ಒತ್ತಡದ ಬದುಕಿಗೆ ಯೋಗವೇ ಮದ್ದು


Team Udayavani, May 19, 2020, 5:23 AM IST

ottada-yoga

ವರ್ಕ್‌ ಫ್ರಂ ಹೋಮ್‌ ಮಾಡುವವರು, ಒಂದೇ ಸ್ಥಳದಲ್ಲಿ ಹೆಚ್ಚಿನ ಸಮಯ ಕೂತು ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಭುಜ, ಕಾಲುಗಳ ನೋವು ಬರುವುದು ಸರ್ವೇಸಾಮಾನ್ಯ. ಕೆಲಸ ಮಾಡುವ ಸ್ಥಳ, ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗೆ  ಇರಬೇಕಾದ ಅಂತರವನ್ನು ಮನೆಯಲ್ಲಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಆಗದು. ಏಕೆಂದರೆ, ಒಬ್ಬೊಬ್ಬರ ಮನೆಯ ಗಾತ್ರ, ಪರಿಸ್ಥಿತಿ, ಒಂದೊಂದು ರೀತಿ. ಮುಖ್ಯವಾಗಿ, ಆಫೀಸಿನ ಮತ್ತು ಮನೆಯ ಪ್ರತ್ಯಕ್ಷ- ಪರೋಕ್ಷ ಒತ್ತಡಗಳು  ಬೇರೆಬೇರೆ ಇರುತ್ತವೆ.

ಈ ಒತ್ತಡಗಳಿಂದ ಪಾರಾಗಬೇಕೆಂದರೆ, ಯೋಗ ಮತ್ತು ಪ್ರಾಣಾಯಾಮದ ಮೊರೆ ಹೋಗಬೇಕು. ಯೋಗದಲ್ಲಿ ಮುಖ್ಯವಾಗಿ, ದ್ವಿಪಾದ ಪ್ರಸರಣಾಸನ, ಭುಜಂಗಾಸನ, ಚದುರಂಗ ದಂಡಾಸನ, ಶಶಾಂಕಾಸನಗಳನ್ನು  ಮಾಡುತ್ತಾ ಬಂದರೆ, ಮಣಿಕಟ್ಟು, ಭುಜಗಳು, ಸೊಂಟದ ಭಾಗ, ಬೆನ್ನ ಭಾಗ, ಹಿಮ್ಮಡಿ ಮತ್ತು ಮೊಣಕೈಗಳಿಗೆ ಯಥೇತ್ಛ ವ್ಯಾಯಾಮ ಆಗುತ್ತದೆ. ರಕ್ತಸಂಚಾರ ಸರಾಗವಾಗಿ ಆದರೆ, ಕೈ-ಕಾಲು ನೋವಾಗಲಿ,

ಸಡನ್ನಾಗಿ ಎಲ್ಲೆಂದರಲ್ಲಿ  ಹಿಡಿದುಕೊಳ್ಳುವುದಾಗಲಿ  ಆಗುವುದಿಲ್ಲ. ಮಂಡಿಗಳನ್ನು ನೆಲದ ಮೇಲೆ ಚಾಚಿ, ಮೊಣಕೈಗಳನ್ನು ನೇರ ಮಾಡಿ, ಕಾಲಿನ ಸ್ನಾಯುಗಳನ್ನು ಬಿಗಿಹಿಡಿಯುವ ಭುಜಂಗಾಸನವು ಸೊಂಟ, ಕಾಲಿನ ಸ್ನಾಯುಗಳಿಗೆ ಬಲ ತಂದುಕೊಡುತ್ತದೆ. ವಜ್ರಾಸನದಲ್ಲಿ ಕುಳಿತು, ಪೃಷ್ಠಗಳನ್ನು ಹಿಮ್ಮಡಿಯ ಮೇಲೆ ಕೂರಿಸಿ, ಮುಂದಕ್ಕೆ ಬಾಗಿ, ಕೈಗಳನ್ನು ನೇರವಾಗಿ ಬಾಗಿಸಿ, ಹಣೆಯನ್ನು ನೆಲದ ಮೇಲೆ ಮುಟ್ಟಿಸುವ ಶಶಾಂಕಾಸನ ಕೂಡ ಬೆನ್ನು, ಸೊಂಟದ ನೋವನ್ನು ಕಡಿಮೆ  ಮಾಡುತ್ತದೆ.

ಶಶಾಂಕಾಸನ ಮಾಡುವಾಗ, ಹೊಟ್ಟೆಯ ಒಳಗಿರುವ ಗಾಳಿಯನ್ನು ಸಂಪೂರ್ಣ ಹೊರ ಹಾಕಿ. ಮತ್ತೆ ಸ್ವಸ್ಥಾನಕ್ಕೆ ಬರುವಾಗ ಉಸಿರನ್ನು ಎಳೆದುಕೊಳ್ಳುತ್ತಾ ಹೋಗಿ. ಪ್ರತಿ ಬಾರಿಯೂ ಹೀಗೆ ಮಾಡುವುದರಿಂದ, ಹಲವು ಬಗೆಯ  ಉಪಯೋಗಗಳಿವೆ. ಈ ಯೋಗ ಮಾಡುವಾಗ ಕಣ್ಣು ಮುಚ್ಚಿಕೊಳ್ಳಿ. ಹಾಗೆ ಮಾಡಿದರೆ, ಒಂದೇ ಕಡೆ ಗಮನ ಕೇಂದ್ರೀಕರಿಸಬಹುದು. ಆಗ, ಮನಸ್ಸು ಕೂಡ ಪ್ರಫ‌ುಲ್ಲವಾಗುತ್ತದೆ.

ಟಾಪ್ ನ್ಯೂಸ್

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

13-

Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

Waqf Protest: People will overthrow the state government: Protest in Davangere

Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.