ಮೇ 18ಕ್ಕೆ ಇನ್ನೊಂದು ದುಬಾೖ ವಿಮಾನ
Team Udayavani, May 16, 2020, 6:25 AM IST
ಮಂಗಳೂರು: ದುಬಾೖಯಿಂದ ಕನ್ನಡಿಗರನ್ನು ಹೊತ್ತ ಇನ್ನೊಂದು ವಿಮಾನ ಮೇ 18ರಂದು ಸಂಜೆ 6.30ಕ್ಕೆ ಮಂಗಳೂರಿಗೆ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ವಿಮಾನದಲ್ಲಿ ಎಷ್ಟು ಪ್ರಯಾಣಿಕರಿರುತ್ತಾರೆ ಎಂಬ ನಿಖರ ಮಾಹಿತಿ ದೊರಕಿಲ್ಲ. ದುಬಾೖಯಿಂದ ಪ್ರಥಮ ವಿಮಾನದಲ್ಲಿ ಬಂದ ಪ್ರಯಾಣಿಕರಿಗೆ ಮಂಗಳೂರಿನಲ್ಲಿ ತೊಂದರೆಗಳಾಗಿರುವ ದೂರು ಗಳ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಪ್ರಯಾಣಿಕರು ಕೂಡ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಕೋರಿದರು.
ದೋಹಾ, ಮಸ್ಕತ್
ವಿಮಾನ ಬೆಂಗಳೂರಿಗೆ
ಮೇ 20 ಮಸ್ಕತ್‌ನಿಂದ ಹಾಗೂ 22ರಂದು ದೋಹಾದಿಂದ ಬೆಂಗಳೂರಿನ ಮೂಲಕ ಮಂಗ ಳೂರಿಗೆ ವಿಮಾನ ಬರುವ ಮಾಹಿತಿಯಿತ್ತು. ಆದರೆ ಸದ್ಯದ ಮಾಹಿತಿ ಪ್ರಕಾರ ಈ ವಿಮಾನಗಳು ಬೆಂಗಳೂರಿಗೆ ಮಾತ್ರ ಬರಲಿವೆ ಎಂದು ಮಂಗಳೂರು ನಿಲ್ದಾಣದ ಮೂಲಗಳು ತಿಳಿಸಿವೆ.
ಕಾರ್ಮಿಕರಿಗೆ ಕಳಪೆ ಅಕ್ಕಿ ಆರೋಪ:ಕೂಲಂಕಷ ಪರಿಶೀಲನೆ
ಝಾರ್ಖಂಡ್, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ತಮ್ಮ ಊರುಗಳಿಗೆ ತೆರಳಲು ಜೋಕಟ್ಟೆ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ವಲಸೆ ಕಾರ್ಮಿಕರಿಗೆ ನೀಡಲಾದ ಕಳಪೆ ಅಕ್ಕಿ ಇಲಾಖೆಯಿಂದ ಪೂರೈಕೆ ಆಗಿರುವುದಲ್ಲ ಎಂಬ ವರದಿಯನ್ನು ಕಾರ್ಮಿಕ ಇಲಾಖೆ ನೀಡಿದೆ; ಆದ್ದರಿಂದ ಆ ವಿಚಾರದಲ್ಲಿ ಕೂಲಂಕಷ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಮಿಕ ಇಲಾಖೆಯು 21,000 ಮಂದಿ ಕಾರ್ಮಿಕರಿಗೆ ಆಹಾರವನ್ನು ಪೂರೈಕೆ ಮಾಡಿದೆ. ಕಳಪೆ ಆಹಾರ ಕುರಿತಂತೆ ನಮಗೆ ದೂರು ಬಂದಿಲ್ಲ. ಕಳಪೆ ಅಕ್ಕಿ ಕುರಿತು ಬಂದಿರುವ ದೂರಿನ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ದ.ಕ. ಜಿಲ್ಲೆಯಿಂದ ವಿವಿಧ ರಾಜ್ಯಗಳಿಗೆ 12,998 ಮಂದಿ ರೈಲಿನ ಮೂಲಕ ತೆರಳಿದ್ದಾರೆ. ಶುಕ್ರವಾರ ಕೂಡ ಬಿಹಾರ ಮತ್ತು ಝಾರ್ಖಂಡ್‌ಗೆ ರೈಲು ಪ್ರಯಾಣ ಇರಲಿದೆ ಎಂದು ಹೇಳಿದರು.
ಇತರ ರಾಷ್ಟ್ರಗಳಿಗೂ
ವಿಮಾನಕ್ಕೆ ಆಗ್ರಹ
ಕತಾರ್, ಬಹ್ರೈನ್, ಒಮಾನ್, ಕುವೈಟ್ ಮೊದಲಾದ ಕೊಲ್ಲಿ ರಾಷ್ಟ್ರಗಳಲ್ಲಿಯೂ ಕರಾವಳಿ ಭಾಗದವರು ಕೋವಿಡ್-19 ಕಾರಣ ದಿಂದ ಸಂಕಷ್ಟದಲ್ಲಿದ್ದು, ಅವರನ್ನು ಕೂಡ ಕರ್ನಾಟಕಕ್ಕೆ ಕರೆತರಲು ವಿಶೇಷ ವಿಮಾನ ವ್ಯವಸ್ಥೆ ಮಾಡಬೇಕು ಎಂದು ಅಲ್ಲಿನ ಅನಿವಾಸಿ ಭಾರತೀಯರು ಸರಕಾರವನ್ನು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು
Fraud: ಸೈಟ್ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ
Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು
Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.