ಹೆಚ್ಚುತ್ತಿವೆ ಕ್ವಾರಂಟೈನ್ ಕೇಂದ್ರಗಳು
Team Udayavani, May 18, 2020, 6:20 PM IST
ಸಾಂದರ್ಭಿಕ ಚಿತ್ರ
ಮುದಗಲ್ಲ: ಕ್ವಾರಂಟೈನ್ ಕೇಂದ್ರಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ದೇಶದ್ಯಾಂತ ಲಾಕ್‌ಡೌನ್ ಸಡಿಲಿಸಿದ್ದರಿಂದ ವಿವಿಧಡೆ ಗುಳೆ ಹೋಗಿದ್ದ ಜನರು ಸ್ವಗ್ರಾಮಗಳಿಗೆ ಮರಳಿ ಬರುತ್ತಿದ್ದಾರೆ.
ಇನ್ನೂ ಕೋವಿಡ್ ಸೋಂಕಿತರು ಓಡಾಟ ಹೆಚ್ಚಾಗಿದ್ದರಿಂದ ಕ್ವಾರಂಟೈನ್‌ಗೆ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಪಟ್ಟಣ ಸೇರಿದಂತೆ ಸುತ್ತಲು 10ಕ್ಕೂ ಹೆಚ್ಚು ಸರಕಾರಿ ಕ್ವಾರಂಟೈನ್ ಕೇಂದ್ರಗಳನ್ನು ಈಗಾಗಲೇ ತೆರೆಯಲಾಗಿದೆ. ಪಟ್ಟಣದಲ್ಲಿ ಇಂದಿರಾಗಾಂಧಿ ವಸತಿ ಶಾಲೆ, ನಾಗಲಾಪುರದಲ್ಲಿ ಸರಕಾರಿ ಪ್ರೌಢಶಾಲೆ, ಖೈರವಾಡಗಿ, ನಾಗರಹಾಳ ಸೇರಿದಂತೆ ವಿವಿಧ ಕ್ವಾರಂಟೈನ್ ಕೇಂದ್ರತೆರೆಯಲಾಗಿದೆ. ತಲೇಖಾನ ಗ್ರಾಪಂ ವ್ಯಾಪ್ತಿಯಲ್ಲಿ ಪುಣೆಯಿಂದ ಬಂದ ಲಿಂಬೆಪ್ಪನ ತಾಂಡಾದ ಆರು ಜನರನ್ನು ತಲೇಖಾನ ನೂತನ ಗ್ರಾಪಂ ಕಟ್ಟಡದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಆತಂಕ ಹೆಚ್ಚುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.