ಕೆ.ಸಿ.ವ್ಯಾಲಿ ನೀರಿನ ರಾಜಕೀಯ ಬಿಡಲಿ
Team Udayavani, May 18, 2020, 6:19 AM IST
ಚಿಂತಾಮಣಿ: ಕೆ.ಸಿ.ವ್ಯಾಲಿ ನೀರಿನ ವಿಚಾರದಲ್ಲಿ ಮಾಜಿ ಶಾಸಕ ಸುಧಾಕರ್ ಬೆಂಬಲಿಗರು ಜನರಿಗೆ ತಪ್ಪು ಮಾಹಿತಿ ನೀಡುವುದರ ಮೂಲಕ ನೀರಿನ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಮಾಹಿತಿ ಇಲ್ಲದೇ ಬುದ್ಧಿಹೀನರಂತೆ ಮಾತನಾ ಡು ತ್ತಿದ್ದಾರೆ ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಬೆಂಬಲಿಗರು ದೂರಿದರು.
ತಾಲೂಕಿನ ಕುರಟಹಳ್ಳಿ ಕೆರೆಯಲ್ಲಿ ಹಮ್ಮಿ ಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಬಲಿಗರು, ಶಾಸಕರು ಕುರುಟಹಳ್ಳಿ ಕೆರೆಗೆ ನೀರು ಬಿಡಬಾರದೆಂದು ಹೇಳಿಲ್ಲ. ಬದಲಾಗಿ ಕುರುಟಹಳ್ಳಿ ಕೆರೆ ಸ್ವತ್ಛಗೊಳಿಸಿ ಕೆರೆ ಕೋಡಿ ಸರಿಪಡಿಸಿದ ಬಳಿಕ ನೀರು ಬಿಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆಯೇ ಹೊರತು ನೀರು ಬಿಡಬೇಡಿ ಎಂದು ಹೇಳಿಲ್ಲ ಎಂದರು.
ಕಳೆದ ಎರಡು ದಿನಗಳು ಕುರುಟಹಳ್ಳಿ ಕೆರೆಗೆ ನೀರು ಹರಿಯುತ್ತಿರುವುದನ್ನು ತಿಳಿದು ಶಾಸಕರು ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆರೆಯಲ್ಲಿ ಜಾಲಿ ಮರಗಳ ಮುಳ್ಳಿನ ಕೊಂಪೆಗಳು ತುಂಬಿ ತುಳು ಕುತ್ತಿದ್ದನ್ನು ಕಂಡು ಹಾಗೂ ಕೆರೆ ಕೋಡಿ ಒಡೆದಿರುವು ದನ್ನು ನೋಡಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕೆರೆ ಸ್ವತ್ಛಗೊಳಿಸಿ ನೀರು ಬಿಡುವಂತೆ ಸೂಚನೆ ನೀಡಿ ದ್ದರು ಎಂದರು.
ಶಾಸಕರ ಸೂಚನೆ ಮೇರೆಗೆ ಅಧಿಕಾರಿಗಳು ಕರೆ ಸ್ವತ್ಛತೆ ಹಾಗೂ ಕೋಡಿ ರಿಪೇರಿ ಕೆಲಸಕ್ಕೆ ಮುಂದಾಗಿ ದ್ದಾರೆ. ಕಸಬಾ ಹೊಬಳಿ ಜೆಡಿಎಸ್ ಮುಖಂಡರಾದ ಸೀಕಲ್ ಶ್ರೀನಿ ವಾಸಗೌಡ, ಕುರುಬೂರು ಎಂಪಿ ಸಿಎಸ್ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಎಂ.ಎನ್ ಮುನಿನಾರಾ ಯಣಪ್ಪ, ಪಣಸಚೌಡನಹಳ್ಳಿ ಗೋಪಾಲಕೃಷ್ಣಪ್ಪ, ಕಲ್ಲಹಳ್ಳಿ ಶ್ರೀರಾಮರೆಡ್ಡಿ, ಶಂಕರರೆಡ್ಡಿ, ಮಾಡಿಕೆರೆ ರಾಜೇಶ್, ನಾಗರಾಜ್, ಮುನುಗನಹಳ್ಳಿ ಶ್ರೀನಿವಾಸ್, ಕುರಟಹಳ್ಳಿ ಕುಮಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
MUST WATCH
ಹೊಸ ಸೇರ್ಪಡೆ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.