ಕೋವಿಡ್ ಸಂದೇಶದ ಒಟ್ಟಿಗೆ ಮೊಬೈಲ್ಗೂ “ವೈರಸ್’ ತಗಲುತ್ತೆ!
Team Udayavani, May 20, 2020, 11:18 AM IST
ಸಾಂದರ್ಭಿಕ ಚಿತ್ರ
ಕೋವಿಡ್ ಜಾಗೃತಿ ಸಂಬಂಧಿತ ಆ್ಯಪ್ಗಳು, ಸಂದೇಶಗಳ ಲಿಂಕ್ಗಳ ಮೇಲೆ ಕ್ಲಿಕ್ಕಿಸುವಾಗ ಎಚ್ಚರ. ಇದರೊಂದಿಗೆ ಸೆರ್ಬರಸ್ ಎಂಬ ವೈರಸ್ ಕೂಡ ನಿಮ್ಮ ಸ್ಮಾರ್ಟ್ಫೋನ್ ಸೇರಬಹುದು! ಈ ಬಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ಎಲ್ಲ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ರವಾನಿಸಿದೆ. ಕೋವಿಡ್ ಸಂಬಂಧಿತ ಸಂದೇಶ, ಆ್ಯಪ್ಗ್ಳಿಂದ ಲಾಭ ಪಡೆದುಕೊಳ್ಳಲೆಂದೇ, ಬ್ಯಾಂಕಿಂಗ್ ಟ್ರೋಜನ್ಗೆ ಸಂಬಂಧಿಸಿದ ಈ ವೈರಸ್ ಅನ್ನು ಹ್ಯಾಕರ್ಸ್ಗಳು ಸೃಷ್ಟಿಸಿದ್ದಾರೆ. ಇಂಥ ಕೊಂಡಿಗಳನ್ನು ಕ್ಲಿಕ್ಕಿಸಿದಾಗ, ಸೆರ್ಬರಸ್ ವೈರಸ್ ಸ್ಮಾರ್ಟ್ಫೋನನ್ನು ಸೇರಿ, ಕ್ರೆಡಿಟ್ ಕಾರ್ಡ್, ಬ್ಯಾಂಕ್ ಖಾತೆಗೆ ಸಂಬಂಧಿಸಿದ ವಿವರಗಳನ್ನು, ಹ್ಯಾಕರ್ಸ್ಗಳಿಗೆ ರವಾನಿಸುತ್ತದೆ. ಅಲ್ಲದೆ, ಫೋನ್ನಲ್ಲಿನ ಎಲ್ಲ ಪಾಸ್ವರ್ಡ್, ನಂಬರ್ಗಳನ್ನೂ ಕದ್ದು, ಸೈಬರ್ ಫಿಶಿಂಗ್ಗೆ ಎಡೆಮಾಡಿಕೊಡುತ್ತದೆ ಎಂದು ಸಿಬಿಐ ಮೂಲಗಳು ಎಚ್ಚರಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.