ಕೆರೆ ಒತ್ತುವರಿ ಪ್ರಶ್ನಿಸಿದ್ದಕ್ಕೆ ಕೆರಳಿದ ಸಚಿವ


Team Udayavani, May 21, 2020, 6:44 AM IST

keresachiva

ಕೋಲಾರ: ಕೆರೆ ಒತ್ತುವರಿ ತೆರುವುಗೊಳಿಸುವಂತೆ ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಳಿನಿ ಮಾಡಿದ ಮನವಿಗೆ ಕೆರಳಿದ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ, ನಾನು ಕೆಟ್ಟವನಿದ್ದೇನೆ, ಹೇ ಬಾಯಿ ಮುಚ್ಚು…  ರಾಸ್ಕಲ್‌ ಇತ್ಯಾದಿ ಪದಗಳಿಂದ ಬೆದರಿಕೆ ಹಾಕಿದ್ದಲ್ಲದೆ, ಪೊಲೀಸರಿಗೆ ಆಕೆಯನ್ನು ಎಳೆದೊಯ್ಯುವಂತೆ ಸೂಚಿಸಿದ ಘಟನೆ ತಾಲೂಕಿನ ಎಸ್‌. ಅಗ್ರಹಾರ ಕೆರೆಯ ವೀಕ್ಷಣೆ ಸಂದರ್ಭದಲ್ಲಿ ಬುಧವಾರ ಸಂಜೆ ಜರುಗಿತು.

ಕೆ.ಸಿ.ವ್ಯಾಲಿಯೋಜನೆಯಕಾಮಗಾರಿಗಳನ್ನು ವೀಕ್ಷಣೆಗೆಂದು ಬುಧವಾರ ಮಧ್ಯಾಹ್ನ ಜಿಲ್ಲೆಗೆ ಆಗಮಿಸಿದ್ದ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ, ರೈತ ಸಂಘದ ನಳಿನಿ ವಿರುದ್ಧ ಅಧಿಕಾರಿ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ  ಸಮ್ಮುಖದಲ್ಲಿ ಹರಿಹಾಯ್ದ ಪೊಲೀಸ್‌ ಬಲ ಪ್ರಯೋಗಿಸಿ ಬಾಯಿ ಮುಚ್ಚಿಸುವಂತೆ ಮಾಡಿದರು.

ಕೆ.ಸಿ. ವ್ಯಾಲಿ ನೀರು ಹರಿಯುವ ಕಾಲುವೆ ಯಲ್ಲಿ ಕೋಟ್ಯಂತರ ರೂ. ಸರ್ಕಾರಿ ವೆಚ್ಚದಲ್ಲಿಯೇ ಚೆಕ್‌ಡ್ಯಾಂಗಳನ್ನು ನಿರ್ಮಾಣ ಮಾಡಿ  ಕೆಲವರ ಅನುಕೂಲಕ್ಕಾಗಿ ಅವುಗಳನ್ನು ಒಡೆದು ಹಾಕುತ್ತಿರುವುದನ್ನು ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ನಳಿನಿ ಸಚಿವ ಮಾಧುಸ್ವಾಮಿ ಗಮನಕ್ಕೆ ತರಲು ಪ್ರಯತ್ನಿಸಿ, 1022 ಎಕರೆ ಇರುವ ಎಸ್‌.ಆಗ್ರಹಾರ ಕೆರೆಯ ಅಂಗಳದಲ್ಲಿ 100  ಎಕರೆಗೆ ಹೆಚ್ಚು ಒತ್ತುವರಿಯಾಗಿದೆ, ಅಧಿಕಾರಿಗಳೇ ಪಹಣಿ ಮಾಡಿಕೊಟ್ಟಿದ್ದಾರೆ.

ಈ ಒತ್ತುವರಿಯನ್ನು ತೆರವುಗೊಳಿಸುವವರು ಯಾರು ಎಂದು ಸಚಿವರನ್ನು ಪ್ರಶ್ನಿಸಿದರು. ರೈತ ಸಂಘದ ಈ ಪ್ರಶ್ನೆಗೆ ಕೆರಲಿ ಕೆಂಡಾಮಂಡಲರಾದ ಸಚಿವ  ಮಾಧುಸ್ವಾಮಿ, ನಾನು ಕೆಟ್ಟವನಿದ್ದೇನೆ, ನನ್ನ ಬಳಿ ಅಹವಾಲು ಮಾತ್ರವೇ ಮಾಡಿಕೊಳ್ಳಬೇಕು ಎಂದು ಸಹನೆ ಕಳೆದುಕೊಂಡರು. ಅಲ್ಲಣ್ಣ ನಾನು ಅಹವಾಲು ಮಾಡಿಕೊಳ್ಳುತ್ತಿರುವುದು ಎಂದು ರೈತ ಸಂಘದ ನಳಿನಿ ಹೇಳುತ್ತಿದ್ದರೂ  ಕೇಳದೆ ಬಾಯಿ ಮುಚ್ಚು, ರ್ಯಾಸ್ಕಲ್‌ ಎಂದು ಗದರಿಸಿ ಈಕೆಯನ್ನು ಎಳೆದೊಯ್ಯಿರಿ ಎಂದು ಪೊಲೀಸರಿಗೆ ತಾಕೀತು ಮಾಡಿದರು.

ಸಚಿವರ ಆದೇಶಕ್ಕಾಗಿಯೇ ಕಾಯುತ್ತಿದ್ದ ಪೊಲೀಸ್‌ ಅಧಿಕಾರಿಗಳು ನಳಿನಿಯನ್ನು ಎಳೆದಾಡಿದರು.  ನಳಿನಿ ಪೊಲೀಸರಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಮಹಿಳಾ ಸಿಬ್ಬಂದಿಯನ್ನು ಕರೆಯಿಸಿ ಆಕೆಯನ್ನು ಪಕ್ಕಕ್ಕೆ ಸರಿಸುವಲ್ಲಿ ಯಶಸ್ವಿಯಾದರು. ಕೇಸು ಹಾಕಿ ಹುಟ್ಟಡಗಿಸುವ ಬೆದರಿಕೆ ಹಾಕಿದರು.

ಇಷ್ಟೆಲ್ಲಾ ಘಟನಾವಳಿಗಳು ಜಿಲ್ಲೆಯ  ಜನಪ್ರತಿನಿಧಿಗಳಾದ ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ, ಸಂಸದ ಎಸ್‌.ಮುನಿಸ್ವಾಮಿ, ಜಿಲ್ಲಾಧಿಕಾರಿ ಸಿ.ಸತ್ಯ ಭಾಮ ನಳಿನಿಯ ಸಹಾಯಕ್ಕೆ ಆಗಮಿಸಲಿಲ್ಲ. ಕೆರೆ ಒತ್ತುವರಿ ತೆರವು ಹಾಗೂ ಚೆಕ್‌ ಡ್ಯಾಂಗಳ ಹೊಡೆಯುವ  ಮೂಲಕ ಸರಕಾರಿ ಹಣವನ್ನು ಪೋಲು ಮಾಡುತ್ತಿರುವ ರೈತ ಸಂಘದ ಮನವಿಯನ್ನು ಸಚಿವರು ಕಡೆಗೂ ಸ್ಪೀಕರಿಸಲೇ ಇಲ್ಲ.

ಟಾಪ್ ನ್ಯೂಸ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

10

Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.