ಸೋಂಕು ನಿವಾರಕದಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು


Team Udayavani, May 18, 2020, 5:00 PM IST

ಸೋಂಕು ನಿವಾರಕದಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು

ವಿಶ್ವಸಂಸ್ಥೆ: ಕೋವಿಡ್‌ ವೈರಾಣುವನ್ನು ಕೊಲ್ಲುವುದಕ್ಕೆ ಸೋಂಕು ನಿವಾರಕ ಔಷಧವನ್ನು ಹೊರ ವಾತಾವರಣದಲ್ಲಿ ಸಿಂಪಡಿಸುವುದು ಹೆಚ್ಚು ಹಾನಿಕಾರಕವಾಗಬಲ್ಲುದು ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಎಚ್ಚರಿಸಿದೆ.

ರಸ್ತೆಗಳು ಹಾಗೂ ಪಾದಚಾರಿ ಹಾದಿಗಳನ್ನು ಸೋಂಕಿನ ತಾಣಗಳೆಂದು ಪರಿಗಣಿಸಲಾಗದು. ಕೆಲ ದೇಶಗಳಲ್ಲಿ ಹೊರಗಡೆ ಸೋಂಕು ನಿವಾರಕ ಔಷಧವನ್ನು ಸಿಂಪಡಿಸುವುದು ಕಂಡುಬರುತ್ತಿದೆ. ಇದು ಮಾನವನ ಆರೋಗ್ಯಕ್ಕೆ ಅಪಾಯವುಂಟುಮಾಡಬಲ್ಲುದು ಎಂದು WHO ಹೇಳಿದೆ. ಕೋವಿಡ್‌ 19 ವೈರಾಣು ಅಥವಾ ಇತರ ಸೂಕ್ಷ್ಮಜೀವಿಗಳನ್ನು ಕೊಲ್ಲುವುದಕ್ಕೆ ರಸ್ತೆಗಳು ಅಥವಾ ಮಾರುಕಟ್ಟೆ ಪ್ರದೇಶಗಳಂಥ ಹೊರ ವಾತಾವರಣದಲ್ಲಿ ಸೋಂಕು ನಿವಾರಕಗಳ ಸಿಂಪಡಣೆ ಅಥವಾ ಹೊಗೆಯನ್ನು ಹೊಮ್ಮಿಸುವುದಕ್ಕೆ ಶಿಫಾರಸು ಮಾಡಲಾಗುವುದಿಲ್ಲ, ಯಾಕೆಂದರೆ ಸೋಂಕು ನಿವಾರಕಗಳು ಕಸಕಡ್ಡಿ ಹಾಗೂ ಕೆಸರಿನಿಂದಾಗಿ ನಿಷ್ಫಲವಾಗುತ್ತವೆ. ಇದರಿಂದ ಲಾಭಕ್ಕಿಂತ ಮನುಷ್ಯರ ಮೇಲಾಗುವ ಹಾನಿಯೇ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಯಾವುದೇ ಸನ್ನಿವೇಶದಲ್ಲೂ ವ್ಯಕ್ತಿಗಳ ಮೇಲೆ ಸೋಂಕು ನಿವಾರಕಗಳನ್ನು ಸಿಂಪಡಿಸುವುದನ್ನು ಶಿಫಾರಸು ಮಾಡಲು ಸಾಧ್ಯವೇ ಇಲ್ಲ. ಇದು ದೈಹಿಕ ಹಾಗೂ ಮಾನಸಿಕ ಹಾನಿಯುಂಟುಮಾಡಬಲ್ಲುದು. ಅಲ್ಲದೆ ಇದರಿಂದಾಗಿ ಸೋಂಕು ಪೀಡಿತ ವ್ಯಕ್ತಿ ತನ್ನ ಉಸಿರಿನ ಹನಿ ಅಥವಾ ಸ್ಪರ್ಶ ಮೂಲಕ ವೈರಾಣುವನ್ನು ಹಬ್ಬಿಸುವ ಸಾಮರ್ಥ್ಯಕ್ಕೆ ಕುಂದು ಉಂಟಾಗದು ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ.

ಕ್ಲೋರಿನ್‌ ಅಥವಾ ಇತರ ವಿಷಕಾರಿ ರಾಸಾಯನಿಕಗಳನ್ನು ಜನರ ಮೇಲೆ ಸಿಂಪಡಿಸುವುದರಿಂದ ಕಣ್ಣು ಹಾಗೂ ಚರ್ಮದ ತುರಿಕೆ, ಅಸ್ತಮಾ ಹಾಗೂ ಕರುಳಿನ ಸಮಸ್ಯೆಗಳು ತಲೆದೋರಬಹುದು ಎಂದು WHO ತಿಳಿಸಿದೆ.

ಒಳಾಂಗಣ ಪ್ರದೇಶಗಳ ಮೇಲ್ಮೈಗೆ ಸೋಂಕು ನಿವಾರಕಗಳ ವ್ಯವಸ್ಥಿತ ಸಿಂಪಡಣೆ ಮತ್ತು ಹೊಗೆ ಹೊಮ್ಮಿಸುವುದರ ಕುರಿತಾಗಿಯೂ ಎಚ್ಚರಿಸಿರುವ WHO, ನೇರ ಸಿಂಪಡಣೆ ಪ್ರದೇಶಗಳ ಹೊರಗಡೆ ಅವು ಪರಿಣಾಮರಹಿತವೆಂದು ಅಧ್ಯಯನವೊಂದು ತೋರಿಸಿರುವುದಾಗಿ ಹೇಳಿದೆ.

ಸೋಂಕು ನಿವಾರಕ ಔಷಧವನ್ನು ಬಳಸಬೇಕಿದ್ದಲ್ಲಿ ಬಟ್ಟೆಯೊಂದನ್ನು ಸೋಂಕುನಿವಾರಕದಲ್ಲಿ ಅದ್ದಿ ಅದರಿಂದ ಒರೆಸುವುದು ಒಳಿತು ಎಂದು ಅದು ತಿಳಿಸಿದೆ.

ಚೀನದಲ್ಲಿ ಕಳೆದ ಡಿಸೆಂಬರ್‌ ಅಂತ್ಯದ ವೇಳೆ ಕಾಣಿಸಿಕೊಂಡು ಜಗತ್ತಿನ ಉದ್ದಗಲಕ್ಕೂ ಹರಡಿ 3,00,000ಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿರುವ ಕೋವಿಡ್‌ ವೈರಾಣು ಮೇಲ್ಮೈಗಳು ಹಾಗೂ ವಸ್ತುಗಳ ಮೇಲೆ ಅಂಟಿಕೊಳ್ಳಬಹುದಾಗಿದೆ. ಆದರೆ ವೈರಾಣು ವಿವಿಧ ಮೇಲ್ಮೈಗಳಲ್ಲಿ ಎಷ್ಟು ಅವಧಿಗೆ ಸೋಂಕುಕಾರಕವಾಗಿ ಉಳಿಯಬಲ್ಲುದೆಂದು ಯಾವುದೇ ನಿಖರ ಮಾಹಿತಿ ಇನ್ನೂ ಇಲ್ಲವಾಗಿದೆ. ಅನೇಕ ವಿಧದ ಮೇಲ್ಮೈಗಳಲ್ಲಿ ಅದು ಅನೇಕ ದಿನಗಳ ಕಾಲ ಉಳಿಯಬಲ್ಲುದೆಂದು ಅಧ್ಯಯನಗಳು ತೋರಿಸಿವೆಯಾದರೂ ಈ ಗರಿಷ್ಠ ಅವಧಿಗಳು ಕೇವಲ ಸೈದ್ಧಾಂತಿಕವಾಗಿವೆ, ಯಾಕೆಂದರೆ ಅವು ಪ್ರಯೋಗಾಲಯ ಪರಿಸ್ಥಿತಿಯಲ್ಲಿ ದಾಖಲಾಗಿವೆ ಮತ್ತು ವಾಸ್ತವ ಜಗತ್ತಿನ ಪರಿಸರದಲ್ಲಿ ಅದನ್ನು ಎಚ್ಚರಿಕೆಯಿಂದ ವ್ಯಾಖ್ಯಾನಿಸಬೇಕಾಗಿದೆ ಎಂದು ಕೂಡ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕೋವಿಡ್‌ ನಿವಾರಣೆಗಾಗಿ ಭಾರತವೂ ಸೇರಿದಂತೆ ಹಲವು ದೇಶಗಳು ಸೋಂಕುನಿವಾರಕ ಸುರಂಗಗಳು ಹಾಗೂ ಬಸ್‌ಗಳನ್ನು ನಿರ್ಮಿಸಿರುವ ಹಿನ್ನೆಲೆಯಲ್ಲಿ ಡಬ್ಲ್ಯುಎಚ್‌ಒದ ಎಚ್ಚರಿಕೆ ಮಹತ್ವ ಪಡೆಯುತ್ತದೆ.

ಟಾಪ್ ನ್ಯೂಸ್

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.