ಇಡೀ ಜಗತ್ತನ್ನೇ ತಲ್ಲಣಿಸಿದ ಕೋವಿಡ್ ಸೋಂಕು
ವರ್ಜೀನಿಯಾ: ಲಾಕ್ಡೌನ್ ಸಡಿಲಿಕೆಯಾದ ಬಳಿಕ ಅಮೆರಿಕದ ವರ್ಜೀನಿಯಾ ಬೀಚ್ ನಲ್ಲಿ ಜನರು ಸಮಯ ಕಳೆಯುತ್ತಿರುವುದು.
ಪ್ಯಾರಿಸ್: ಲೌಕ್ಡೌನ್ ಸಡಿಲಿಕೆಗೊಂಡು ಜನಜೀವನ ಸಹಜದತ್ತ ಸಾಗುತ್ತಿದೆ.
ಜಬಲ್ಪುರ: ಬಸ್ ಮೂಲಕ ತಮ್ಮ ಊರಿಗೆ ತೆರಳುತ್ತಿರುವ ವಲಸಿಗರಿಗೆ ಸ್ವಯಂ ಸೇವಕರು ಆಹಾರ ವಿತರಿಸುತ್ತಿರುವುದು.
ಜಾಲಂಧರ್: ವಿಶೇಷ ರೈಲಿಗಾಗಿ ಕಾಯುತ್ತಿರುವ ವಲಸಿಗರು.
ಹೊಸದಿಲ್ಲಿ: ಯುಪಿ-ದಿಲ್ಲಿ ಗಡಿಯಲ್ಲಿ ಪೊಲೀಸರಿಗೆ ರೈಲು ಟಿಕೆಟ್ ತೋರಿಸುತ್ತಿರುವ ವಲಸಿಗ.
ಗಂಟುಮೂಟೆಯೇ ಸುಪ್ಪತ್ತಿಗೆ. ಊರಿನತ್ತ ಪ್ರಯಾಣಿಸಲು ಹೊರಟ ಬಾಲಕನೊಬ್ಬ ಲಗೇಜ್ ಮೇಲೆ ನಿದ್ರಿಸಿರುವುದು.
ಕುರುಕ್ಷೇತ್ರ: ಸೈಕಲ್ನಲ್ಲಿ ಗಂಟು ಮೂಟೆಯೊಂದಿಗೆ ಊರಿಗೆ ತೆರಳುತ್ತಿರುವ ವಲಸೆ ಕಾರ್ಮಿಕ.
ವಿಜಯವಾಡ: ಶಿಕಾಗೋದಿಂದ ಹೈದರಾಬಾದ್ಗೆ ಬಂದ ವ್ಯಕ್ತಿಯ ಕೋವಿಡ್ ಪರೀಕ್ಷೆ ಮಾಡುತ್ತಿರುವುದು.
ರಾಂಚಿ: ಹೊಸದಿಲ್ಲಿಯಿಂದ ಬಂದ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್.
ಕೋಲ್ಕತ್ತಾ: ಹೌರಾ ರೈಲು ನಿಲ್ದಾಣದಲ್ಲಿ ಹೊಸದಿಲ್ಲಿಗೆ ಪ್ರಯಾಣಿಸಲು ರೈಲಿಗಾಗಿ ಕಾಯುತ್ತಿರುವ ವಲಸಿಗರು.
ಇಡೀ ಜಗತ್ತನ್ನೇ ತಲ್ಲಣಿಸಿದ ಕೋವಿಡ್ ಸೋಂಕಿನಿಂದಾಗಿ ಜನಜೀವನ ತತ್ತರಿಸಿ ಹೋಗಿದೆ ಒಂದು ಕಡೆ ವಲಸೆ ಕಾರ್ಮಿಕರು ತಮ್ಮ ಕುಟುಂಬದವರೊಂದಿಗೆ ಊರಿನತ್ತ ತೆರಳುತಿದ್ದರೆ ಇನ್ನು ಕೆಲವು ಪ್ರದೇಶದಲ್ಲಿ ಸಹಜ ಸ್ಥಿತಿಯತ್ತ ಮರಳುತ್ತಿದೆ.