ಚಿನ್ನಕ್ಕೆ “ಕನ್ನ’ ಹಾಕಿದ ಲಾಕ್‌ಡೌನ್!
ಕೋವಿಡ್-19ದಿಂದ ಮಧ್ಯಮ ವರ್ಗಕ್ಕೆ ಆರ್ಥಿಕ ಸಂಕಷ್ಟ; ಅಡವಿರಿಸಲು ಮನ
Team Udayavani, May 19, 2020, 6:15 AM IST
ಸಾಂದರ್ಭಿಕ ಚಿತ್ರ.
ಬೆಂಗಳೂರು: ದೀರ್ಘಾವಧಿಯ ಲಾಕ್‌ಡೌನ್ ಮತ್ತು ಅದು ಸೃಷ್ಟಿಸಿದ ಆರ್ಥಿಕ ಸಂಕಷ್ಟವು ಕೆಳ ಮಧ್ಯಮ ವರ್ಗದ ಮನೆಗಳಲ್ಲಿ ಜೋಪಾನವಾಗಿದ್ದ ಚಿನ್ನಕ್ಕೆ ಕನ್ನ ಹಾಕಿದೆ !
ಆರ್ಥಿಕ ಮುಗ್ಗಟ್ಟಿನ ನಡುವೆ ಜಾರಿಯಾದ ಲಾಕ್‌ಡೌನ್ ನೂರಾರು ಜನರ ಕೆಲಸ ಕಿತ್ತುಕೊಂಡಿದೆ. ಇದರಿಂದ ಹಲವಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಪರಿಣಾಮವಾಗಿ ಚಿನ್ನ ಅಡವು ಇರಿಸಿ ಸಾಲ ಪಡೆಯುವ ಪ್ರವೃತ್ತಿ ಹೆಚ್ಚಾ ಗುತ್ತಿದೆ. ಕೆಲವು ಅನಧಿಕೃತ ಲೇವಾದೇವಿದಾರರು ಪರಿ ಸ್ಥಿತಿಯ ದುರ್ಲಾಭ ಪಡೆಯುತ್ತಿದ್ದಾರೆ.
ಸುಮಾರು 2 ತಿಂಗಳ ನಿರಂತರ ಲಾಕ್‌ಡೌನ್ ಎಲ್ಲರ ಕೈಗಳನ್ನು ಬರಿದು ಮಾಡಿದೆ. ಈಗ ಜನರ ಮುಂದಿರುವ ಸುಲಭ ಆಯ್ಕೆ ಚಿನ್ನ ಅಡವು ಇರಿಸಿ ಸಾಲ ಪಡೆಯುವುದು. ಲಾಕ್‌ಡೌನ್ ಅನಂತರ ಚಿನ್ನ ಗಿರವಿ ಇರಿಸುವವರ ಸಂಖ್ಯೆ ಶೇ. 50ರಷ್ಟು ಹೆಚ್ಚಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಚಿನ್ನದ ವ್ಯಾಪಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮಧ್ಯಮ ವರ್ಗದವರೇ ಹೆಚ್ಚು
ಚಿನ್ನ ಗಿರವಿ ಇರಿಸುತ್ತಿರುವವರಲ್ಲಿ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರೇ ಹೆಚ್ಚು. ಸದ್ಯ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ.ಗೆ 4,460 ರೂ. ಇದೆ. ಅಷ್ಟನ್ನು ಅಡವು ಇರಿಸಿದರೆ 3 ಸಾವಿರ ರೂ. ಸಿಗುತ್ತದೆ. ಇದಕ್ಕೆ ಬಡ್ಡಿ ಇದ್ದು, ಬಿಡಿಸಿಕೊಳ್ಳಲು 12 ತಿಂಗಳ ಕಾಲಾವಕಾಶವಿದೆ.
ಲಾಕ್‌ಡೌನ್ ಬಳಿಕ ಚಿನ್ನ ಗಿರವಿ ಹೆಚ್ಚಿದೆ ಎನ್ನುತ್ತಾರೆ ಬೆಂಗಳೂರು ಚಿನ್ನದ ವ್ಯಾಪಾರಿ ಮಾಲಕರ ಸಂಘದ ಸಹ ನಿರ್ದೇಶಕ ದಿನೇಶ್ ಪಗಾರಿಯಾ. ಆರ್ಥಿಕ ಪರಿಸ್ಥಿತಿ ಕುಸಿದಾಗ ಚಿನ್ನವೇ ಆಸರೆಯಾಗುತ್ತದೆ. ಚಿನ್ನದ ಬೆಲೆಯೂ ಹೆಚ್ಚುತ್ತಲೇ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಅಸ್ಥಿರತೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಮುಂದೆಯೂ ಹೆಚ್ಚುವ ಸಾಧ್ಯತೆ ಇದೆ ಎನ್ನುತ್ತಾರೆ ಆರ್ಥಿಕ ತಜ್ಞ ರಂಗಸ್ವಾಮಿ ಮೂಕನಹಳ್ಳಿ.
ಹೂಡಿಕೆಗೆ ಚಿನ್ನದ ಬಾಂಡ್ ಉತ್ತಮ
ಚಿನ್ನದ ಮೇಲಿನ ಹೂಡಿಕೆ ವಿಚಾರದಲ್ಲಿ ನೈಜ ಚಿನ್ನಕ್ಕಿಂತ ಗೋಲ್ಡ್ ಬಾಂಡ್ ಖರೀದಿಸುವುದು ಉತ್ತಮ. ಗೋಲ್ಡ್ ಬಾಂಡ್ ಖರೀದಿಯಿಂದ ಪ್ರತೀ 3 ತಿಂಗಳಿಗೆ ಶೇ. 2.5ರಷ್ಟು ಬಡ್ಡಿ ಸಿಗಲಿದೆ. 6ನೇ ಅಥವಾ 7ನೇ ವರ್ಷ ಬಡ್ಡಿ, ಅಸಲು ಅಥವಾ ಅಂದಿನ ಮೌಲ್ಯದ ಮೊತ್ತಕ್ಕೆ ಚಿನ್ನ -ಈ ಎರಡರಲ್ಲಿ ಒಂದನ್ನು ಆಯ್ದುಕೊಳ್ಳಬಹುದು.
ಸುಳಿಗೆ ಸಿಲುಕುವ ಸಾಧ್ಯತೆ
ಚಿನ್ನ ಅಡವಿರಿಸುವ ಸಂದರ್ಭ ಮಧ್ಯವರ್ತಿಗಳು, ಲೇವಾದೇವಿದಾರರ ಬಳಿ ಗಿರವಿ ಇರಿಸಿದರೆ ಬಡ್ಡಿ ಸುಳಿಗೆ ಸಿಲುಕಿಕೊಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ಸರಕಾರ ಮಾನ್ಯ ಮಾಡಿದ ಸಂಸ್ಥೆಗಳಲ್ಲೇ ಅಡವು ಇರಿಸುವುದು ಮತ್ತು ಷರತ್ತುಗಳನ್ನು ಪರಿಶೀಲಿಸಿಯೇ ಮುಂದುವರಿಯುವುದು ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ
MUDA CASE: ಮುಖ್ಯಮಂತ್ರಿ ಭಾವಮೈದನ ವಿಚಾರಣೆ
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.