ಉದ್ಯೋಗ ಅರಸಿ ಬಂದವರು ತವರಿಗೆ!
Team Udayavani, May 21, 2020, 5:55 AM IST
ಉಡುಪಿ: ಲಾಕ್ಡೌನ್ನಿಂದ ಜಿಲ್ಲೆಯಲ್ಲಿ ಸಿಲುಕಿದ ಝಾರ್ಖಂಡ್ ಮೂಲದ ಸುಮಾರು 1,600 ಕಾರ್ಮಿಕರು ಬುಧವಾರ ಇಂದ್ರಾಳಿ ರೈಲ್ವೇ ನಿಲ್ದಾಣದ ಮೂಲಕ ತವರಿಗೆ ತೆರಳಿದ್ದಾರೆ. ಈ ಸಂದರ್ಭ ಕೆಲ ಕಾರ್ಮಿಕರು ಲಾಕ್ಡೌನ್ ಕರಾಳತೆ ಬಗ್ಗೆ ಉದಯವಾಣಿಯೊಂದಿಗೆ ಹಂಚಿಕೊಂಡಿದ್ದು ಹೀಗೆ…
ನಿರಾಸೆಯೊಂದಿಗೆ ಪ್ರಯಣ
ಮೇ 30ರಂದು ತಂಗಿ ಮದುವೆ ನಿಗದಿಯಾಗಿತ್ತು. ಹಣ ಹೊಂದಿಸುವ ಉದ್ದೇಶದಿಂದ ನಾನು ಉಡುಪಿಗೆ ಬಂದೆ. ಎರಡೂವರೆ ತಿಂಗಳು ಕೆಲಸ ಮಾಡಿದೆ. ಎಲ್ಲಿತ್ತೋ ಈ ಕೋವಿಡ್-19 ಉಡುಪಿಗೂ ಒಕ್ಕರಿಸಿತು. ಈಗ ಇರುವ ಹಣ ಖಾಲಿಯಾಗಿದೆ. ತಂಗಿ ಮದುವೆ ಹೇಗೆ ಮಾಡಲಿ? ಮನೆಯಲ್ಲಿ ಹೇಗಾದರೂ ಮಾಡಿ ಮನೆಗೆ ಬಂದರೆ ಸಾಕು ಎನ್ನುತ್ತಿದ್ದಾರೆ. ಅಂದು ಸಾವಿರಾರು ಆಸೆ ಹೊತ್ತು ಬಂದೆ, ಇಂದು ನಿರಾಸೆಯಲ್ಲಿ ಹೊರಟೆ ಎಂದು ಕಾರ್ಮಿಕ ಬಿಸ್ರಾ ಪ್ರಸಾದ್ ತಿಳಿಸಿದರು.
ಬದುಕು ಬೇಡವಾಗಿದೆ!
ಮಕ್ಕಳಿಗೆ ಶಿಕ್ಷಣ ಕೊಡಬೇಕು ಎನ್ನುವ ಆಶಯದೊಂದಿಗೆ ಉಡುಪಿಗೆ ಬಂದೆ. ನಮ್ಮ ಊರಿನಲ್ಲಿ ಕೂಲಿ ಕಡಿಮೆ ನೀಡುತ್ತಾರೆ. ಕಳೆದ 5 ವರ್ಷಗಳಿಂದ ಇದೇ ಊರಿನಲ್ಲಿ ನೆಲೆಸಿದ್ದೇನೆ. ಜೂನ್-ಜುಲೈ ತಿಂಗಳಿನಲ್ಲಿ ಫೀಸ್ ಕಟ್ಟಬೇಕು. ಇರುವ ಹಣ ಖಾಲಿಯಾಗಿದೆ. ಲಾಕ್ಡೌನ್ ತೆರೆದ ಅನಂತರ ಮತ್ತೆ ಉಡುಪಿ ಬರುವೆ ಎಂದು ಕಾರ್ಮಿಕ ಅನೂಪ್ ತಿಳಿಸಿದರು.
ಹೋಗಿ ಮತ್ತೆ ಬರುವೆ!
ಕೋವಿಡ್-19 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆತ್ತವರು ಮನೆಗೆ ಬರುವಂತೆ ಹಠ ಮಾಡುತ್ತಿದ್ದಾರೆ. ಎರಡು ತಿಂಗಳಿನಿಂದ ಊರಿಗೆ ಹೋಗಲು ಪ್ರಯತ್ನಿಸಿದೆ. ಇದೀಗ 950 ರೂ. ನೀಡಿ ಮನೆಗೆ ಹೊರಟೆ. ಕೋವಿಡ್-19 ಕಡಿಮೆಯಾದರೆ ಮತ್ತೆ ಉಡುಪಿಗೆ ಬರುವೆ ಎಂದು ರಬೀಂದ್ರ ತಿಳಿಸಿದರು.
ಸತ್ತರೆ ಮನೆಯಲ್ಲಿ ಸಾಯುವೆ!
ಮೂರು ವರ್ಷಗಳಿಂದ ಉಡುಪಿ, ಮಣಿಪಾಲದಲ್ಲಿ ಕೆಲಸ ಮಾಡಿಕೊಂಡು ಇದ್ದೇನೆ. ಸದ್ಯ ಶೇಖರಿಸಿದ ಎಲ್ಲ ಹಣ ಖರ್ಚಾಗಿದೆ. ಇನ್ನೂ ಲಾಕ್ಡೌನ್ ಮುಂದುವರಿದರೆ ಬದುಕುವುದು ಕಷ್ಟ . ಮನೆಯಲ್ಲಿ ಇದ್ದರೆ ಒಂದು ಹೊತ್ತಿನ ಗಂಜಿ ಕುಡಿದು ಬದುಕುವೆ, ಇಲ್ಲವೇ ಅಲ್ಲಿಯೇ ಸಾಯುವೆ ಎಂದು ಕಾರ್ಮಿಕ ವಿಶ್ವಾಸ್ ಬೇಸರ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.