![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 17, 2020, 5:50 AM IST
ಹಾಸನ: ಜಿಲ್ಲೆಯಲ್ಲಿ ಶನಿವಾರ ಮತ್ತೆ ಮೂವರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಜಿಲ್ಲೆಯಲ್ಲಿ ಈಗ 20 ಮಂದಿ ಕೊರೊನಾ ಶಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರನೇ ದಿನವೂ ಮುಂಬೈನಿಂದ ಬಂದವರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಇದುವರೆಗೂ ವರದಿಯಾಗಿರುವ ಎಲ್ಲ 20 ಪಾಸಿಟಿವ್ ಪ್ರಕರಣಗಳೂ ಮುಂಬೈನಿಂದ ಬಂದವರಲ್ಲಿ ಮಾತ್ರ ವರದಿ ಯಾಗಿವೆ.
ಶನಿವಾರ ವರದಿಯಾಗಿರುವ ಮೂರು ಪಾಸಿಟಿವ್ ಪ್ರಕರಣಗಳಲ್ಲಿ ಹೊಳೆ ನರಸೀಪುರ ತಾಲೂಕಿನ ಮೂಲದ 63 ವರ್ಷದ ಪುರುಷ ಮತ್ತು 50 ವರ್ಷದ ಪುರುಷ, ಚನ್ನರಾಯಪಟ್ಟಣ ತಾಲೂಕಿನ 8 ವರ್ಷದ ಯುವಕ ಹಾಗೂ ಚಿಕ್ಕಮಗ ಳೂರು ಜಿಲ್ಲೆಯ 21 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ವಿವರ ನೀಡಿದರು. ಶನಿವಾರ ಸೋಂಕು ದೃಢಪಟ್ಟಿರುವ ಹೊಳೆನರಸೀಪುರ ಮೂಲದ ಇಬ್ಬರು ಹಾಗೂ ಚನ್ನರಾಯಪಟ್ಟಣದ 18 ವರ್ಷದ ಯುವಕ ಮುಂಬೈನಿಂದ 26 ಜನರೊಂದಿಗೆ ಬಸ್‌ನಲ್ಲಿ ಬಂದವ ರಾಗಿದ್ದು,
26 ಜನರ ತಂಡದೊಂದಿಗೆ ಬಸ್‌ನಲ್ಲಿ ಬಂದಿದ್ದ 26 ಜನರ ಪೈಕಿ ಇದುವರೆಗೂ ನಾಲ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇನ್ನು 22 ಜನರು ಹಿಮ್ಸ್ ಆಸ್ಪತ್ರೆಯ ಐಸೋಲೇಷನ್‌ನಲ್ಲಿ ತೀವ್ರ ನಿಗಾದಲ್ಲಿದ್ದಾರೆ. ಶನಿವಾರ ಸೋಂಕು ದೃಢಪಟ್ಟಿರುವ ಚಿಕ್ಕಮಗಳೂರಿನ ಮಹಿಳೆ 7 ಜನರೊಂದಿಗೆ ಟೆಂಪೋ ಟ್ರಾವೆಲರ್‌ನಲ್ಲಿ ಮೇ12 ರಂದು ಬಂದಿದ್ದರು. ಅವರೆಲ್ಲರನ್ನೂ ಹಾಸನ ಜಿಲ್ಲೆಯ ಗಡಿ ಬಾಣಾವರದ ಚೆಕ್‌ಪೋಸ್ಟ್ ನಿಂದಲೇ ಕರೆ ದಂದು ಕ್ವಾರಂಟೈನ್‌ನಲ್ಲಿಡಲಾಗಿತ್ತು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳಿ: ಜಿಲ್ಲೆಯಲ್ಲಿ ಇದುವರೆಗೂ ವರದಿ ಯಾಗಿ ರುವ 20 ಪಾಸಿಟಿವ್ ಪ್ರಕರಣಗಳೂ ಮುಂಬೈನಿಂದ ಬಂದವರಿಗಷ್ಟೆ ದೃಢಪಟ್ಟಿದ್ದು, ಅವರೆ ಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಗುಣಮುಖರಾಗುವ ವಿಶ್ವಾಸವಿದೆ. ಮುಂಬೈನಿಂದ ಬಂದವರಲ್ಲಿ ಪಾಸಿಟಿವ್ ಪ್ರಕರಣ ಕಂಡು ಬಂದಿರುವುದರಿಂದ ಹಾಸನ ಇಲ್ಲೆಯ ಜನರು ಭಯಪಡುವ ಅಗತ್ಯವಿಲ್ಲ. ಆದರೆ ಮಾಸ್ಕ್ ಧಾರಣೆ ಹಾಗೂ ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಸಹಕರಿಸ ಬೇಕು ಎಂದು ಡೀಸಿ ಗಿರೀಶ್ ಮನವಿ ಮಾಡಿದರು.
ಜಿಲ್ಲೆಗೆ ಬರಲಿದ್ದಾರೆ 1,221 ಮಂದಿ: ಲಾಕ್‌ಡೌನ್ ಸಡಿಲಿಕೆಯಾದ ಮೇ 4ರ ನಂತರ ಜಿಲ್ಲೆಗೆ ಹೊರ ರಾಜ್ಯ ಗಳಿಂದ ಈವರೆಗೂ 1,050 ಮಂದಿ ಬಂದಿದ್ದಾರೆ. ಇನ್ನೂ 1,221 ಜನರು ಜಿಲ್ಲೆಗೆ ಬರಲು ನೋಂದಾಯಿಸಿ ಕೊಂಡಿದ್ದು, ಅವರೆಲ್ಲರ ಪಾಸ್ ಗಳನ್ನು ಬಾಕಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ನೋಂದಾಯಿಸಿರುವವರು ಜಿಲ್ಲೆಗೆ ಬರಲು ಶೀಘ್ರದಲ್ಲೇ ಅವಕಾಶ ನೀಡಲಾಗುವುದು. ಹೊರ ದೇಶದಿಂದ ಜನರು ಬರುತ್ತಿರು ವುದರಿಂದ ಹೊರ ಜಿಲ್ಲೆಗಳಿಂದ ಬರುವವರನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಮಾರ್ಗಸೂಚಿ ಗಮನಿಸಿ ಕ್ರಮ ಕೈಗೊಳ್ಳಲಾ ಗುವುದೆಂದು ಡೀಸಿ ಹೇಳಿದರು.
R. Ashok: ನವೆಂಬರ್ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್
R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್.ಅಶೋಕ್
ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ
Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು
ಕಾಂಗ್ರೆಸ್‌ಗೆ 136 ಸ್ಥಾನವಿದ್ದರೂ ಜೆಡಿಎಸ್ ಶಾಸಕರ ಸೆಳೆಯೋ ದುಸ್ಥಿತಿ: ಎಚ್.ಡಿ.ರೇವಣ್ಣ
You seem to have an Ad Blocker on.
To continue reading, please turn it off or whitelist Udayavani.