25 ಕೆಜಿ ತೂಕದ ಗೆಣಸು ಬೆಳೆದ ವ್ಯಂಗ್ಯಚಿತ್ರಕಾರ!
Team Udayavani, May 20, 2020, 1:46 PM IST
ಶಿವಮೊಗ್ಗ: ತಾಲೂಕಿನ ಗಾಜನೂರಿನಲ್ಲಿ ಕೃಷಿಕ ಕಮ್ ವ್ಯಂಗ್ಯಚಿತ್ರಕಾರರೊಬ್ಬರು ತಮ್ಮ ಮನೆಯ ಹಿತ್ತಲಲ್ಲಿ ಬರೋಬ್ಬರಿ 25 ಕಿಲೊ ಗ್ರಾಮ್ ತೂಕದ ಬೃಹತ್ ಗಾತ್ರದ ಗೆಣಸೊಂದನ್ನು ಬೆಳೆದು ಅಚ್ಚರಿ ಮೂಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಹಲ್ಸಖಂಡ ರಾಮಚಂದ್ರ ಭಟ್ ಅವರ ಮಗ ನಾಗೇಂದ್ರ ಯಲ್ಲಾಪುರ ಅವರೇ ಈ ಗೆಣಸು ಬಳೆದು ಅಚ್ಚರಿ ಮೂಡಿಸಿ ಮಹನೀಯರು. ಅವರ ತಂದೆಯವರ ಕಾಲದಲ್ಲಿ ಬೆಳೆಯುತ್ತ ಬಂದಿದ್ದ ಗೆಣಸನ್ನು ಪ್ರತಿವರ್ಷ ಬೆಳೆಸುವ ಕಾಯಕವನ್ನು ಮುಂದುವರೆಸಿದ್ದಾರೆ.
ಇದರ ಮೂಲ ಕೇರಳ, ಮಿತ್ರರೊಬ್ಬರು ತಂದೆ ಯವರಿಗೆ ಕೊಟ್ಟಿದ್ದರು. ನೇಗಿಲು ಗೆಣಸೆಂದು ಕರೆಯುವುದು ವಾಡಿಕೆ. ಕಾರಣ ರೈತರ ನೇಗಿಲಿನಾಕಾರದಲ್ಲಿ ಬೆಳೆಯುವುದರಿಂದ ನೇಗಿಲು ಗೆಣಸೆಂದು ಅನ್ವಥಕ ನಾಮವಾಯಿತು ಎಂದು ಅವರು ವಿವರಿಸುತ್ತಾರೆ. ಬರೋಬ್ಬರಿ ಒಂದೇ ಬುಡದಲ್ಲಿ ಏನಿಲ್ಲವೆಂದರೂ 15 ರಿಂದ 35 ಕೆ.ಜಿ ಗ್ಯಾರಂಟಿ. 6 ತಿಂಗಳ ಬೆಳೆ. 6 ಇಂಚಿನಷ್ಟು ಗಾತ್ರದ ತುಂಡು ನೆಟ್ಟರಾಯ್ತು, ಬೇಲಿಯ ಬದಿಯಲ್ಲಿ, ಮರದ ಬುಡದಲ್ಲಿ, ಎಲ್ಲಾದರೂ ಗುಂಡಿ ಇರುವಲ್ಲಿ ನೆಟ್ಟರಾಯ್ತು. ತನ್ನಿಂದ ತಾನೇ ಬೆಳೆದು ಮರದ ಸುತ್ತಲೂ ಆವರಿಸಿ ತಳ್ಳುತ್ತದೆ. ಬುಡದಲ್ಲಿ ಗಡ್ಡೆಗಳು ಬಳ್ಳಿಯಲ್ಲಿಯೂ ಸಣ್ಣ ಸಣ್ಣ ಮರಿಗೆಣಸುಗಳು, ಅಬ್ಟಾ ನೋಡಲು ಸುಂದರ ತಿನ್ನಲು ರುಚಿ ಎನ್ನುತ್ತಾರೆ ಅವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.