ನೀರು ಸರಬರಾಜು ಪೈಪ್‌ಗೆ ಹಾನಿ: ದೂರು ದಾಖಲು
Team Udayavani, May 19, 2020, 8:38 AM IST
ಹೊಸಕೋಟೆ: ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಳವಡಿಸಿ ದ್ದ ಪೈಪ್‌ಗ್ಳಿಗೆ ಭಾನುವಾರ ರಾತ್ರಿ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ. ಈ ಬಗ್ಗೆ ನಗರಸಭೆಯಿಂದ ಪೊಲೀಸರಿಗೆ ದೂರು ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಶರತ್ ಬಚ್ಚೇಗೌಡ ಮಾತನಾಡಿದರು.
ಒಂದು ತಿಂಗಳ ಹಿಂದೆ ತಾಲೂಕಿನ ಉಪ್ಪಾರ ಹಳ್ಳಿಯಿಂದ ರೈತರ ಕೃಷಿ ಹೊಂಡ ಗಳಿಂದ ನೀರು ಪಡೆಯಲಾಗುತ್ತಿದೆ. ಅದರೊಂ ದಿಗೆ ಕೆರೆ ಅಂಗಳದಲ್ಲಿ ನೂತನವಾಗಿ ಕೊರೆದಿರುವ 4 ಕೊಳವೆ ಬಾವಿಗಳ ನೀರು ಸಂಗ್ರಹಿಸಲು ನಗರಸಭೆಯಿಂದ ದೊಡ್ಡ ಕೆರೆ ಅಂಗಳದ ಗವಿರಸ್ತೆ ಬಳಿ ಕೃಷಿ ಹೊಂಡ ನಿರ್ಮಿಸಲಾಗಿದೆ.
ಎರಡು ನೀರನ್ನು ನಗರಸಭೆಯ ಬಾವಿಗೆ ನೀರು ಪಂಪ್ ಮಾಡಲು ವ್ಯವಸ್ಥೆಗೊಳಿಸಲಾಗಿತ್ತು. ಇದರಿಂದಾಗಿ ನಗರದಲ್ಲಿ 12-15 ದಿನಗಳಿಗೊಮ್ಮೆ ನಿವಾಸಿಗಳಿಗೆ ಸರಬರಾಜಾಗುತ್ತಿದ್ದ, ನೀರಿನ ಅವಧಿ 8-10 ದಿನಗಳಿಗೆ ಇಳಿಕೆಯಾಗಲು ಸಹಕಾರಿಯಾಗಿತ್ತು. ವ್ಯವಸ್ಥೆ ಸುಧಾರಣೆ ಸಹಿಸದ ಕೆಲವು ದುಷ್ಕರ್ಮಿಗಳು ದುರುದ್ದೇಶದಿಂದ ಪೈಪ್‌ಗೆ ಹರಿತ ಆಯುಧದಿಂದ ಹಾನಿಗೊಳಿಸಿ 1 ಲಕ್ಷ ಲೀ. ನೀರು ಮಧ್ಯದಲ್ಲೇ ವ್ಯರ್ಥ ವಾಗುವಂತೆ ಮಾಡಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಇಂತಹ ಅನಾಹುತ 3ನೇ ಬಾರಿಗೆ ಮರುಕಳಿಸುತ್ತಿರುವುದು ಖಂಡನೀಯ ಎಂದರು. ಇಂತಹ ಅಮಾನವೀಯ ಕೃತ್ಯ ನಡೆಸಿರುವವರ ವಿರುದ್ಧ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ನಗರಸಭೆ ಸದಸ್ಯ ಕೇಶವಮೂರ್ತಿ, ಪೌರಾಯುಕ್ತ ನಿಸಾರ್ ಅಹಮದ್, ಎಸ್‌ಐ ರಾಜು ಇನ್ನಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.