ಕ್ವಾರಂಟೈನ್ ಕೇಂದ್ರಗಳಿಗೆ ಶಾಸಕ ಮತ್ತಿಮಡು ಭೇಟಿ-ಪರಿಶೀಲನೆ
Team Udayavani, May 17, 2020, 10:51 AM IST
ಸಾಂದರ್ಭಿಕ ಚಿತ್ರ
ಶಹಾಬಾದ: ನಗರದಲ್ಲಿ ವಿವಿಧ ರಾಜ್ಯದಿಂದ ವಲಸೆ ಬಂದ ಕಾರ್ಮಿಕರಿಗೆ ಕ್ವಾರಂಟೈನ್ ಮಾಡಲಾದ ಶಾಸಕರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಜಿಇ ಕಾಲೋನಿಯ ಎಂಸಿಸಿ ಶಾಲೆಗೆ ಶಾಸಕ ಬಸವರಾಜ ಮತ್ತಿಮಡು ಭೇಟಿ ನೀಡಿ ವಲಸೆ ಕಾರ್ಮಿಕರ ಆರೋಗ್ಯ ವಿಚಾರಿಸಿದರು.
ನಗರದ ವ್ಯಾಪ್ತಿಯ ಎರಡು ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿದ ಶಾಸಕ ಮತ್ತಿಮಡು, ಕ್ವಾರಂಟೈನ್ ಕೇಂದ್ರದಲ್ಲಿ ಆಹಾರ, ತಿಂಡಿ, ನೀರು ಸರಿಯಾದ ಸಮಯಕ್ಕೆ ಸಿಗುತ್ತಿದೆಯೇ ಎಂದು ವಿಚಾರಿಸಿದರು. ಅಲ್ಲದೆ, ಆಹಾರ ಪೂರೈಕೆಯಲ್ಲಿ ಅಲ್ಪಸ್ವಲ್ಪ ವಿಳಂಬವಾದಲ್ಲಿ ತಾಲೂಕು ಆಡಳಿತದ ಜತೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಎಲ್ಲರ ಆರೋಗ್ಯ ದೃಷ್ಠಿಯಿಂದ ನಿಮ್ಮನ್ನೆಲ್ಲ ಕ್ವಾರಂಟೈನ್ ಮಾಡಲಾಗಿದ್ದು, ಸರ್ಕಾರದ ನಿಯಮಗಳನ್ನು ಚಾಚು ತಪ್ಪದೇ ಅನುಸರಿಸಿ ಎಂದು ಹೇಳಿದರು. ತಹಶೀಲ್ದಾರ್ ಸುರೇಶ ವರ್ಮಾ ಮಾತನಾಡಿ, ಗರ್ಭೀಣಿ, ವಯೋವೃದ್ಧ ಹಾಗೂ ಮಕ್ಕಳಿಗೆ ಶೌಚಾಲಯ ಒಳಗೊಂಡ ಕೋಣೆ ಹೊಂದರುವ ಕಟ್ಟಡ ತೋರಿಸಿದರೆ, ಅದನ್ನೆ ಅಧಿಕಾರಿಗಳು ಪರಿಶೀಲಿಸಿ ಅವರನ್ನು ಪ್ರತ್ಯೇಕವಾಗಿ ಹೋಮ್ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಪೌರಾಯುಕ್ತ ವೆಂಕಟೇಶ, ಪಿಐ ಬಿ. ಅಮರೇಶ, ನೈರ್ಮಲ್ಯ ನಿರೀಕ್ಷಕ ಶಿವುಕುಮಾರ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಸುಭಾಷ ಜಾಪೂರ, ನಾಗರಾಜ ಮೇಲಗಿರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.