ವೈಟಿಪಿಎಸ್ ನಿರ್ವಹಣೆಗೆ ಟೆಂಡರ್ ಕೈಬಿಡಲು ಆಗ್ರಹ
Team Udayavani, May 16, 2020, 1:20 PM IST
ರಾಯಚೂರು: ವೈಟಿಪಿಎಸ್ ನಿರ್ವಹಣೆ ಹೊಣೆ ಹೈದರಾಬಾದ್ ಮೂಲದ ಪವರ್ ಮೆಕ್ ಕಂಪೆನಿಗೆ ಗುತ್ತಿಗೆ ನೀಡಿದ ನಿರ್ಧಾರ ಕೈ ಬಿಡದಿದ್ದಲ್ಲಿ ಹೋರಾಟ ನಡೆಸುವುದಾಗಿ ಸಿಪಿಐ (ಎಂಎಲ್) ರೆಡ್‌ಸ್ಟಾರ್ ಜಿಲ್ಲಾಧ್ಯಕ್ಷ ಕೆ. ನಾಗಲಿಂಗಸ್ವಾಮಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 13.250 ಕೋಟಿ ರೂ. ವೆಚ್ಚದಲ್ಲಿ ಬಿಎಚ್‌ಇಎಲ್ ಸಂಸ್ಥೆ ಸಹಯೋಗದಲ್ಲಿ ವೈಟಿಪಿಎಸ್ ಸ್ಥಾಪಿಸಲಾಗಿದೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲೇ ಖಾಸಗೀಕರಣದ ಹುನ್ನಾರ ನಡೆದಿತ್ತು. ವಿರೋಧ ವ್ಯಕ್ತವಾಗಿದ್ದರಿಂದ ನಿರ್ಧಾರ ಕೈ ಬಿಡಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಒಳಗೊಳಗೆ ಖಾಸಗಿ ಕಂಪನಿಗೆ ಹೊಣೆ ನೀಡಿರುವುದು ಖಂಡನೀಯ ಎಂದರು. 2,500 ಕಾರ್ಮಿಕರು ವಿದ್ಯುತ್ ಘಟಕದಲ್ಲಿ ಕೆಲಸ ಮಾಡುತ್ತಿದ್ದು, ಅವರ ಉದ್ಯೋಗಕ್ಕೆ ಕುತ್ತುಂಟಾಗಿದೆ. ನಿರ್ವಹಣೆ ಹೊಣೆ ಪಡೆದ ಖಾಸಗಿ ಕಂಪನಿ ಸ್ಥಳೀಯರಿಗೆ ಉದ್ಯೋಗ ನೀಡುವ ವಿಶ್ವಾಸವಿಲ್ಲ. 371 ವಿಶೇಷ ಸ್ಥಾನಮಾನವಿದ್ದರೂ ಕೆಲಸ ಸಿಗದೇ ಪರದಾಡುವಂತಾಗಿದೆ ಎಂದರು. ಕೂಡಲೇ ಖಾಸಗಿ ಕಂಪನಿ ಜತೆಗಿನ ಒಪ್ಪಂದ ರದ್ದುಗೊಳಿಸಬೇಕು. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಮೇ 20ರಿಂದ ಡಿಸಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ತಿಳಿಸಿದರು.ಟಿಯುಸಿಐ ಸಂಘಟನೆ ಜಿಲ್ಲಾಧ್ಯಕ್ಷ ಜಿ. ಅಮರೇಶ, ಯಲ್ಲಪ್ಪ ಉಟಕನೂರು, ರವಿದಾಸ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.