ಎಪಿಎಂಸಿ: ಸುಗ್ರಿವಾಜ್ಞೆ ಬೇಡ
Team Udayavani, May 21, 2020, 6:12 AM IST
ಬಾಗೇಪಲ್ಲಿ: ರಾಜ್ಯ ಸರ್ಕಾರ ಜನ ವಿರೋಧದ ನಡುವೆಯೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಸುಗ್ರಿವಾಜ್ಞೆ ಜಾರಿಗೆ ತಂದಿರುವುದನ್ನು ಖಂಡಿಸಿ ಸಿಪಿಎಂ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕು ಡಿವೈಎಫ್‌ಐ ಅಧ್ಯಕ್ಷ ಬಿ.ಎಂ. ಹೇಮಚಂದ್ರ ಮಾತನಾಡಿ, ಎಪಿಎಂಸಿ ಕಾಯ್ದೆ ಮಾರುಕಟ್ಟೆ ಹೊರತಾಗಿ ಕೃಷಿ ಉತ್ಪನ್ನಗಳ ಖಾಸಗಿ ವ್ಯಾಪಾರದ ಮೇಲಿನ ನಿರ್ಬಂಧ ಹಾಗೂ ನಿಯಂತ್ರಣವನ್ನು ಕಾರ್ಪೋರೇಟ್ ಕಂಪನಿಗಳ ಪರವಾಗಿ ತೆಗೆದುಕೊಂಡಿದೆ. ಇದು ರಾಜ್ಯದ ವ್ಯವಸಾಯ ಮತ್ತು ರೈತರ ಹಿತಾಸಕ್ತಿ, ರಾಜ್ಯದ ಎಲ್ಲಾ ಎಪಿಎಂಸಿ ಮಾರುಕಟ್ಟೆ ಮುಚ್ಚುವ ಹುನ್ನಾರವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ತಾಲೂಕು ಸಿಪಿಎಂ ಕಾರ್ಯದರ್ಶಿ ಮಹಮದ್ ಅಕ್ರಂ, ಎಪಿಎಂಸಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ವರ್ತಕರು, ನೌಕ ರರು, ಹಮಾಲಿಗಳು, ಇತರೆ ಕಾರ್ಮಿಕರನ್ನು ನಿರುದ್ಯೋಗಕ್ಕೆ ತಳ್ಳುವ ಪಿತೂರಿ ನಡೆಯುತ್ತಿದೆ ಎಂದರು. ತಹಶೀಲ್ದಾರ್ ಎಂ.ನಾಗರಾಜ್ ಪ್ರತಿಭಟನಾಕಾರರಿಂ ದ ಮನವಿ ಸ್ವೀಕರಿಸಿದರು. ತಾಪಂ ಸದಸ್ಯ ಶ್ರೀರಾಮನಾಯ್ಕ,
ತಾಲೂಕು ಸಿಐಟಿಯು ಅಧ್ಯಕ್ಷ ಬಿ.ಆಂಜ ನೇ ಯರೆಡ್ಡಿ, ಕಾರ್ಯದರ್ಶಿ ಜಿ. ಮುಸ್ತಾಫ್, ಸಿಪಿಎಂ ಮಾಜಿ ಕಾರ್ಯ ದರ್ಶಿ ಎಂ.ಎನ್.ರಘುರಾಮರೆಡ್ಡಿ, ನಗರ ಘಟಕದ ಅಧ್ಯಕ್ಷ ಅಶ್ವತ್ಥಪ್ಪ, ತಾಲೂಕು ಪ್ರಾಂತ ರೈತ ಸಂಘದ ಅಧ್ಯಕ್ಷ ಶ್ರೀರಾಮಪ್ಪ, ಜಿಪಂ ಮಾಜಿ ಸದಸ್ಯೆ ಬಿ.ಸಾವಿತ್ರಮ್ಮ, ಮುಖಂಡರಾದ ವಕೀಲ ಜಯಪ್ಪ, ನರಸಿಂಹರೆಡ್ಡಿ, ರಾಮಲಿಂಗಪ್ಪ, ಮಹಮದ್, ಗಂಗಾಧರ್, ಚಲಪತಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.