ಕೇವಿಯಟ್‌ ಸಲ್ಲಿಸಿ, ಅಕ್ರಮ ಒಪ್ಪಿಕೊಂಡಿದೆ


Team Udayavani, May 21, 2020, 5:23 AM IST

Mys Sr Mahesh

ಮೈಸೂರು: ನೇಮಕಾತಿಗಳಲ್ಲಿ ನಡೆದಿರುವ ಅಕ್ರಮ ಹೊರ ಬರುವ ಮುನ್ನವೇ, ಮೈಮುಲ್‌ ಹೈಕೋರ್ಟ್‌ನಲ್ಲಿ ಕೇವಿಯಟ್‌ ಸಲ್ಲಿಸಿದೆ. ಅಕ್ರಮ ನಡೆದಿಲ್ಲ ಎನ್ನುವುದಾದರೆ, ಮೈಮುಲ್‌ ಕೇವಿಯೇಟ್‌ ಏಕೆ ಸಲ್ಲಿಸಬೇಕು ಎಂದು ಶಾಸಕ ಸಾ.ರಾ.ಮಹೇಶ್‌ ಪ್ರಶ್ನಿಸಿದರು. ಮೈಮುಲ್‌ ಅಕ್ರಮ ನೇಮಕಾತಿ ವಿಚಾರದಲ್ಲಿ ಸರ್ಕಾರದಿಂದ ನ್ಯಾಯ ಸಿಗುವು ದಿಲ್ಲ. ಹಾಗಾಗಿ, ನ್ಯಾಯಾಲಯದ ಮೂಲಕವೇ ಕಾನೂನು ಹೋರಾಟ ಮಾಡುತ್ತೇನೆ. ಅನ್ಯಾಯಕ್ಕೊಳಗಾಗಿರುವ ಅರ್ಹ  ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿಭಟನೆಯ ಎಚ್ಚರಿಕೆ: ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಒಂದು ಕಡೆ ತನಿಖೆ ಆಗುತ್ತಿದೆ ಎನ್ನುತ್ತಾರೆ. ಇನ್ನೊಂದು ಕಡೆ ನೇಮಕಾತಿ ನಡೆಯುತ್ತಿದೆ ಅನ್ನುತ್ತಾರೆ. ತನಿಖೆಗೆ ಕಳುಹಿಸಿದ್ದಾರೆ. ನೇಮಕಾತಿ ಸಮಿತಿನಲ್ಲಿ ಜಾಯಿಂಟ್‌  ರಿಜಿಸ್ಟ್ರಾರ್‌ ಇದ್ದಾರೆ. ಅಲ್ಲಿ ತನಿಖೆ ಮಾಡುವುದಕ್ಕೆ ಜಿಲ್ಲಾ ರಿಜಿಸ್ಟಾರ್‌ ಅನ್ನೂ ಕಳುಹಿ ಸುತ್ತಾರೆ. ಡೀಸಿ ತೀರ್ಮಾನವನ್ನು ತಹಶೀಲ್ದಾರ್‌ ಹೋಗಿ ತನಿಖೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ದಯಮಾಡಿ ಸಚಿವರು ಒತ್ತಡಕ್ಕೆ ಮಣಿಯಬಾರದು. ಒಂದು ವೇಳೆ ಮೈಮುಲ್‌ ಅವರು ಇದೇ ರೀತಿ ಆರೋಪ ಮುಂದುವರಿಸಿಕೊಂಡು ಬಂದರೆ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಮೈಮುಲ್‌ನಲ್ಲಿ 165 ಹುದ್ದೆಗಳ ನೇಮಕಾತಿಗೆ ಕರೆ ಮಾಡಲಾಗಿತ್ತು. ಆದರೆ, ಹೆಚ್ಚುವರಿಯಾಗಿ 25 ಹುದ್ದೆಗಳನ್ನು ಕರೆ ಮಾಡದೇ ಭರ್ತಿ ಮಾಡಿಕೊಳ್ಳಲು ಮುಂದಾಗಿ ದ್ದಾರೆ. ಅಲ್ಲದೇ, “ಸಾ.ರಾ.ಮಹೇಶ್‌ ಹುದ್ದೆ ಕೊಡಿಸುವಂತೆ ಕೇಳಿದ್ದರು,  ಹುದ್ದೆಗಳು ಮುಗಿದು ಹೋಗಿವೆ ಎಂದು ಹೇಳಿದ್ದೆವೆ ಎನ್ನುತ್ತಿದ್ದಾರೆ. ಇದರಿಂದ ಹುದ್ದೆಗಳನ್ನು ಮಾಡಿಕೊಂಡಿದ್ದೇವೆ ಎಂದು ಅವರೇ ಒಪ್ಪಿಕೊಂಡಂತಾಯಿತಲ್ಲ ಎಂದರು.

ಒಎಂಆರ್‌ ಶೀಟ್‌ ವಿತರಿಸಿಲ್ಲ: ಯಾವುದೇ ಪರೀಕ್ಷೆಗಳು ಮಾಡುವಾಗ ಒಎಂಆರ್‌ ಶೀಟ್‌ ಕೊಡ್ತಾರೆ. ಪರೀಕ್ಷೆ ಮುಗಿದ 15-20ದಿನದಲ್ಲಿ ಕೀ ಆನ್ಸರ್‌ ಬಿಡುಗಡೆ ಮಾಡುತ್ತಾರೆ. ಯಾವುದು ಸರಿ ಯಾವುದು ತಪ್ಪು ನಮ್ಮ ಅಂಕ ಎಷ್ಟು  ಅನ್ನುವಂಥದ್ದು ನಾವು ಒಎಂಆರ್‌ ಶೀಟ್‌ ಮೂಲಕ ಫ‌ಲಿತಾಂಶಕ್ಕೂ ಮುನ್ನವೇ ಪರಿಶೀಲಿಸಿಕೊಳ್ಳಬಹುದು. ಆದರೆ, ಇಲ್ಲಿ ಒಎಂಆರ್‌ ಶೀಟ್‌ ವಿತರಿಸಿಲ್ಲ. ಮೈಮುಲ್‌ ವೆಬ್‌ಸೈಟ್‌ನಲ್ಲಿ ಫ‌ಲಿತಾಂಶ ಸಂಬಂಧ ಯಾವುದೇ ಮಾಹಿತಿ  ಸಿಗುತ್ತಿಲ್ಲ. ಜನ್ಮ ದಿನಾಂಕ ನಮೂದಿಸಿದರೆ ಮಾತ್ರ ಫ‌ಲಿತಾಂಶ ನೋಡುವಂತೆ ಮಾಡಿದ್ದಾರೆ ಎಂದು ಕಳವಳ  ವ್ಯಕ್ತಪಡಿಸಿದರು.

ಬೆದರಿಕೆ ಕರೆಗಳು ಬರುತ್ತಿವೆ: ಮೈಮುಲ್‌ ಉದ್ಯೋಗಾಕಾಂಕ್ಷಿ ಚೈತ್ರ ಮಾತನಾಡಿ, ಮೈಮುಲ್‌ ಅಕ್ರಮ ನೇಮಕಾತಿ ನಿಲ್ಲಬೇಕು. ಇಲ್ಲವಾದರೆ “ನನ್ನ ಬಳಿ ಹಣ ಕೇಳಿದವರ ಹೆಸರು ಮತ್ತು ಅವರು ನಡೆಸಿದ ಸಂಭಾಷ ಣೆಯ ಆಡಿಯೋ  ಬಹಿರಂಗ ಪಡಿಸುತ್ತೇನೆ. ಇದರಿಂದ ಅಕ್ರಮದಲ್ಲಿ ಭಾಗಿಯಾದ ಎಲ್ಲರ ಹೆಸರು ಹೊರಬರಲಿದೆ. ಆಡಿಯೋ ಬಿಡುಗಡೆಗೊಳಿಸಿದ ಮೇಲೆ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ಸುದ್ದಿಗೋಷ್ಠಿ ಯಲ್ಲಿ ಶಾಸಕ ಅಶ್ವಿ‌ನ್‌ಕುಮಾರ್‌, ಜಾ.ದಳ  ಮುಖಂಡರಾದ ಕೆ.ವಿ.ಮಲ್ಲೇಶ್‌, ಚೆಲುವೇಗೌಡ, ಪ್ರಕಾಶ್‌, ರಾಮು, ಅಭಿಷೇಕ್‌, ಸಿ.ಜೆ.ದ್ವಾರಕೀಶ್‌, ಮಾಜಿ
ಮೇಯರ್‌ ಆರ್‌.ಲಿಂಗಪ್ಪ ಇದ್ದರು.

ಮುಂದಿನ ದಿನಗಳಲ್ಲಿ ಮೈಮುಲ್‌ನಲ್ಲಿ ನಡೆಯುವ ನೇಮಕಾತಿಗೆ ಪ್ರಶ್ನೋತ್ತರಗಳ ಬದಲಾಗಿ ಒಎಂಆರ್‌ ಶೀಟ್‌ ಮೂಲಕ ಪರೀಕ್ಷೆ ನಡೆಸಬೇಕು. ಹಣ ಇರುವವರಿಗೇ ಕೆಲಸ ಸಿಗುತ್ತದೆ ಎನ್ನುವ ಮನೋಭಾವ ಹೋಗಬೇಕು. ಈ ಹಿಂದೆಯೂ ಡಿಸಿಸಿ ಹಾಗೂ ಮೈಸೂರು-ಚಾಮರಾಜನಗರದ ಸಹಕಾರಿ ಬ್ಯಾಂಕ್‌ನಲ್ಲಿ ಅಕ್ರಮ ನೇಮಕಾತಿ ನಡೆದಿದ್ದು, ತನಿಖೆಯಿಂದ ದೃಢಪಟ್ಟಿತು. ಆದರೆ, ಮೈಮುಲ್‌ನಲ್ಲಿ ನೇಮಕಾತಿಗೂ ಮುನ್ನವೇ ಗೊತ್ತಾಗಿದೆ.
-ಸಾ.ರಾ.ಮಹೇಶ್‌, ಶಾಸಕ

ಟಾಪ್ ನ್ಯೂಸ್

Naxal-Postmartam

Naxal Vikram Gowda: ಮೂರು ಬಾರಿ ತಪ್ಪಿಸಿಕೊಂಡವ ಹುಟ್ಟೂರಲ್ಲೇ ಪ್ರಾಣ ತೆತ್ತ

Naxal-Vikram-Sister

Naxal Vikram Encounter: ಟಿವಿ ನೋಡಿ ವಿಷಯ ತಿಳಿಯಿತು, ನಮಗೆ ಯಾರೂ ಹೇಳಿಲ್ಲ: ಸಹೋದರಿ

Himachal-Bhavan

Order: ಬಾಕಿ ಹಣ ಕೊಡದ್ದಕ್ಕೆ ದಿಲ್ಲಿಯ ಹಿಮಾಚಲ ಭವನ ಹರಾಜು: ʼಕೈʼ ಸರಕಾರಕ್ಕೆ ಹಿನ್ನಡೆ

Russia-Putin

‘New Phase’ of War: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುತಿನ್‌ ಅಣ್ವಸ್ತ್ರ ದಾಳಿ ಎಚ್ಚರಿಕೆ!

Peetabail-Naxal-encounter-Vikram

Encounter: ನಕ್ಸಲ್‌ ವಿಕ್ರಂ ಗೌಡ ತಂಡದ ಬೇಟೆಗೆ ಎಎನ್‌ಎಫ್ ‘ಆಪರೇಷನ್‌ ಮಾರುವೇಷ’!

Frud

Mangaluru: “ಡ್ರೀಮ್‌ ಡೀಲ್‌’ ಲಕ್ಕಿ ಡ್ರಾ: ವಂಚನೆ ಜಾಲತಾಣದಲ್ಲಿ ವೀಡಿಯೋ ವೈರಲ್‌

Naxal-Subramanya

Subhramanya: 9 ತಿಂಗಳ ಹಿಂದೆ ಪೊಲೀಸರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದನೇ ವಿಕ್ರಂ ಗೌಡ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Tanveer Sait: ಜನಸಂಖ್ಯೆ ಅನುಗುಣವಾಗಿ ಮುಸ್ಲಿಂ ಮೀಸಲು ಹೆಚ್ಚಿಸಲಿ

Tanveer Sait: ಜನಸಂಖ್ಯೆ ಅನುಗುಣವಾಗಿ ಮುಸ್ಲಿಂ ಮೀಸಲು ಹೆಚ್ಚಿಸಲಿ

Hunsur: ಶಬರಿಮಲೈ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

Hunsur: ಶಬರಿಮಲೆ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

3-hunsur

Hunsur: ಚಿನ್ನದ ಸರ ಅಪಹರಿಸಿದ್ದ ಇಬ್ಬರು ಆರೋಪಿಗಳ ಬಂಧನ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Naxal-Postmartam

Naxal Vikram Gowda: ಮೂರು ಬಾರಿ ತಪ್ಪಿಸಿಕೊಂಡವ ಹುಟ್ಟೂರಲ್ಲೇ ಪ್ರಾಣ ತೆತ್ತ

Naxal-Vikram-Sister

Naxal Vikram Encounter: ಟಿವಿ ನೋಡಿ ವಿಷಯ ತಿಳಿಯಿತು, ನಮಗೆ ಯಾರೂ ಹೇಳಿಲ್ಲ: ಸಹೋದರಿ

Himachal-Bhavan

Order: ಬಾಕಿ ಹಣ ಕೊಡದ್ದಕ್ಕೆ ದಿಲ್ಲಿಯ ಹಿಮಾಚಲ ಭವನ ಹರಾಜು: ʼಕೈʼ ಸರಕಾರಕ್ಕೆ ಹಿನ್ನಡೆ

Russia-Putin

‘New Phase’ of War: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುತಿನ್‌ ಅಣ್ವಸ್ತ್ರ ದಾಳಿ ಎಚ್ಚರಿಕೆ!

Peetabail-Naxal-encounter-Vikram

Encounter: ನಕ್ಸಲ್‌ ವಿಕ್ರಂ ಗೌಡ ತಂಡದ ಬೇಟೆಗೆ ಎಎನ್‌ಎಫ್ ‘ಆಪರೇಷನ್‌ ಮಾರುವೇಷ’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.