ಕುಡಿಯುವ ನೀರಿಗೆ ಖರ್ಚು ಇಲ್ಲದೆ ಮುಗಿದ ಬೇಸಗೆ
Team Udayavani, May 20, 2020, 1:33 PM IST
ಪ್ರಸ್ತುತ ಬಜೆಯಲ್ಲಿ ಸಂಗ್ರಹವಾದ ನೀರು.
ಉಡುಪಿ: ಪ್ರತಿವರ್ಷ ಲಕ್ಷಾಂತರ ರೂಪಾಯಿ ವ್ಯಯಿಸಿ ನಗರದ 35 ವಾರ್ಡ್‌ಗಳಿಗೆ ಕುಡಿಯುವ ನೀರು ಒದಗಿಸುತ್ತಿದ್ದ ನಗರಸಭೆ ಈ ಬಾರಿ ಮಾತ್ರ ಹಿಂದಿನ ಬಾರಿಯ ಖರ್ಚಿನ ಶೇ. 10ರಷ್ಟು ವೆಚ್ಚದಲ್ಲಿ ವಾರದ 7 ದಿನವೂ ನಗರಕ್ಕೆ ನೀರು ಪೂರೈಕೆ ಮಾಡಿದೆ.
ಹಿರಿಯಡ್ಕ ಗ್ರಾ.ಪಂ. ವ್ಯಾಪ್ತಿಯ ಶಿರೂರು ಮಠದ ಗುಂಡಿ ಸೇರಿದಂತೆ ವಿವಿಧ ಕಡೆಯ ಪಂಪ್ ಮಾಡಲು ನಗರಸಭೆಯಿಂದ 45 ದಿನಕ್ಕೆ 33 ಲ.ರೂ. ಟೆಂಡರ್ ಆಗಿತ್ತು. ಕೇವಲ ಮೂರು ಪಂಪ್‌ಗ್ಳ ಮೂಲಕ 15 ದಿನಗಳು ಗುಂಡಿಗಳ ನೀರು ಪಂಪ್ ಮಾಡಲಾಯಿತು. ಕಳೆದ ಕೆಲವು ದಿನಗಳಲ್ಲಿ ಮಳೆಯಾಗುತ್ತಿರುವುದರಿಂದ ಬಜೆಯಲ್ಲಿ ನೀರಿನ ಒಳ ಹರಿವು ಪ್ರಾರಂಭವಾದ ಹಿನ್ನೆಲೆಯಲ್ಲಿ ಮೇ 12ರಿಂದ ಪಂಪಿಂಗ್ ನಿಲ್ಲಿಸಲಾಗಿದೆ. ಈಗ ನಗರಸಭೆ ಟೆಂಡರ್ ಅರ್ಧದಲ್ಲಿ ಸ್ಥಗಿತಗೊಳಿಸಿದ್ದು, ಟೆಂಡರ್‌ದಾರರಿಗೆ 33 ಲ.ರೂ. ಬದಲಾಗಿ 15 ದಿನಗಳ ಕೆಲಸಕ್ಕೆ 10 ಲ.ರೂ. ಪಾವತಿಸಿದೆ.
ಲಕ್ಷಾಂತರ ರೂಪಾಯಿ ಉಳಿಕೆ!
ಕಳೆದ ಬಾರಿ ಬೇಸಗೆಯಲ್ಲಿ ಬಜೆಟ್‌ನಲ್ಲಿ ಪಂಪಿಂಗ್‌ಗಾಗಿ 45 ಲ.ರೂ. ಹಾಗೂ ನಗರದ ಜನರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಸುಮಾರು 50 ಲ.ರೂ. ವ್ಯಯಿಸಲಾಗಿತ್ತು.
ನೀರಿನ ಒಳ ಹರಿವು!
ಪರಿಣಾಮವಾಗಿ 6 ದಿನಗಳಿಂದ ಜಿಲ್ಲೆಯ ಕೆಲವೆಡೆ ಉತ್ತಮ ಮಳೆಯಾಗುತ್ತಿದ್ದು, ನಗರಕ್ಕೆ ನೀರು ಒದಗಿಸುವ ಬಜೆ ಡ್ಯಾಂ ನಲ್ಲಿ ನೀರಿನ ಒಳ ಹರಿವು ಪ್ರಾರಂಭವಾಗಿದೆ. ಬಜೆಯಲ್ಲಿ ಮೇ 13ರಂದು 2.8 ಮೀ. ನೀರಿದ್ದು, ಇದೀಗ ಒಳಹರಿವಿನಿಂದ ಮೇ 18ರಂದು ನೀರಿನ ಪ್ರಮಾಣ 5.71 ಮೀ. ಏರಿಕೆಯಾಗಿದೆ.
ಇನ್ನೂ 40 ದಿನಕ್ಕೆ ನೀರು!
ಬಜೆಯಲ್ಲಿ ಒಳ ಹರಿವು ಪ್ರಾರಂಭವಾಗಿದೆ. ಇದರಿಂದಾಗಿ ಪಂಪಿಂಗ್ ಕಾರ್ಯ ಸ್ಥಗಿತಗೊಳಿಸಲಾಗಿದೆ. ಬಜೆಯಲ್ಲಿ 4.12 ಮೀ. ನೀರು ಸಂಗ್ರಹವಾಗಿದ್ದು, ಮಳೆ ಬಾರದೆ ಇದ್ದರೂ ಮುಂದಿನ 40 ದಿನಗಳ ವರೆಗೆ ಯಾವುದೇ ಸಮಸ್ಯೆ ಇಲ್ಲದೆ ನಗರದ ಜನತೆಗೆ ಕುಡಿಯುವ ನೀರು ಒದಗಿಸಬಹುದು.
-ಮೋಹನ್ ರಾಜ್, ಸಹಾಯಕ ಎಂಜಿನಿಯರ್, ನಗರಸಭೆ ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.