ಉಚಿತ ಕುಡಿಯುವ ನೀರು ಒದಗಿಸುವ ಗ್ರಾ.ಪಂ. ಸದಸ್ಯ
Team Udayavani, May 18, 2020, 5:13 AM IST
ಕಟಪಾಡಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಉದ್ಯಮಗಳು ತತ್ತರಿಸಿದ್ದರೂ, ಉದ್ಯಮಿ ಕಟಪಾಡಿ ಗ್ರಾ.ಪಂ. ಸದಸ್ಯ ಅಬೂಬಕರ್ ಎ.ಅರ್. ಅವರು ಈ ರಮ್ಜಾನ್ ಮಾಸದಲ್ಲಿಯೂ ಬಸವಳಿಯದೆ ದಿನವೊಂದರ ಸುಮಾರು 7 ಸಾವಿರ ರೂ. ವ್ಯಯಿಸಿ ಸರಕಾರಿ ಗುಡ್ಡೆ ಕಾಲನಿಯ ನಿವಾಸಿಗಳಿಗೆ ನಿತ್ಯ ಕುಡಿಯುವ ನೀರನ್ನು ಸರಬರಾಜು ಮಾಡುವ ಮೂಲಕ ಮಾನವೀಯ ಸ್ಪಂದನೆಯನ್ನು ನೀಡುತ್ತಿದ್ದಾರೆ.
ಈ ಕಾಲನಿಯು 12 ಕ್ರಾಸ್‌ಗಳನ್ನು ಹೊಂದಿದ್ದು, ಬೇಸಗೆಯ ಕುಡಿಯುವ ನೀರಿನ ಬರವನ್ನು ನೀಗಿಸಲು ದಿನನಿತ್ಯ ಸುಮಾರು 28 ಸಾವಿರ ಲೀಟರ್‌ಗಳಷ್ಟು ಕುಡಿಯುವ ನೀರನ್ನು ವಾಹನದ ಮೂಲಕ ಮನೆ ಮನೆಗೆ ಸರಬರಾಜು ಮಾಡುವ ಈ ಪಂಚಾಯತ್ ಸದಸ್ಯ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜನರ ಸೇವೆಯಲ್ಲಿ ನಿರತರಾಗಿದ್ದಾರೆ.
ಕಟಪಾಡಿ ಗ್ರಾ.ಪಂ. ವ್ಯಾಪ್ತಿಗೊಳಪಡುವ ಈ ಕಾಲನಿಯಲ್ಲಿ ಸುಮಾರು 300ರಷ್ಟು ಮನೆಗಳಿದ್ದು, ಇದ್ದ ಬಾವಿ, ನೀರಿನ ಆಶ್ರಯವು ಬತ್ತಿ ಹೋಗಿರುತ್ತದೆ. ಅಬೂಬಕರ್ ಅವರ ಮನೆಯ ಬಾವಿಯಲ್ಲಿ ಹೇರಳವಾಗಿ ಹೊಂದಿರುವ ನೀರು ಮತ್ತು ಕಡಿಮೆಯಾದಲ್ಲಿ ತಮ್ಮದೇ ಇತರ ಬಾವಿಗಳ ನೀರನ್ನು 8 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್‌ಗಳಿಗೆ ತುಂಬಿಸಿ ಸ್ವಂತ ಖರ್ಚಿನಲ್ಲಿಯೇ ಟೆಂಪೋದಲ್ಲಿ ಸರಬರಾಜು ಮಾಡಿ ಈ ಸರಕಾರಿ ಗುಡ್ಡೆಯ ಕಾಲನಿಯ ಬೇಡಿಕೆಯುಳ್ಳ ಮನೆಗಳಿಗೆ ಜಾತಿ-ಮತ, ಪಕ್ಷ, ಭೇದ ಮರೆತು ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದ್ದಾರೆ. ದಿನವೊಂದರ 200ರಿಂದ 300 ಲೀಟರ್‌ಗೂ ಅಧಿಕ ನೀರನ್ನು ಪ್ರತೀ ಮನೆಗೂ ತಲುಪುವಂತೆ ನೋಡಿಕೊಳ್ಳುತ್ತಿದ್ದಾರೆ. ಉದ್ಯಮಿ ಅಬೂಬಕರ್ ಮನೆಮಂದಿಯ ಸಹಕಾರದೊಂದಿದೆ ಸರಬರಾಜು ಮಾಡುತ್ತಿದ್ದು, ಜನಸೇವೆಯಲ್ಲಿ ನಿರತರಾಗಿರುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
ಆನ್‌ಲೈನ್‌ನಲ್ಲಿ ಅಧಿಕ ಲಾಭಾಂಶದ ಆಮಿಷ: ಬ್ಯಾಂಕ್ ಮ್ಯಾನೇಜರ್‌ಗೆ ಲಕ್ಷಾಂತರ ರೂ. ವಂಚನೆ
Udupi: ಹೂಡೆ ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ
Hiriydaka: ಒಟಿಪಿ ನೀಡಿ 5 ಲಕ್ಷ ರೂ. ಕಳೆದುಕೊಂಡ ಯುವತಿ
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.