ಮೈಸೂರು ನಗರಕ್ಕೆ 5 ಸ್ಟಾರ್ ಗರಿಮೆ
Team Udayavani, May 20, 2020, 6:14 AM IST
ಮೈಸೂರು: ಭಾರತ ಸರ್ಕಾರ ನಗರಾಭಿವೃದ್ಧಿ ಮಂತ್ರಾಲಯವು ನಡೆಸುವ ಸ್ವಚ್ಛ ಭಾರತ ಅಭಿಯಾನದ ಸಮೀಕ್ಷೆಯಲ್ಲಿ ದೇಶದ ತ್ಯಾಜ್ಯ ಮುಕ್ತ ನಗರಗಳ ಪೈಕಿ ಮೈಸೂರು ನಗರಕ್ಕೆ 5 ಸ್ಟಾರ್ ಗರಿಮೆ ನೀಡಲಾಗಿದೆ ಎಂದು ಮಹಾನಗರ ಪಾಲಿಕೆಯ ಮೇಯರ್ ತಸ್ನೀಂ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನಡೆಸಿದ ತ್ಯಾಜ್ಯ ಮುಕ್ತ ನಗರಗಳ ಸಮೀಕ್ಷೆಯಲ್ಲಿ ದೇಶದ 1435 ನಗರಗಳು ಭಾಗವಹಿಸಿದ್ದು, ತ್ಯಾಜ್ಯ ಮುಕ್ತ ನಗರಕ್ಕೆ ನಿಗಧಿಪಡಿಸಿದ 1000 ಅಂಕಗಳಲ್ಲಿ ಮೈಸೂರು 800 ಅಂಕ ಪಡೆದು 5 ಸ್ಟಾರ್ ಗರಿಮೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಒಟ್ಟು 141 ನಗರಗಳು ತ್ಯಾಜ್ಯಮುಕ್ತ ನಗರಗಳಾಗಿವೆ. ಇದರಲ್ಲಿ ಮೈಸೂರು ನಗರ ಸೇರಿದಂತೆ ಆರು ನಗರಗಳು ಮಾತ್ರ 5 ಸ್ಟಾರ್ ಗರಿಮೆ ಪಡೆದುಕೊಂಡಿವೆ ಎಂದರು. ಮೈಸೂರು ನಗರಕ್ಕೆ ತ್ಯಾಜ್ಯ ಮುಕ್ತ ನಗರದ ಗರಿಮೆ ಉಳಿದುಕೊಳ್ಳಲು ಹಗಲಿರುಳು ಶ್ರಮಿಸಿದ ಪೌರಕಾರ್ಮಿಕರು, ನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಸ್ವಚ್ಛತಾ ರಾಯಭಾರಿಗಳು, ಸಂಘ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ಈ ವೇಳೆ ಅಭಿನಂದನೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ಸಿ.ಶ್ರೀಧರ್, ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಗೋಪಿ, ನಗರ ಪಾಲಿಕೆ ಸದಸ್ಯರಾದ ಪ್ರೇಮ, ಸುಬ್ಬಯ್ಯ, ಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್, ಡಾ.ನಾಗರಾಜು ಉಪಸ್ಥಿತರಿದ್ದರು.
ನಗರದ ಪ್ರವಾಸಿ ತಾಣಗಳು ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುತ್ತಿದೆ. ದಕ್ಷಿಣ ಭಾರತದಲ್ಲೇ 5 ಸ್ಟಾರ್ ಪಡೆದಿರುವ ಏಕೈಕ ನಗರ ನಮ್ಮ ಮೈಸೂರಾಗಿದೆ.
-ಗುರುದತ್ ಹೆಗೆಡೆ, ಮಹಾನಗರ ಪಾಲಿಕೆಯ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.