ಮೂರ್ಖತನದ ನಿರ್ಧಾರ, ಚಾಣಾಕ್ಷ ನಡೆಯಾಗಿದ್ದು!
Team Udayavani, May 18, 2020, 4:30 AM IST
ಇಂದು ಸದ್ದು ಮಾಡುತ್ತಿರುವ ಆನ್‌ಲೈನ್ ಭಾರತಕ್ಕೆ ಕಾಲಿಟ್ಟು ಅದರ ಸ್ಥಾಪನೆ ಕ್ಷೇತ್ರಕ್ಕೆ ಕಾಲಿಟ್ಟಿರಲಿಲ್ಲ. ಬಾಡಿಗೆಗೆ ಕೊಡುತ್ತಿದ್ದ ಸಂಸ್ಥೆಯಾಗಿತ್ತು. ಲಕ್ಷಾಂತರ ಮಂದಿ ಚಂದಾದಾರರಿದ್ದರು. ಆ ದಿನಗಳಲ್ಲಿ ಈ ಸಂಸ್ಥೆ ಎಷ್ಟು ಪ್ರಖ್ಯಾತಿ ಪಡೆದಿತ್ತು ಎಂದರೆ, ದಿನವೊಂದಕ್ಕೆ ಸುಮಾರು 10 ಲಕ್ಷ ಡಿವಿಡಿಗಳನ್ನು ಕೊರಿಯರ್ ಮೂಲಕ ಗ್ರಾಹಕರಿಗೆ ತಲುಪಿಸುತ್ತಿತ್ತು. ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದಾಗಲೇ, ಈ ಸಂಸ್ಥೆಯ ಸ್ಥಾಪಕ ರೀಡ್ ಹೇಸ್ಟಿಂಗ್ಸ್, ಒಂದು ಅಚ್ಚರಿಯ ನಿರ್ಧಾರ ಕೈಗೊಂಡ.
ತನ್ನ ಚಂದಾದಾರರಿಗೆ ಹೆಚ್ಚಿನ ಶುಲ್ಕ ವಿಧಿಸಿದ. ಜೊತೆಗೆ, ಡಿವಿಡಿ ಬಾಡಿಗೆ ಮತ್ತು ಆನ್‌ಲೈನ್ ಸ್ಟ್ರೀಮಿಂಗ್ ಸೇವೆ ಎಂದು, ಎರಡು ಪ್ರತ್ಯೇಕ ವಿಭಾಗಗಳನ್ನು ಸೃಷ್ಟಿಸಿದ. ಅಮೆರಿಕದಾದ್ಯಂತ, ಇದಕ್ಕೆ ಭಾರೀ ವಿರೋಧ ವ್ಯಕ್ತವಾಯಿತು. ಬಿಝಿನೆಸ್ ಪರಿಣತರು, ಇದು ಮೂರ್ಖತನದ ನಿರ್ಧಾರ ಎಂದು ಹೀಗಳೆದರು. ಅದಕ್ಕೆ ಸರಿಯಾಗಿ, ಸುಮಾರು 8 ಲಕ್ಷ ಚಂದಾದಾರರನ್ನು, ಕಂಪನಿ ಕಳೆದುಕೊಂಡಿತು. ಕೆಲ ಸಂಸ್ಥೆಗಳು, ತಾವು ಇನ್ನುಮುಂದೆ ನೆಟ್‌ಫ್ಲಿಕ್ಸ್‌ಗೆ ಸಿನಿಮಾ ನೀಡುವುದಿಲ್ಲ ಎಂದುಬಿಟ್ಟವು. ಈ ಹೊಡೆತದಿಂದ ಚೇತರಿಸಿಕೊಳ್ಳಲು ಒಂದು ವರ್ಷವೇ ಹಿಡಿಯಿತು.
ಫಿನಿಕ್ಸ್‌ನಂತೆ ಮೇಲೆದ್ದ ಸಂಸ್ಥೆ, ಮತ್ತೆ ಹಿಂತಿರುಗಿ ನೋಡಲಿಲ್ಲ. “ನೆಟ್‌ಫ್ಲಿಕ್ಸ್ ಒರಿಜಿನಲ್ಸ’ ಎಂಬ ವಿಭಾಗದಡಿ ಸಿನಿಮಾಗಳನ್ನು ಹೊರ ತಂದಿತು. ಉತ್ಕೃಷ್ಟ ಗುಣಮಟ್ಟದ ಧಾರಾವಾಹಿಗಳನ್ನು ನಿರ್ಮಿಸಿತು. ದಶಕದ ಹಿಂದೆ ಸ್ಥಾಪಕ ರೀಡ್ ಹೇಸ್ಟಿಂಗ್ಸ್ ಕೈಗೊಂಡ ನಿರ್ಧಾರ ಮೂರ್ಖತನದ್ದಾಗಿ ರಲಿಲ್ಲ, ತುಂಬಾ ಚಾಣಾಕ್ಷ ನಡೆಯಾಗಿತ್ತು ಎಂದು ಎಲ್ಲರೂ ಹೊಗಳಿದರು. ಇಂದು, 190 ದೇಶಗಳಲ್ಲಿ ನೆಟ್‌ಫ್ಲಿಕ್ಸ್ ಚಂದಾದಾರರಿ ದ್ದಾರೆ. ಮನರಂಜನಾ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ನಿಯಂತ್ರಿಸುವ ಸಾಮರ್ಥ್ಯವನ್ನು ನೆಟ್‌ಫ್ಲಿಕ್ಸ್ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.