ದೆಹಲಿಯಿಂದ ಬೆಂಗಳೂರಿಗೆ ಬಂತು ಎರಡನೇ ರೈಲು: ಎಲ್ಲಾ ಪ್ರಯಾಣಿಕರು ಕ್ವಾರಂಟೈನ್ ಗೆ
Team Udayavani, May 16, 2020, 10:54 AM IST
Representative Image
ಬೆಂಗಳೂರು: ಕೋವಿಡ್-19 ಸೋಂಕು ಲಾಕ್ ಡೌನ್ ಕಾರಣದಿಂದ ದೆಹಲಿಯಿಂದ ಹೊರಟಿದ್ದ ವಿಶೇಷ ರೈಲು ಬೆಂಗಳೂರಿಗೆ ಇಂದು ತಲುಪಿದೆ. ಇದರಲ್ಲಿ ಬಂದ ಎಲ್ಲಾ ಪ್ರಯಾಣಿಕರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ.
ದೆಹಲಿಯಿಂದ ಎರಡನೇ ವಿಶೇಷ ರೈಲು ಬಂದಿದ್ದು, ಕಳೆದ ಮಂಗಳವಾರ ಮೊದಲ ರೈಲು ಬೆಂಗಳೂರಿಗೆ ತಲುಪಿತ್ತು. ಎರಡನೇ ವಿಶೇಷ ರೈಲು ಕಳೆದ ಗುರುವಾರ ಸಂಜೆ ದೆಹಲಿಯಿಂದ ಹೊರಟಿದ್ದು, ಇಂದು ಬೆಳಿಗ್ಗೆ ಬೆಂಗಳೂರು ಕೆಎಸ್ ಆರ್ ರೈಲ್ವೆ ನಿಲ್ದಾಣ ತಲುಪಿದೆ.
ಈ ಪ್ರಯಾಣಿಕರಿಗೆ 14 ದಿನದ ಕ್ವಾರಂಟೈನ್ ಕಡ್ಡಾಯವಾಗಿದೆ. ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಎಲ್ಲಾ ಪ್ರಯಾಣಿಕರನ್ನೂ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂಧಿಗಳು ಆರೋಗ್ಯ ತಪಾಸಣೆ ನಡೆಸಿದ್ದಾರೆ. ಎಲ್ಲರಿಗೂ ಕ್ವಾರಂಟೈನ್ ಮಾಡಲಾಗುತ್ತಿದೆ.
ಮೊದಲ ರೈಲು ಬಂದಾಗ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲಾಗುವ ಬಗ್ಗೆ ಮುಂಚಿತವಾಗಿ ತಿಳಿಸಲಾಗಿರಲಿಲ್ಲ. ನಂತರ ಇದು ಪ್ರಯಾಣಿಕರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ರಾಜ್ಯಕ್ಕೆ ಯಾರೇ ಪ್ರವೇಶಿಸಿದರೂ ಅವರು 14 ದಿನಗಳ ಕ್ವಾರಂಟೈನ್ ಗೆ ಒಳಗಾಗಬೇಕು ಎಂದು ದೆಹಲಿಯ ಕರ್ನಾಟಕ ಭವನ ಪ್ರಕಟಣೆ ಹೊರಡಿಸಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.