ನೆಲಕಚ್ಚುವ ಸ್ಥಿತಿಗೆ ಹೋಟೆಲ್ ಉದ್ಯಮ
Team Udayavani, May 16, 2020, 10:22 AM IST
ಹುಬ್ಬಳ್ಳಿ: ಕೋವಿಡ್ ಲಾಕ್‌ಡೌನ್‌ನಿಂದಾಗಿ ಹೋಟೆಲ್ ಉದ್ಯಮ ನೆಲಕಚ್ಚುವ ಸ್ಥಿತಿಗೆ ತಲುಪಿದ್ದು, ಹೋಟೆಲ್ ಉದ್ಯಮಿಗಳು ಮುಂದೇನು ಎಂದು ಚಿಂತಾಕ್ರಾಂತರಾಗಿದ್ದಾರೆ. ಅವಳಿ ನಗರದ ಬಹುತೇಕ ಹೋಟೆಲ್ ಗಳು ಬಂದ್ ಆಗಿವೆ. ಕೆಲವೊಂದು ಹೋಟೆಲ್‌ಗಳಲ್ಲಿ ಪಾರ್ಸ್‌ಲ್ ಮಾತ್ರ ನೀಡಲಾಗುತ್ತಿದೆ.
ಉದ್ಯಮ ಮೇಲೇಳುವುದು ಕಷ್ಟ: ಕೋವಿಡ್ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಉದ್ಯಮ ಸಂಪೂರ್ಣ ಬಂದ್ ಆಗಿದ್ದು, ಹೋಟೆಲ್ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ಈ ಉದ್ಯಮ ಮತ್ತೇ ತಲೆ ಎತ್ತಿ ನಿಲ್ಲಬೇಕೆಂದರೆ ಕನಿಷ್ಟ ಪಕ್ಷ ಎರಡು ವರ್ಷವಾದರೂ ಬೇಕಾಗುತ್ತದೆ. ಜನರಲ್ಲಿ ಸೋಂಕು ಹರಡುವ ಆತಂಕ ಇದ್ದು, ಇದರಿಂದ ಸುಮಾರು ಒಂದು ವರ್ಷದವರೆಗೂ ಜನರು ಹೋಟೆಲ್ ಗಳತ್ತ ಧಾವಿಸುವುದು, ಹೊರಗೆ ತಿನ್ನುವ ಹವ್ಯಾಸದಿಂದ ಸ್ವಲ್ಪ ದೂರವಾಗಲಿದ್ದಾರೆ. ಇದರಿಂದ ಹೋಟೆಲ್ ಉದ್ಯಮ ಪುನೇಶ್ವತನಗೊಳ್ಳುವುದು ತುಂಬಾ ಕಷ್ಟಕರವಾಗಿದೆ. ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಹಾಗೂ ಕೇಂದ್ರ ಸರಕಾರಗಳು ಉದ್ಯಮ ಉತ್ತೇಜನಕ್ಕೆ ಯಾವುದೇ ಪರಿಹಾರದ ಬಗ್ಗೆ ಮಾತನಾಡುತ್ತಿಲ್ಲ ಎಂಬುದು ಉದ್ಯಮದವರ ನೋವಾಗಿದೆ.
ಹೋಟೆಲ್ ಉದ್ಯಮ ಚೈನ್ ಕಳಚುತ್ತಿದೆ: ಹೋಟೆಲ್ ಉದ್ಯಮದಿಂದ ರೈತರು, ದವಸ-ಧಾನ್ಯ, ಹಾಲು ಸೇರಿದಂತೆ ಒಂದು ಕೊಂಡಿಯೇ ಬೆಸೆದುಕೊಂಡಿರುತ್ತದೆ. ಆದರೆ ಇದೀಗ ಕೋವಿಡ್ ವೈರಸ್‌ನಿಂದ ಇಡೀ ಸರಪಳಿ ಕಳಚಿ ಬಿದ್ದಂತಾಗಿದೆ. ಹೋಟೆಲ್ ಉದ್ಯಮದವರು ರೈತರೊಂದಿಗೆ ನೇರ ಸಂಪರ್ಕ ಹೊಂದಿ ಬೆಳೆ ಖರೀದಿಸುತ್ತಿದ್ದರು.ಆದರೆ ಇದೀಗ ಎಲ್ಲವೂ ಸ್ಥಗಿತಗೊಂಡಿದೆ. ಕೆಲವು ಹೋಟೆಲ್ ಉದ್ಯಮದವರು ಕಿರಾಣಿ ವ್ಯಾಪಾರಿಗಳೊಂದಿಗೆ ಸಗಟು ವ್ಯಾಪಾರ ಇಟ್ಟುಕೊಂಡಿದ್ದರು. ಇದು ಕೂಡಾ ಸ್ಥಗಿತವಾಗಿದೆ. ಅದೇ ರೀತಿ ಇನ್ನಿತರ ಸಂಪರ್ಕಗಳು ತಪ್ಪಿದಂತಾಗಿವೆ. ನಗರದಲ್ಲಿ ನೂರಾರು ಹೋಟೆಲ್‌ಗಳಿದ್ದು, ಕೋವಿಡ್ ವೈರಸ್ ಲಾಕ್‌ಡೌನ್‌ನಿಂದ ಎಲ್ಲವೂ ಬಂದ್ ಆಗಿವೆ. ಆದರೆ ಹೋಟೆಲ್ ಗಳ ಬಾಡಿಗೆ ಮಾತ್ರ ಸ್ಥಗಿತವಾಗಿಲ್ಲ. ಮಾಲೀಕರಿಗೆ ಪ್ರತಿ ತಿಂಗಳು ಭಾಡಿಗೆ ನೀಡಲೆಬೇಕು, ಕೆಲವೊಂದು ಕುಟುಂಬಗಳು ಬರುವ ಬಾಡಿಗೆಯನ್ನೇ ನೆಚ್ಚಿಕೊಂಡು ಕುಳಿತಿವೆ. ಸರ್ಕಾರ ಬಾಡಿಗೆದಾರರಿಂದ ಬಾಡಿಗೆ ಪಡೆಯಬಾರದು ಎಂದು ಹೇಳಿಕೆ ನೀಡುತ್ತಿದೆ. ಆದರೆ ಅಂತಹ ಕೆಲಸ ಮಾಡಿದರೆ ನಮ್ಮಲ್ಲಿರುವ ಬಾಂಧವ್ಯ, ಪ್ರೀತಿ ಕಳೆದುಕೊಳ್ಳಬೇಕಾಗುತ್ತದೆ ಎನ್ನುವುದು ಹೋಟೆಲ್ ಉದ್ಯಮದವರ ಅನಿಸಿಕೆ.
ಸರಕಾರ ಕೈ ಹಿಡಿಯಬೇಕು.. ಕೋವಿಡ್ ವೈರಸ್ ಲಾಕ್‌ಡೌನ್‌ನಿಂದ ಹೋಟೆಲ್ ಉದ್ಯಮ ಸಂಪೂರ್ಣ ನೆಲಕಚ್ಚಲಿದೆ. ಮುಂದಿನ ದಿನಗಳಲ್ಲಿ ಸುಮಾರು ಶೇ.30ರಷ್ಟು ಹೋಟೆಲ್‌ಗಳು ಮರಳಿ ಆರಂಭವಾಗುವುದೇ ಕಷ್ಟ. ಲಕ್ಷಾಂತರ ರೂ. ಸಾಲ ಮಾಡಿ ಉದ್ಯಮ ನಡೆಸುತ್ತಿರುವವರು ಮುಂದಿನ ಜೀವನ ಹೇಗೆ ಎನ್ನುವ ಚಿಂತೆಗೆ ಈಡಾಗಿದ್ದಾರೆ. ಕೇಂದ್ರ-ರಾಜ್ಯ ಸರ್ಕಾರದವರು ಹೋಟೆಲ್ ಉದ್ಯಮ ಪುನಶ್ವೇತನಕ್ಕೆ ಬಡ್ಡಿ ರಹಿತ ಸಾಲ ನೀಡುವ ಸೌಲಭ್ಯ ಕಲ್ಪಿಸಬೇಕು. ಇದರಿಂದ ಸ್ವಲ್ಪವಾದರೂ ಪುನಶ್ಚೇತನಗೊಳ್ಳಲು ಸಹಾಯವಾಗುತ್ತದೆ. ಆದ್ದರಿಂದ ಹೋಟೆಲ್‌ಗಳನ್ನು ಕೇವಲ ಊಟ-ಉಪಹಾರ, ವಸತಿಗೆ ಬಳಸಿಕೊಳ್ಳದೇ ಉದ್ಯಮದ ಬೆಳವಣಿಗೆಗೆ ಸರಕಾರ ಕೈ ಹಿಡಿಯಬೇಕು. -ಸುಧಾಕರ ಶೆಟ್ಟಿ, ಹೋಟೆಲ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ
-ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.