ಪ್ರಯಾಣಿಕರ ಸಂಖ್ಯೆ ವಿರಳ: ಬಳ್ಳಾರಿಗೆ ಯಾರೂ ಹೋಗಿಲ್ಲ
Team Udayavani, May 20, 2020, 3:48 PM IST
ಸಾಂದರ್ಭಿಕ ಚಿತ್ರ
ಸಿಂಧನೂರು: ರಾಜ್ಯ ಸರಕಾರ ಲಾಕ್‌ಡೌನ್ ಸಡಿಲಿಕೆ ಮಾಡಿ ಅಂತರ ಜಿಲ್ಲೆಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದರಿಂದ ನಗರದ ಘಟಕದಿಂದ 20 ಬಸ್ ಸಂಚಾರ ಮಂಗಳವಾರ ಆರಂಭವಾಯಿತು. ನಿರ್ವಾಹಕರು ಹಾಗೂ ಚಾಲಕರು ಪ್ರಯಾಣಿಕರಿಗಾಗಿ ಕಾಯುತ್ತಿರುವುದು ಕಂಡು ಬಂತು.
ಸಿಂಧನೂರಿನಿಂದ ರಾಯಚೂರು, ಕೊಪ್ಪಳ, ಬಳ್ಳಾರಿ, ಕುಷ್ಟಗಿ, ಲಿಂಗಸುಗೂರು, ಗಂಗಾವತಿಗೆ ಬೆಳಗ್ಗೆ 7:00ರಿಂದ ಸಂಜೆ 7:00ರ ವರೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಮಾಡಲಾಗಿದೆ. ಆದರೆ ಬೆಳಗ್ಗೆ 11:00 ಗಂಟೆಯವರೆಗೂ ಬಳ್ಳಾರಿಗೆ ತೆರಳುವ ಯಾವೊಬ್ಬ ಪ್ರಯಾಣಿಕರು ಬರಲಿಲ್ಲ. ಹಾಗಾಗಿ ಬಳ್ಳಾರಿಗೆ ತೆರಳುವ ಬಸ್‌ನ್ನು ಪುನಃ ಘಟಕಕ್ಕೆ ಕಳುಹಿಸಲಾಯಿತು. ಇನ್ನಿತ್ತರ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಿಗೆ ತೆರಳಿದ ಬಸ್‌ಗಳಲ್ಲಿಯೂ ನಿಗದಿತ ಪ್ರಯಾಣಿಕರು ಇರಲಿಲ್ಲ. ಹಾಗಾಗಿ ಒಂದೊಂದೆ ಬಸ್‌ನ್ನು 2ರಿಂದ 3ಗಂಟೆ ತಡವಾಗಿ ಸಂಚಾರಕ್ಕೆ ಬಿಡಲಾಯಿತು.
ಪ್ರಯಾಣಿಕರ ಸಂಖ್ಯೆ ವಿರಳವಾಗಿದ್ದರಿಂದ ಬಸ್ ನಿಲ್ದಾಣದಲ್ಲಿ ಕುರ್ಚಿಗಳು ಖಾಲಿ ಇರುವುದು ಕಂಡು ಬಂತು. ಅಂತರ ಜಿಲ್ಲೆಗಳಿಗೆ ತೆರಳುವ ನಿರ್ವಾಹಕ ಹಾಗೂ ಚಾಲಕರಿಗೆ ಮಾಸ್ಕ್, ಸ್ಯಾನಿಟೈರಿಸ್ ಹಾಗೂ ಕೈಗವಸ ಮತ್ತು ಎಲ್ಲ ಬಸ್‌ಗಳಿಗೂ ಸ್ಪ್ರೇ ಮಾಡಿಸಿ ಘಟಕದಿಂದ ಹೊರಗಡೆಗೆ ಕಳುಹಿಸಲಾಯಿತು. ಅಂತರ ಜಿಲ್ಲೆಗಳಿಗೆ ತೆರಳಿದ ಎಲ್ಲ ಪ್ರಯಾಣಿಕರನ್ನು ಆರೋಗ್ಯ ಇಲಾಖೆಯಿಂದ ತಪಾಸಣೆ ಮಾಡಿದ ನಂತರ ಬಸ್‌ನಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.