ವಿವಿಧ ಸ್ಥಳದಲ್ಲಿ 400 ರಕ್ತದ ಮಾದರಿ ಸಂಗ್ರಹ
Team Udayavani, May 19, 2020, 6:10 AM IST
ಕಲಬುರಗಿ: ಸಮುದಾಯ ಮಟ್ಟದಲ್ಲಿ ಕೋವಿಡ್ ಸೋಂಕು ಹರಡುವಿಕೆಯನ್ನು ಪತ್ತೆ ಹಚ್ಚಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ನ ವೈದ್ಯ ತಂಡದಿಂದ ಸೋಮವಾರ ಜಿಲ್ಲೆಯ 10 ಸ್ಥಳಗಳಲ್ಲಿ ಕೋವಿಡ್ ರಾಷ್ಟ್ರೀಯ ಸಿರೋ ಕಣ್ಗಾವಲು ಸಮೀಕ್ಷೆ ನಡೆಸಿ 400 ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ.
ರಾಷ್ಟ್ರೀಯ ಕ್ಷಯರೋಗ ಸಂಶೋಧನಾ ಸಂಸ್ಥೆ ಮತ್ತು ಸ್ಥಳೀಯ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ 10 ಸ್ಥಳಗಳ ಪ್ರದೇಶವನ್ನು 4 ಕ್ಲಸ್ಟರ್‌ಗಳನ್ನಾಗಿ ವಿಂಗಡಿಸಿ ಪ್ರತಿ ಕ್ಲಸ್ಟರ್‌ನಿಂದ ರ್‍ಯಾಂಡಮ್ ಮಾದರಿ ಸಂಗ್ರಹಿಸಲಾಗಿದೆ. ಆಯ್ದ ಮನೆಗಳಲ್ಲಿ ಆಯ್ದ ವ್ಯಕ್ತಿಯೊಂದಿಗೆ ಆಪ್ತ ಸಮಲೋಚನೆ ನಡೆಸಿ, ಪ್ರಶ್ನಾವಳಿಗಳಿಗೆ ಉತ್ತರ ಪಡೆದು ಅವರಿಂದ ಪರೀಕ್ಷೆ ನಡೆಸುವುದಕ್ಕೆ ಸಮ್ಮತಿ ಪಡೆದು 4-5 ಎಂಎಲ್ ರಕ್ತದ ಮಾದರಿ ಪಡೆಯಲಾಯಿತು. ಪ್ರತಿ ಕ್ಲಸ್ಟರ್‌ನಿಂದ 10 ಮಾದರಿಗಳು, ಪ್ರತಿ ಸ್ಥಳದಿಂದ 40 ಮಾದರಿ ಸೇರಿದಂತೆ ಒಟ್ಟು 400 ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಬೆಂಗಳೂರಿನಿಂದ ಆಗಮಿಸಿದ ಐಸಿಎಂಆರ್‌ನ ವಿಜ್ಞಾನಿ ಡಾ.ಶ್ರೀನಿವಾಸ, ವೈದ್ಯರಾದ ಡಾ| ಹಂಸವೇಣಿ, ಡಾ| ಸ್ವಾತಿ, ಡಾ| ಚೇತನಾ, ಡಾ| ಕಿರಣ ಹಾಗೂ ಟೆಕ್ನಿಶಿಯನ್, ಆರೋಗ್ಯ ಸಹಾಯಕರನ್ನೊಳಗೊಂಡ 20 ಜನರ ತಂಡ ಸೋಮವಾರ ಜಿಲ್ಲೆಯ 10 ಸ್ಥಳಗಳಿಗೆ ಪ್ರತ್ಯೇಕ ಮನೆ-ಮನೆಗೆ ಭೇಟಿ ನೀಡಿ ರಕ್ತದ ಮಾದರಿ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಐಸಿಎಂಆರ್ ನಿರ್ದೇಶನದಂತೆ 18 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಂದ ಮಾತ್ರ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದು, ಕೋವಿಡ್ ವಿರುದ್ಧ ಹೋರಾಡಲು ದೇಹದಲ್ಲಿ ಪ್ರತಿಕಾಯವಾಗಿ ಗುರುತಿಸಿಕೊಂಡಿರುವ ಇಮ್ಮೂನೋಗ್ಲೋಬಿನ್ಸ್ ಜಿ. ಎಂಟಿಬಾಡೀಸ್ ಪತ್ತೆಗೆ ಇಎಲ್‌ಐಎಸ್‌ಎ ವಿಧಾನದ ಪರೀಕ್ಷೆಗೆ ಮಾದರಿಗಳನ್ನು ಚೆನ್ನೈಗೆ ಕಳುಹಿಸಲಾಗುತ್ತದೆ. ಇಎಲ್‌ಐಎಸ್‌ಎ ವಿಧಾನದ ಪರೀಕ್ಷೆ ನಂತರ ಕೋವಿಡ್ ಸೋಂಕು ವಿರುದ್ಧ ಹೋರಾಡಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿರುವ ಬಗ್ಗೆ ಅಂಶಗಳು ಬೆಳಕಿಗೆ ಬರಲಿದೆ ಎಂದರು. ಸಮುದಾಯ ಹರಡುವಿಕೆ ಅವಲೋಕಿಸಲು ಕಲಬುರಗಿ, ಚಿತ್ರದುರ್ಗ ಹಾಗೂ ಬೆಂಗಳೂರು ನಗರ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.