ಬೈನೇನಹಳ್ಳಿ ಗ್ರಾಮ ಸೀಲ್‌ಡೌನ್
Team Udayavani, May 16, 2020, 6:23 AM IST
ಬೇತಮಂಗಲ/ಕೆಜಿಎಫ್: ತಾಲೂಕಿನ ಬೈನೇನಹಳ್ಳಿಯ ಯುವಕನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮದ ಸುತ್ತಮುತ್ತಲಿನ 7 ಕಿ.ಮೀ. ಪ್ರದೇಶವನ್ನು ಬಫರ್ ಜೋನ್ ಎಂದು ಘೋಷಿಸಲಾಗಿದೆ.
ಮಾರಿಕುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಬೈನೇನಹಳ್ಳಿ ಗ್ರಾಮದ 25 ವರ್ಷದ ಹುಲ್ಲು ವ್ಯಾಪಾರ ಮಾಡುತ್ತಿದ್ದ ಲಾರಿ ಚಾಲಕನಿಗೆ ಕೊರೊನಾ ಸೋಂಕು ಇರುವುದನ್ನು ಜಿಲ್ಲಾಡಳಿತ ಖಚಿತಪಡಿಸುತ್ತಿದ್ದಂತೆ ಗ್ರಾಮದ 4 ಭಾಗಗಳಲ್ಲಿ ನಾಕ ಬಂದಿ ಮಾಡುವ ಮೂಲಕ ಗ್ರಾಮವನ್ನು ಸೀಲ್ ಡೌನ್ ಮಾಡಲಾಯಿತು. 300 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಗ್ರಾಮಸ್ಥರನ್ನು ಆತಂಕಕ್ಕೆ ನೂಕಿದೆ.
ರೋಗಿ ಸಂಖ್ಯೆ 992 ಮನೆಯ 100 ಮೀಟರ್ ವ್ಯಾಪ್ತಿಯಲ್ಲಿ ಬರುವ 90 ಮನೆ, 4 ಅಂಗಡಿ ಸೇರಿ 373 ಜನರು ಕಂಟೇನ್‌ಮೆಂಟ್ ಜೋನ್‌ನಲ್ಲಿ ಇದ್ದಾರೆ. ಗ್ರಾಮದ ಪೂರ್ವಕ್ಕೆ ಬರುವ ಆಲಿಕಲ್ಲು-ಕರೂರು ಗ್ರಾಮ, ಪಶ್ಚಿಮಕ್ಕೆ ಮಾರಿಕುಪ್ಪಂ ವಾರ್ಡ್ ನಂಬರ್ 10, ಉತ್ತರಕ್ಕೆ ಎಂ.ಜಿ.ಮಾರುಕಟ್ಟೆ ವಾರ್ಡ್ 25 ಮತ್ತು ದಕ್ಷಿಣಕ್ಕೆ ಕೆಂಪಾಪುರ ಗ್ರಾಮದ ಗಡಿ ಅನ್ನು ಬಫರ್‌ಜೋನ್ ಎಂದು ಗುರುತಿಸಲಾಗಿದೆ.
ಕಂಟೇನ್‌ಮೆಂಟ್ ಜೋನ್ ಗಡಿಯಾಗಿ ಪೂರ್ವಕ್ಕೆ ದೊಡ್ಡಕಲ್ಲಹಳ್ಳಿ ಗಡಿ, ಪಶ್ಚಿಮಕ್ಕೆ ಕೆಜಿಎಫ್ -ಕುಪ್ಪಂ ಮುಖ್ಯ ರಸ್ತೆ, ಉತ್ತರಕ್ಕೆ ಕೊತ್ತೂರು ಗ್ರಾಮ, ದಕ್ಷಿಣಕ್ಕೆ ಕೊಡಿಗೇನಹಳ್ಳಿ ಗ್ರಾಮ ಗುರುತಿಸಲಾಗಿದೆ. ಸಮಾಜ ಕಲ್ಯಾಣ ಅಧಿಕಾರಿ ಮುನಿರಾಜು ಕಂಟೇನ್‌ಮೆಂಟ್ ಅಧಿಕಾರಿ ಮತ್ತು ಇನ್ಸಿಡೆಂಟ್ ಕಮಾಂಡರ್ ಆಗಿದ್ದಾರೆ. ಲಾರಿ ಚಾಲಕನ ಸಂರ್ಪಕದಲ್ಲಿ ಇದ್ದ 12 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಅವರ ಗಂಟಲು ದ್ರವದ ಮಾದರಿಗಳನ್ನು ಪಡೆದು ಲ್ಯಾಬ್‌ಗಕಳುಹಿಸಿಕೊಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.