ಸಾವಯವದಲ್ಲೂ ಕಲ್ಲಂಗಡಿ ಬೆಳೆದ ರೈತ
ಗೋಮೂತ್ರ-ಜೀವಾಮೃತ, ತಿಪ್ಪೆ ಗೊಬ್ಬರ ಹಾಕಿದ್ದರಿಂದ ಉತ್ತಮ ಫಸಲು
Team Udayavani, May 21, 2020, 3:55 PM IST
ಸಾಂದರ್ಭಿಕ ಚಿತ್ರ
ಕಲಬುರಗಿ: ಕಲ್ಲಂಗಡಿ ಕೇವಲ ರಾಸಾಯನಿಕವಾಗಿ ಬೆಳೆಯಲು ಸಾಧ್ಯ ಎಂಬುದನ್ನು ಅಲ್ಲಗಳೆದ ರೈತನೊಬ್ಬ, ಗೋಮೂತ್ರ ಹಾಗೂ ಜೀವಾಮೃತ ಬಳಸಿ ಉತ್ತಮ ಫಸಲು ಪಡೆಯಬಹುದು ಎಂಬುದನ್ನು ಸಾಬೀತು ಪಡೆಸಿದ್ದಾನೆ.
ನಾಲ್ಕು ದಿನಕ್ಕೊಮ್ಮೆ 200 ಲೀಟರ್ ನೀರಿಗೆ 20 ಲೀಟರ್ ಗೋಮೂತ್ರ ಮಿಶ್ರಣ ಮಾಡಿ ಕಲ್ಲಂಗಡಿ ಬಳ್ಳಿಗೆ ಹಾಕಲಾಗಿದೆ. ಅದೇ ರೀತಿ ಜೀವಾಮೃತ ಸಹ ಬಳಸಿ ಕಲ್ಲಂಗಡಿ ಬೆಳೆಯಲಾಗಿದೆ. ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದ ಪ್ರಗತಿಪರ ರೈತ ಶರಣಗೌಡ ಎಸ್. ಪಾಟೀಲ್ ಅವರೇ ಸಾವಯವ ಪದ್ಧತಿಯಲ್ಲಿ ಕಲ್ಲಂಗಡಿ ಬೆಳೆದು ಮಾದರಿ ರೈತರಾಗಿ ಹೊರ ಹೊಮ್ಮಿದ್ದಾರೆ. ಒಂದೂವರೆ ಎಕರೆ ಭೂಮಿಯಲ್ಲಿ ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ ಬರೀ ತಿಪ್ಪೆ ಗೊಬ್ಬರ ಬಳಸಲಾಗಿದೆ. ಕಲ್ಲಂಗಡಿ ಹಣ್ಣು ದಪ್ಪವಾಗಲು ಔಷಧಿ ಸಿಂಪಡಿಸಿಲ್ಲ. ಜತೆಗೆ ಹಣ್ಣು ಕೆಂಪಾಗಿಸಲು ಸಹ ಯಾವುದೇ ಔಷಧ ಬಳಸಿಲ್ಲ. ಬರೀ ಗೋಮೂತ್ರ ಹಾಗೂ ಜೀವಾಮೃತದೊಂದಿಗೆ ರುಚಿಯಾದ ಕಲ್ಲಂಗಡಿ ಬೆಳೆಯಲಾಗಿದೆ. ರೈತ ಶರಣಗೌಡ ಸಾವಯವವಾಗಿ ಬೆಳೆಯಲಾದ ಕಲ್ಲಂಗಡಿಯನ್ನು ವ್ಯಾಪಾರಸ್ಥರಿಗೆ (ದಲ್ಲಾಳಿಗಳು) ಒಟ್ಟಿಗೆ ಮಾರಾಟ ಮಾಡದೇ ರೈತರು ಹಾಗೂ ಸ್ನೇಹಿತರು ಮತ್ತು ಇತರರು ತಿನ್ನಲಿ ಎಂದು ಮುಕ್ತವಾಗಿ ಆಹ್ವಾನ ನೀಡುತ್ತಿದ್ದಾರೆ. ಜತೆಗೆ ಸಾವಯವಾಗಿ ಕಲ್ಲಂಗಡಿ ಬೆಳೆಯುವುದರ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಸಮಗ್ರ ಕೃಷಿಯೇ ಸಾವಯವ: ತೊಗರಿ-ಜೋಳ ಸೇರಿದಂತೆ ಇತರೆ ಬೆಳೆಗಳನ್ನು ರಾಸಾಯನಿಕ ಬಳಸದೇ, ಕೀಟನಾಶಕ ಸಿಂಪಡಿಸದೇ ಬೆಳೆಯುತ್ತಿದ್ದಾರೆ. ಕೆಲ ರೈತರು ಸಹ ಇದನ್ನು ಅನುರಿಸುತ್ತಿದ್ದಾರೆ. ಒಟ್ಟಾರೆ ಖರ್ಚು ಕಡಿಮೆ ಜತೆಗೆ ಸಾವಯವವಾಗಿ ಬೆಳೆಯುವ ಸಮಗ್ರ ಕೃಷಿ ಪದ್ಧತಿ ಮಾದರಿಯಾಗಿದೆ. ಇದನ್ನು ಇತರ ರೈತರು ಅನುಕರಿಸಿದರೆ ಕಡಿಮೆ ಖರ್ಚಿನ ಜತೆಗೆ ಆರೋಗ್ಯಕ್ಕೆ ಉತ್ತಮವಾದ ಕೃಷಿ ಉತ್ಪನ್ನಗಳನ್ನು ಬೆಳೆಯಬಹುದಾಗಿದೆ. ಆಸಕ್ತ ರೈತರು ಶರಣಗೌಡ ಪಾಟೀಲ್ ಅವರನ್ನು ಮೊ. 9483364333 ಸಂಪರ್ಕಿಸಬಹುದು.
ಕೃಷಿಯಲ್ಲಿಂದು ಸಾರಾಯನಿಕ ಗೊಬ್ಬರ ಹಾಗೂ ಇತರೆ ಕ್ರಿಮಿನಾಶಕಗಳ ಬಳಕೆ ಮೀತಿ ಮೀರುತ್ತಿದೆ. ಎಲ್ಲದಕ್ಕೂ ಔಷಧ ಸಿಂಪಡಿಸುವ ಪರಿಸ್ಥಿತಿ ನಿರ್ಮಾಣವನ್ನು ನಾವು ಮಾಡಿಕೊಂಡಿದ್ದೇವೆ. ವ್ಯಾಪಾರ ದೃಷ್ಟಿಗಿಂತ ಆರೋಗ್ಯದ ಕಡೆ ಒಲವು ತೋರುವುದು ಅಗತ್ಯವಾಗಿದೆ. ನಾವು ಮತ್ತೆ ಶೂನ್ಯ ಬಂಡವಾಳ ಕೃಷಿಯತ್ತ ಹೆಜ್ಜೆ ಹಾಕುವುದೇ ಅನಿವಾರ್ಯವಾಗುತ್ತದೆ.
ಶರಣಗೌಡ ಪಾಟೀಲ್,
ಪ್ರಗತಿಪರ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bajpe: ಹೆಜ್ಜೇನು ಕಡಿತದಿಂದ ದಿನಪತ್ರಿಕೆ ವಿತರಕ ಸಾವು
BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು
Adani ವಿದ್ಯುತ್ ಖರೀದಿ ಅಕ್ರಮ: ಆರೋಪ ತಳ್ಳಿ ಹಾಕಿದ ಜಗನ್ ರೆಡ್ಡಿ
Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ
IFFI 2024; ಟಾಕ್ಸಿಕ್ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್ ಮಸ್ಸೆಗೆ ವಾರ್ಷಿಕ ಪುರಸ್ಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.