ನಾರಾಯಣಪುರ: ಕ್ವಾರಂಟೈನ್ ಕೇಂದ್ರದಲ್ಲಿ 77 ಜನ
Team Udayavani, May 16, 2020, 12:06 PM IST
ನಾರಾಯಣಪುರ: ಬಿಸಿಎಂ ಹಾಸ್ಟೆಲ್ ಕ್ವಾರಂಟೈನ್ ಕೇಂದ್ರ
ನಾರಾಯಣಪುರ: ಇಲ್ಲಿನ ಬಿಸಿಎಂ ಹಾಸ್ಟೆಲ್ನ ಕ್ವಾರಂಟೈನ್ ಕೇಂದ್ರದಲ್ಲಿ ಶುಕ್ರವಾರ ಮಹಾರಾಷ್ಟ್ರದ ರತ್ನಗಿರಿಯಿಂದ ಆಗಮಿಸಿದ್ದ ಮಹಿಳೆಯರು, ಪುರುಷರು, ಮಕ್ಕಳು ಸೇರಿದಂತೆ 77 ಜನ ಕೂಲಿ ಕಾರ್ಮಿಕರಿಗೆ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಲಾಗಿದೆ ಎಂದು ಪಿಡಿಒ ಶರಣಬಸವ ಬಿರಾದಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಣ್ಣ ಛಾಪಿತಾಂಡಾ, ರಾಜನಕೋಳೂರ ತಾಂಡಾ, ಜುಮಾಲಪುರ ತಾಂಡಾ, ನೆಲ್ಲಗುಂಡ ತಾಂಡಾಗಳ ಸೇರಿದಂತೆ ಇತರೆ ತಾಂಡಾ ನಿವಾಸಿಯಾಗಿರುವ ಕೂಲಿ ಕಾರ್ಮಿಕರನ್ನು, ಹುಣಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಕ್ವಾರಂಟೈನ್ ಕೇಂದ್ರಕ್ಕೆ ತಂದು ಇರಿಸಲಾಗಿದೆ. ಎಲ್ಲ ವಲಸಿಗರ ಅನುಕೂಲಕ್ಕಾಗಿ ಮೂಲ ಸೌಲಭ್ಯ ಒದಗಿಸಲಾಗಿದ್ದು, ಜಿಲ್ಲಾಡಳಿತದಿಂದ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಗ್ರಾಪಂ, ಕಂದಾಯ ಇಲಾಖೆ, ಪೊಲೀಸ್, ಗೃಹರಕ್ಷಕ ಇಲಾಖೆ ಸಿಬ್ಬಂದಿಗಳಿಂದ ಸೂಕ್ತ ಭದ್ರತೆ ಜೊತೆಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಇದೇ ವೇಳೆ ಕ್ವಾರಂಟೈನ್ ಕೇಂದ್ರದ ವಲಸಿಗರು ಹೊರ ಬರದಂತೆ ಭದ್ರತೆ ಒದಗಿಸಬೇಕು ಎಂದು ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದರು. ಗ್ರಾಪಂ ಅಧ್ಯಕ್ಷ ರಾಠೊಡ, ಗ್ರಾಮ ಲೆಕ್ಕಿಗ ಅಪ್ಪಣ್ಣ, ವೀರೇಶ ಗಣಾಚಾರಿ, ಹುಸೇನಸಾಬ್, ಶಿವಪ್ಪ ಬಿರಾದಾರ, ರಮೇಶ ಕೋಳುರ, ಹಾಸ್ಟೇಲ್ ವಾರ್ಡನ್ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.