![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 16, 2020, 6:28 AM IST
ಚಿಂತಾಮಣಿ: ಕಳೆದ ಎರಡು ದಿನಗಳಿಂದ ಕೆ.ಸಿ.ವ್ಯಾಲಿ ನೀರು ಚಿಂತಾಮಣಿ ತಾಲೂಕಿನ ಕುರುಟಹಳ್ಳಿ, ದಂಡುಪಾಳ್ಯ ಹಾಗೂ ಮತಿತ್ತರ ಕೆರೆಗಳಿಗೆ ಹರಿದು ಬರುತ್ತಿದು, ಶಾಸಕ ಜೆ.ಕೆ. ಕೃಷ್ಣಾರೆಡಿªರವರು ಕೆ.ಸಿ.ವ್ಯಾಲಿ ನೀರು ಹರಿಯುತ್ತಿರುವ ಕುರುಟಹಳ್ಳಿ ಮತಿತ್ತರ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ: ಕಳೆದ ಎರಡು ದಿನಗಳಿಂದ ಕೆ.ಸಿ.ವ್ಯಾಲಿ ನೀರು ಚಿಂತಾಮಣಿ ತಾಲೂಕಿನ ಕುರುಟಹಳ್ಳಿ, ದಂಡುಪಾಳ್ಯ ಮತಿತ್ತರ ಕೆರೆಗಳಿಗೆ ಹರಿಯುತ್ತಿದ್ದು, ಚಿಂತಾಮಣಿ ಕ್ಷೇತ್ರದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ನೀರಾವರಿ ಇಲಾಖೆ ಅಧಿಕಾರಿಗಳೊಂದಿಹೆ ಕೆ.ಸಿ.ವ್ಯಾಲಿ ನೀರು ಹರಿಯುತ್ತಿರುವ ಕುರುಟಹಳ್ಳಿ ಮತಿತ್ತರ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳಿಗೆ ತರಾಟೆ: ಕೆ.ಸಿ.ವ್ಯಾಲಿ ಹರಿಸುತ್ತಿರುವ ಕುರುಟಹಳ್ಳಿ ಕೆರೆಯ ತುಂಬೆಲ್ಲಾ ಕಡಿದಿರುವ ಜಾಲಿ ಮರಗಳ ಕಸಕಡ್ಡಿ ಮುಳ್ಳು ಹಾಗೂ ಕೆರೆಯಲ್ಲಿ ರಾಜಸ್ಥಾನ ಮೂಲದ ಮೂರ್ನಾಲ್ಕು ಕುಟುಂಬಗಳು ಗುಡಿಸಲು ಹಾಕಿಕೊಂಡು ವಾಸವಾಗಿದ್ದು, ಕೆ.ಸಿ.ವ್ಯಾಲಿ ನೀರು ಹರಿಯುತ್ತಿರುವ ಕಾರಣ ಜನತೆಗೆ ತೊಂದರೆಯಾಗಲಿದೆ. ಕೂಡಲೇ ಕೆರೆ ಸ್ವಚ್ಛ ಮಾಡಿಸಿ ಆ ಮೇಲೆ ನೀರು ಬಿಡುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಇನ್ನೂ ಕುರುಟಹಳ್ಳಿ ಮತಿತ್ತರ ಗ್ರಾಮಗಳ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿದು ಬರುತ್ತಿರುವುದರಿಂದ ಸುತ್ತಮುತ್ತಲ ಗ್ರಾಮಗಳ ಜನತೆ ಕೆರೆಗಳ ಬಳಿ ತಂಡೋಪ ತಂಡವಾಗಿ ಭೇಟಿ ನೀಡಿ ಕೆ.ಸಿ.ವ್ಯಾಲಿ ನೀರು ಕಂಡು ಸಂತಸಪಟ್ಟರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಹಾಗೂ ಕುರುಟಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.
Govt Schools: ಈ ಬಾರಿಯೂ ಬೇಸಗೆಯಲ್ಲಿ ಮಕ್ಕಳಿಗೆ ಭರಪೂರ ಬಿಸಿಯೂಟ
MLA Pradeep Eshwar : ಎತ್ತಿನಹೊಳೆ ಕಾಮಗಾರಿಗೆ 500 ಕೋಟಿ ನೀಡಿ; ಪ್ರದೀಪ್
Chintamani: ಹಿಂಬಾಲಿಸಿ ಬಂದು ವ್ಯಕ್ತಿಯೊಬ್ಬರ ಹ*ತ್ಯೆಗೈದ ದುಷ್ಕರ್ಮಿಗಳು!
Gudibanda: ವಿವಿಧ ಪ್ರಕರಣಗಳ ಕಳ್ಳನ ಬಂಧನ, 152 ಗ್ರಾಂ ಬಂಗಾರ ವಶ
BJP Rift: ಸಂಸದ ಕೆ.ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಪ: ಸಂದೀಪ ರೆಡ್ಡಿ
You seem to have an Ad Blocker on.
To continue reading, please turn it off or whitelist Udayavani.