಚ್ಚಸಿದೆ.
ಬೊಳುವಾರು ಭಾಗದಲ್ಲಿ ಉಪ್ಪಿನಂಗ-ಪುತ್ತೂರು ನಡುವಣ ರಸ್ತೆ ಪಕ್ಕವೇ ಗುಜರಿ ಸಾಮಾನು ಖರೀದಿಸುವ ಕೇಂದ್ರ, ಉಪ್ಪಿನಂಗಡಿ-ಕಡಬ ರಸ್ತೆಯ ಮಠ ಕೊಪ್ಪಳದಲ್ಲಿ ಗುಜರಿ ಸಾಮಾನು ಖರೀದಿಸುವ ಕೇಂದ್ರಗಳಿವೆ. ಇಲ್ಲಿ ಬಿಯರ್ ಬಾಟಲ್, ಟಯರ್, ಪ್ಲಾಸ್ಟಿಕ್, ಕಬ್ಬಿಣದ ವಸ್ತುಗಳನ್ನು ರಾಶಿ ಹಾಕಲಾಗಿದೆ. ಡೆಂಗ್ಯೂಗೆ ಕಾರಣ ವಾಗುವ ಈಡಿಸ್, ಮಲೇರಿಯಾಕ್ಕೆ ಕಾರಣವಾಗುವ ಅನಾಫಿಲೀಸ್ ಸೊಳ್ಳೆ ಉತ್ಪತ್ತಿಯಾಗಲು ಕೇವಲ 10 ಎಂಎಲ್ ನೀರು ಸಾಕಾಗುತ್ತದೆ. ಇಲ್ಲಿ ರಾಶಿ ಹಾಕಲಾದ ಗುಜರಿ ಸಾಮಾನುಗಳಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಉತ್ಪಾದನೆಯಾಗುವ ಸಾಧ್ಯತೆ ಹೆಚ್ಚಿದೆ.
ಮಲೇರಿಯಾ ನಿಯಂತ್ರಣ ಇಲಾಖೆಯ ವೆಂಕಟೇಶ್ ಹುದ್ದಾರ್, ಸಿಬಂದಿ ಈ ಸ್ಥಳಗಳ ಬಗ್ಗೆ ಸ್ಥಳೀಯಾಡಳಿತಕ್ಕೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿ ಒಂದೆರಡು ವಾರ ಕಳೆದಿದೆ. ಆದರೂ ಪುತ್ತೂರಿನ ನಗರಸಭೆ, ಉಪ್ಪಿ ನಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಈ ಗುಜರಿ ಸಂಗ್ರಹ ಕೇಂದ್ರಗಳನ್ನು ತೆರವುಗೊಳಿಸುವ ಕೆಲಸ ಇನ್ನೂ ನಡೆದಿಲ್ಲ.
ಡೆಂಗ್ಯೂ- ಮಲೇರಿಯಾದ ಹರಡದಂತೆ ಮಳೆ ಆರಂಭದಲ್ಲಿಯೇ ಸೊಳ್ಳೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಜನತೆಯಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ನವೀನ್‌ಚಂದ್ರ ಕುಲಾಲ್ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ, ಗ್ರಾಮಕರಣಿಕರಿಗೆ ಮಾಹಿತಿ ನೀಡಿದ್ದರು. ಆದರೂ ಅಧಿಕಾ ರಿಗಳು ನಿರ್ಲಕ್ಷ್ಯ ವಹಿಸಿರುವುದು ಬೇಸರದ ಸಂಗತಿ.
ತತ್‌ಕ್ಷಣ ಕ್ರಮ
ಬೊಳುವಾರು ಬಳಿಯಲ್ಲಿರುವ ಗುಜರಿ ಸಂಗ್ರಹ ಕೇಂದ್ರಕ್ಕೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಈಗಾಗಲೇ ಸೂಚಿಸಲಾ ಗಿದೆ. ಆದರೆ ಇಲ್ಲಿ ಬಾಟಲಿಗಳನ್ನು ರಾಶಿ ಹಾಕಿರುವುದು, ನೀರು ನಿಲ್ಲುವಂತಹ ಸ್ಥಿತಿ ಬಗ್ಗೆ ನಗರಸಭೆ ಆರೋಗ್ಯ ಇಲಾಖೆ ಸಿಬಂದಿ ಕಳುಹಿಸಿ ಪರಿಶೀಲನೆ ನಡೆಸಲು ಸೂಚನೆ ನೀಡಿದ್ದೇನೆ. ಮಾಲಕರು ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
-ರೂಪಾ ಶೆಟ್ಟಿ, ನಗರಸಭಾ ಪೌರಾಯುಕ್ತೆ ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.