ಪದವಿ ಆನ್ಲೈನ್ ಕ್ಲಾಸ್ ದುಬಾರಿ!
Team Udayavani, May 17, 2020, 7:43 AM IST
ಬೆಂಗಳೂರು: ಲಾಕ್ಡೌನ್ನಿಂದ ಬಹುತೇಕ ವಿಶ್ವವಿದ್ಯಾಲಯ ಹಾಗೂ ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣ ಸಂಸ್ಥೆಗಳು ಆನ್ ಲೈನ್ ತರಗತಿ ನಡೆಸುತ್ತಿವೆ. ಹಲವು ಸಂಸ್ಥೆಗಳು ಯೂಟ್ಯೂಬ್ ಚಾನಲ್ ಮೂಲಕ ಪಠ್ಯ ಬೋಧನೆ ಮಾಡುತ್ತಿವೆ. ಆದರೆ, ವಿದ್ಯಾರ್ಥಿಗಳಿಗೆ ಇದು ದುಬಾರಿಯಾಗುತ್ತಿದೆ. ವೈ-ಫೈ ಹೊಂದಿದ್ದು, ಆ ಮೂಲಕ ಇಂಟರ್ನೆಟ್ ಬಳಕೆ ಮಾಡುವವರ ಸಂಖ್ಯೆ ನಗರ ಪ್ರದೇಶದಲ್ಲಿ ಹೆಚ್ಚಿರಬಹುದು.
ಆದರೆ, ಗ್ರಾಮೀಣ ಭಾಗದ ಶೇ.90ಕ್ಕೂ ಅಧಿಕ ವಿದ್ಯಾರ್ಥಿಗಳು ಮೊಬೈಲ್ ಇಂಟರ್ನೆಟ್ ಬಳಸುತ್ತಿದ್ದಾರೆ. ಬಹುತೇಕ ಮೊಬೈಲ್ ನೆಟ್ವರ್ಕ್ ಸಂಸ್ಥೆಗಳು ದಿನಕ್ಕೆ ಒಂದು ಜಿಬಿ, ಒಂದೂವರೆ ಜಿಬಿ ಹೆಚ್ಚೆಂದರೆ ಎರಡು ಜಿಬಿ ಡಾಟಾ ನೀಡುತ್ತಿವೆ. ಇದಕ್ಕೆ ಪ್ರತಿ ತಿಂಗಳು ಅಥವಾ ಎರಡು- ಮೂರು ತಿಂಗಳಿಗೊಮ್ಮೆ ರೀಚಾರ್ಜ್ ಮಾಡಿಕೊಳ್ಳಬೇಕು. ಆನ್ಲೈನ್ ತರಗತಿಯಲ್ಲಿ ಭಾಗವಹಿಸುತ್ತಿ ರುವ ವಿದ್ಯಾರ್ಥಿಗಳಿಗೆ ನಿತ್ಯದ ಮೊಬೈಲ್ ಡಾಟಾ ಸಾಕಾಗುತ್ತಿಲ್ಲ.
ಇದಕ್ಕಾಗಿಯೇ ಪ್ರತ್ಯೇಕ ರೀಚಾರ್ಜ್ ಮಾಡಿಕೊಳ್ಳಬೇಕಾಗಿದೆ. ಯೂಟ್ಯೂಬ್ ಚಾನಲ್ ಹಾಗೂ ಯೂಟ್ಯೂಬ್ ತರಗತಿ ವಿಡಿಯೋ ನೋಡಲು ಇನ್ನಷ್ಟು ಡಾಟಾ ಬೇಕಾಗುತ್ತದೆ. ಸಾಮಾನ್ಯ ತರಗತಿಗಿಂತ ಆನ್ಲೈನ್ ತರಗತಿ ವಿದ್ಯಾರ್ಥಿಗಳಿಗೆ ದುಬಾರಿಯಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. 399ರೂ. 54 ದಿನಗಳ ರೀಚಾರ್ಜ್ ಪ್ಯಾಕ್ನಲ್ಲಿ ದಿನಕ್ಕೆ 1ಜಿಬಿ ಡಾಟಾ ಸಿಗುತ್ತದೆ.
ನಿರಂತರ ಎರಡು ಗಂಟೆ ತರಗತಿಗಳನ್ನು ಆನ್ಲೈನ್ನಲ್ಲಿ ಭಾಗವಹಿಸುವಷ್ಟರಲ್ಲಿ 700-800 ಎಂಬಿ ಖಾಲಿಯಾಗಿರುತ್ತದೆ. ಯೂಟ್ಯೂಬ್ನಲ್ಲಿ ಬಿಟ್ಟಿರುವ ವಿಡಿಯೋ ಕೂಡ ನೋಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಪ್ರತ್ಯೇಕ ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ. ತಿಂಗಳಿಗೆ 500ರಿಂದ 800ರೂ. ಹೆಚ್ಚುವರಿಯಾಗಿ ಮೊಬೈಲ್ಗೆ ರೀಚಾರ್ಜ್ ಮಾಡಬೇಕಾಗಿದೆ ಎಂದು ವಿದ್ಯಾರ್ಥಿಗಳು ನೋವು ತೋಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.