ಸ್ವಚ್ಛತಾ ಕಾರ್ಯಕರ್ತರಿಗೆ ನಟ ಅಮಿತಾಬ್ ಕೃತಜ್ಞತೆ
Team Udayavani, May 20, 2020, 10:05 PM IST
ಮುಂಬಯಿ: ಕೋವಿಡ್ ವೈರಸ್‌ನಿಂದ ಲಾಕ್‌ಡೌನ್ ಆಗಿದ್ದರೂ ಸ್ವಚ್ಛತಾ ಕಾರ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿರುವ ಸಿಬ್ಬಂದಿ ಕೆಲಸಕ್ಕೆ ಬಾಲಿವುಡ್‌ನ ಮೇರು ನಟ ಅಮಿತಾಬ್ ಬಚ್ಚನ್ ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರತಿ ಭಾನುವಾರವೂ ಅಭಿಮಾನಿಗಳು ಜಲ್ಸಾದ ನಿವಾಸಕ್ಕೆ ಭೇಟಿ ಕೊಟ್ಟು ಅಮಿತಾಬ್ ಬಚ್ಚನ್ ಅವರಿಗೆ ಶುಭಾಶಯ ಕೋರುತ್ತಿದ್ದರು. ಕಳೆದ ಹಲವು ವರ್ಷಗಳಿಂದ ಇದು ನಡೆದುಕೊಂಡೇ ಬಂದಿತ್ತು.
ಆದರೆ ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅಭಿಮಾನಿಗಳ ಭೇಟಿಯನ್ನು ನಿಲ್ಲಿಸಲಾಗಿದೆ, ಹೀಗಿದ್ದರೂ ಸ್ವಚ್ಛತಾ ಕಾರ್ಯಕರ್ತರು ಮಾತ್ರ ಅವರ ಬಂಗಲೆ ಮುಂದೆ ತಮ್ಮ ನಿತ್ಯ ಕೆಲಸ ಮಾಡುತ್ತಿದ್ದಾರೆ.
ಈ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಅಮಿತಾಬ್ ಬಚ್ಚನ್, ‘ಯಾರೋ ಹೇಳುತ್ತಿದ್ದರು ಜಲ್ಸಾ ಗೇಟಿನ ಮುಂದೆ ರವಿವಾರದ ಅಭಿಮಾನಿಗಳ ಭೇಟಿ ಬಂದ್ ಆಗಿದೆ ಅಂತ…ಆದರೆ ಇಲ್ಲಿ ನೋಡಿ…’ ಎಂದು ಟ್ವಿಟ್ಟರ್‌ನಲ್ಲಿ ಫೋಟೊ ಸಹಿತ ಪ್ರಕಟಿಸಿದ್ದಾರೆ.
ಈ ಕೋವಿಡ್ ಸಂಬಂಧಿ ಲಾಕ್ ಡೌನ್ ಸಂದರ್ಭದಲ್ಲಿ ನಟ ಅಮಿತಾಬ್ ಬಚ್ಚನ್ ಅವರು ಒಂದು ಲಕ್ಷಕ್ಕೂ ಅಧಿಕ ದಿನಗೂಲಿ ನೌಕರರಿಗೆ ಆಹಾರ ಧಾನ್ಯಗಳನ್ನು ಪೂರೈಸಿದ್ದಾರೆ ಮತ್ತು ಆ ಮೂಲಕ ಕೋವಿಡ್ ಹೋರಾಟದಲ್ಲಿ ತಮ್ಮ ಭಾಗಿದಾರಿಕೆಯನ್ನು ನೀಡಿದ್ದಾರೆ.
T 3534 – kaun kehta hai Sunday ki well wisher meetings band ho gayi Jalsa gate pe .. ye dekhiye .. !! pic.twitter.com/9jjreZziCO
— Amitabh Bachchan (@SrBachchan) May 17, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
AI: ಶಾರುಖ್ ಪತ್ನಿ ಗೌರಿ ಮತಾಂತರ?: ಡೀಪ್ ಫೇಕ್ ಫೋಟೋ ವೈರಲ್
Life threat: ಸಲ್ಮಾನ್ ಮನೆ ಬಾಲ್ಕನಿಗೆ ಬುಲೆಟ್‌ಪ್ರೂಫ್ ಗಾಜು
ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್.. ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.